ನಮಸ್ತೆ ಸ್ನೇಹಿತರೆ. ಇತ್ತೀಚಿನ ದಿನಗಳಲ್ಲಿ ಕೆಟ್ಟ, ಮದ್ದಿನ ಹೆಚ್ಚಾಗಿದೆ, ಇದು ಈಗ ಸ್ಯಾಂಡಲ್ವುಡ್ ವರೆಗೂ ಹಬ್ಬಿಕೊಂಡಿದೆ ಅಷ್ಟರ ಮಟ್ಟಿಗೆ ಈಗ ಬೆಳೆದಿದೆ. ಇನ್ನೂ ಲಂಕೇಶ್ ಅವರು ತಾವು ಹೇಳಿದ ಮಾತಿನಂತೆ ನಡೆದು ಕೊಂಡಿದ್ದಾರೆ. ಹೌದು ಸ್ನೇಹಿತರೆ ಕೆಟ್ಟ ಮದ್ದಿನ ವಿಚಾರಣೆಯಲ್ಲಿ ಸ್ಯಾಂಡಲ್ವುಡ್ ನಲ್ಲಿ ಈಗ ಬಿರುಗಾಳಿ ಎದ್ದಿದೆ ಇದರ ಬಗ್ಗೆ ನನ್ನ ಅತ್ತಿರ ಮಾಹಿತಿ ಇದೆ ನನಗೆ ಪೊಲೀಸ್ ಸಹಕಾರ ಇದ್ದರೆ ನಾನು ಇದರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಲಂಕೇಶ್ ಹೇಳಿದ್ದರು. ಇನ್ನೂ ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ತನಿಖೆಗೆ ಹಾಜರಾಗುವಂತೆ ತಿಳಿಸಿದ್ದರು.

ಅದರಂತರೆಯೇ ನೆನ್ನೆ ಇಂದ್ರಜಿತ್ ಲಂಕೇಶ್ ಅವರು ಕೆಲವು ಫೋಟೋಗಳು, ವಿಡಿಯೋಗಳ ಡಾಕ್ಯುಮೆಂಟ್ ಸಮೇತ ಪೋಲೀಸರ ಮುಂದೆ ತಮ್ಮ ಎಲ್ಲಾ ಮಾಹಿತಿಯನ್ನು ನೀಡಲು ಹಾಜರಾಗಿದ್ದಾರೆ. ಇನ್ನು ಸಿಸಿಬಿ ಪೋಲೀಸರ ಕೈ ಸೇರಿದ ನಟ ನಟಿಯರ ಪಟ್ಟಿ, ಸತತವಾಗಿ ಐದು ಗಂಟೆಗಳ ಕಾಲ ಇಂದ್ರಜಿತ್ ಹಾಗೂ ಪೊಲೀಸರ ನಡುವೆ ವಿಚಾರಣೇ ನಡೆದಿದೆ. ಇನ್ನೂ ಈ ವಿಚಾರಣೆಯಲ್ಲಿ ಇಂದ್ರಜಿತ್ ಲಂಕೇಶ್ ಅವರು ತಮಗೆ ತಿಳಿದಿರುವ ಕೆಲವೊಂದು ವಿಡಿಯೋಗಳು ಹಾಗು ಇನ್ನು ಕೆಲವು ಸಾಕ್ಷಿ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ಮುಗಿದ ನಂತರ ಇಂದ್ರಜಿತ್ ಲಂಕೇಶ್ ಅವರು ಮಾಧ್ಯಮದ ಮುಂದೆ ಬಂದು ಮಾತಾಡಿದ್ದಾರೆ.
ಸಂಪೂರ್ಣವಾಗಿ ನನಗೆ ಏನು ಗೊತ್ತಿದೆಯೋ ನಾನು ಏನು ಹೇಳಿದ್ನೋ ಅದಕ್ಕೆ ಬದ್ಧನಾಗಿದೀನಿ, ಎಲ್ಲಾ ಸಾಕ್ಷಿ ಆಧಾರಗಳನ್ನು ನಾನು ಅವರಿಗೆ ಮಾಹಿತಿ ನೀಡಿದ್ದೇನೆ. ಈ ವಿಚಾರವನ್ನು ನಾನು ಮಾಧ್ಯಮದ ಮುಂದೆ ಬಹಿರಂಗ ಪಡಿಸುವುದಿಲ್ಲ ಪೊಲೀಸರಿಗೆ ಮಾಹಿತಿಯನ್ನು ಕೊಟ್ಟಿದ್ದೇನೆ ಅವರು ಇದಕ್ಕೆ ಏನು ಮಾಡಬೇಕು ಯಾವರೀತಿ ಆಕ್ಷನ್ ತಗೆದುಕೊಳ್ಳಬೇಕು ತಗೆದುಕೊಳ್ಳುತ್ತಾರೆ. ಸಮಾಜದಲ್ಲಿ ಒಂದು ಶಾಲೆಯ ಮಕ್ಕಳು ಅವರೆಲ್ಲರೂ ಕೂಡ ಕೆ”ಟ್ಟ ಮ”ದ್ದಿನ ಚ”ಟಕ್ಕೇ ಹೋಳಾಗಾಗುತ್ತಿದ್ದಾರೆ ಯಾಕೆ ಅಂದರೇ ಇಲ್ಲಿ ಕೆಲವರು ನೆನ್ನೆ ಮೊನ್ನೆ ಬಂದಿರುವ ನಟರು ಕೆ”ಟ್ಟ ಮ”ದ್ದಿನ ಬ್ರಾಂಡ್ ಅಂಬಾಸಿಟರ್ ಹಾಗಿ ಇದ್ರೂ ಅದಕ್ಕೋಸ್ಕರ ನಾನು ಏನು ತಿಳಿಸ ಬೇಕು ನಾನು ತಿಳಿಸಿದ್ದೇನೆ.

ವಯಕ್ತಿಕವಾಗಿ ನಾನು ನಿಂದನೆ ಮಾಡುವ ಉದ್ದೇಶ ನನಗಿಲ್ಲ. ಮುಂದಿನ ಮಕ್ಕಳಿಗೆ ಹಾಗು ಮುಂದಿನ ಪೀಳಿಗೆ ಯುವಕರಿಗೆ ಎಷ್ಟು ಒಳ್ಳೆಯದಾಗುತ್ತೋ ಆ ಕರ್ತ್ಯವನ್ನು ಮಾಡಿದ್ದೇನೆ ಎಂದಿದ್ದಾರೆ. ನನಗೆ ಗೊತ್ತಿರುವ ಹಾಗೆ ಹತ್ತರಿಂದ ಹದಿನೈದು ನಟರ ಹೆಸರುಗಳನ್ನೂ ಕೊಟ್ಟಿದ್ದೇನೆ ಕೆಲವೇ ದಿನಗಳಲ್ಲಿ ಪೊಲೀಸರೇ ಅವರ ಹೆಸರುಗಳನ್ನು ತಿಳಿಸುತ್ತಾರೆ. ಸಾಕ್ಷಿ ಸಮೇತ ಎಲ್ಲರೂ ಬಹಿರಂಗ ವಾಗುತ್ತಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪೊಲೀಸರು ಇದನ್ನು ಮುಂದಿನ ದಿನಗಳಲ್ಲಿ ನಟ ನಟಿಯರ ಮುಖವಾಡವನ್ನು ಬಯಲು ಮಾಡಲಿದ್ದು ಮುಂದಿನ ದಿನಗಳಲ್ಲಿ ಯಾರು ಕೂಡ ಈ ಕೆಟ್ಟ ಕೆಲಸಕ್ಕೇ ಕೈ ