Advertisements

ಇಡ್ಲಿ ಮಾಡಿದ್ದು ಮಿಕ್ಕಿದಿಯಾ! ಮಿಕ್ಕಿರುವ ಇಡ್ಲಿಯಿಂದ ಮಂಚೂರಿಯನ್ ಮಾಡಬಹುದು.. ಹೇಗೆ ನೋಡಿ..

Aduge

ಪ್ರಿಯ ಓದುಗರೆ ನಾವು ಪ್ರತಿಯೊಂದನ್ನು ಇದೀಗ ಮೊಬೈಲ್ ನ ಯೂಟ್ಯೂಬಿನಲ್ಲಿ ಕಲಿಯುತ್ತಿದ್ದೇವೆ. ಇದೀಗ ಹೊಲಿಗೆ, ಶಿಕ್ಷಣ,ಅಡುಗೆ, ಹೊಸಹೊಸ ಕೋರ್ಸ್ಗಳನ್ನು ನಾವು ಎಲ್ಲಿಯೂ ಬೇರೆ ಕಡೆ ಹೋಗಿ ಬಾರಿ ದುಡ್ಡು ಕೊಟ್ಟು ಕಲಿಯುವ ಅಗತ್ಯವಿಲ್ಲ.ಎಲ್ಲವೂ ಕೈಬೆರಳಲ್ಲಿ ಕಲಿಯಬಹುದು. ಇದನ್ನು ಯಾಕೆ ಹೇಳಿದೆ ಎಂದರೆ ನಮಗೆ ಕೆಲವೊಮ್ಮೆ ಸಣ್ಣ ಸಣ್ಣವಿಚಾರಗಳು ನೆನಪಾಗುವುದಿಲ್ಲ. ಕೆಲವೊಮ್ಮೆ ತಿಳಿಯುವುದಿಲ್ಲ. ಆಗ ನಾವು ಫೋನ್ನಲ್ಲಿ ಓದಿ ಅಥವಾ ಯೂಟ್ಯೂಬ್ನಲ್ಲಿ ನೋಡಿ ಸುಲಬವಾಗಿ ಕಲಿಯಬಹುದಾಗಿದೆ. ಈಗ ಹೊಸದಾಗಿ ಏನನ್ನು ಹೇಳುತ್ತಿದ್ದಾರೆ ಅಂತೀರಾ? ಅದೇ ಕಣ್ರೀ, ಮನೆಯಲ್ಲಿ ರಾತ್ರಿ ಅಡಿಗೆ ಉಳಿದರೆ, ಬೆಳಗ್ಗೆ ತಿಂಡಿ ಉಳಿದರೆ ಅದನ್ನು ಚೆಲ್ಲದೇ ಮತ್ತೆ ಹೇಗೆ ಹೊಸ ಖಾದ್ಯವಾಗಿ ಬಳಸಬಹುದು ಎಂದು.
ಹೌದು ಈಗ ಇಡ್ಲಿ ಉಳಿದಾಗ ಅದರಿಂದ ಸ್ಪೈಸಿ ಮಂಚೂರಿಯನ್ ಮಾಡುವುದು ಹೇಗೆ? ಈ ಚಳಿಗಾಲದಲ್ಲಿ ಏನೇ ಆದ್ರು ಅದನ್ನೂ ಬಿಸಿ ಬಿಸಿಯಾಗಿ ಸೇವಿಸಬೇಕು. ಒಮ್ಮೊಮ್ಮೆ ಬೆಳಗ್ಗೆ ಮಾಡಿದ ಇಡ್ಲಿ ಮಿಕ್ಕಿ ರುತ್ತದೆ. ಅದನ್ನು ಮತ್ತೆ ಹೊಸ ಡಿಶ್ ಮಾಡಿ ಸವಿಯಬಹುದು.

[widget id=”custom_html-3″]

Advertisements

ಅದಕ್ಕೆ ಮೊದಲು ಏನೇನು ಬೇಕು ಅಂತ ಹೇಳ್ತೀವಿ ರೆಡಿ ಮಾಡಿಕೊಳ್ಳಿ. ಇದೀಗ 5 ಇಡ್ಲಿಗೆ ಆಗುವ ಅಳತೆ ನಾವು ಹೇಳ್ತೀವಿ.ನೀವು ಬೇಕಾದರೆ ಅದಕ್ಕೂ ಹೆಚ್ಚು ಇಡ್ಲಿಗಳನ್ನು ಬಳಸಬಹುದು. 5 ಇಡ್ಲಿ, ಅರ್ಧ ಕಪ್ ಮೈದಾ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್ ರುಚಿಗೆ ತಕ್ಕಷ್ಟು ಉಪ್ಪು ಒಂದು ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕರಿಮೆಣಸಿನ ಹುಡಿ, ಸೋಯಾ ಸಾಸ್ ಸ್ವಲ್ಪ, ಹುರಿಯಲು ಎಣ್ಣೆ. ಅರ್ಧ ಈರುಳ್ಳಿ, ಶುಂಠಿ ಸ್ಪಲ್ವ, ಬೆಳ್ಳುಳ್ಳಿ 3, 4 ಎಸಳುಗಳು. ಲವಂಗ 2, ಕ್ಯಾಪ್ಸಿಕಂ ಅರ್ಧ, ಸ್ಪ್ರಿಂಗ್ ಆನಿಯನ್ ಕಾಲು ಕಪ್, ಟೊಮೆಟೊ ಸಾಸ್ ಒಂದು ಚಮಚ, ಚಿಲ್ಲಿ ಸಾಸ್ 2 ಚಮಚ, ವಿನೆಗರ್ 2 ಚಮಚ, ಇನ್ನೂ ಇದನ್ನ ಹೇಗೆ ಮಾಡೋದು ಅಂತ ಹೇಳತೀವಿ ಇದನ್ನು ನೀವು ಮಾಡಿ ಟೆಸ್ಟ್ ನೋಡಿ. ಮೊದಲಿಗೆ ಇಡ್ಲಿಗಳನ್ನು 4 ತುಂಡುಗಳನ್ನಾಗಿ ಮಾಡಿಕೊಳ್ಳಿ. ಈಗ ಒಂದು ದೊಡ್ಡ ಪಾತ್ರಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು, ಮೆಣಸಿನ ಪುಡಿ, ಕರಿಮೆಣಸಿನ ಹುಡಿ ಮತ್ತು ಸೋಯಾ ಸಾಸ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕೈಯಿಂದಲೇ ಕಲಸಿ. ಹಿಟ್ಟು ನಯವಾಗಿರಲಿ. ಕೈಯಿಂದ ಹಿಟ್ಟು ಬೀಳುವಷ್ಟು ತೆಳ್ಳಗಿರಬೇಕು.

[widget id=”custom_html-3″]

ನಂತರ ಇಡ್ಲಿ ತುಂಡುಗಳನ್ನು ಈ ಕಲಸಿದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ. ಗೋಬಿ ಮಂಚೂರಿಯ ಹಾಗೆ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಬೇಕು. ನಂತರ ಒಂದು ದೊಡ್ಡ ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ಹೆಚ್ಚಿಟ್ಟ ಈರುಳ್ಳಿಯನ್ನು ಮೊದಲು ಪ್ರೈ ಮಾಡಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ. ತದ ನಂತ್ರ ಕ್ಯಾಪ್ಸಿಕಂ ಹಾಕಿ. ಟೊಮೆಟೊ ಸಾಸ್, ಚಿಲ್ಲಿ ಸಾಸ್, ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ಸ್ವಲ್ಪ ಹುರಿಯಬೇಕು. ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ, ಮತ್ತೆ ಒಂದು ನಿಮಿಷ ಬೇಯಿಸಿ. ಈಗ ಹುರಿದ ತೆಗೆದಿಟ್ಟುಕೊಂಡ ಇಡ್ಲಿಗಳನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸ್ವಲ್ಪ ಕ’ತ್ತ’ರಿಸಿದ ಸ್ಪ್ರಿಂಗ್ ಆನಿಯನ್ ಉದುರಿಸಿದರೆ ಇಡ್ಲಿ ಮಂಚೂರಿ ಸವಿಯಲು ರೆಡಿ ಆಗಿದೆ. ಹೀಗೆ ಒಮ್ಮೆ ಮಾಡಿ ತಿನ್ನಿಸಿ. ತದನಂತರ ಮಕ್ಕಳು ಕೂಡಾ ಇದರ ರುಚಿಯನ್ನು ಮರೆಯದೆ ಮತ್ತೆ ಮತ್ತೆ ಈ ಮಂಚೂರಿಯನ್ನು ಕೇಳುತ್ತಾರೆ. ಅಷ್ಟೊಂದು ಸ್ಪೈಸಿಯಾಗಿ ಹಾಗೂ ಟೆಸ್ಟ್ ಆಗಿರುತ್ತದೆ.ನೀವು ಒಮ್ಮೆ ಟ್ರೈ ಮಾಡಿ, ಈ ಟೆಸ್ಟ್ ನಾ ಎಂಜಾಯ್ ಮಾಡಿ.

[widget id=”custom_html-3″]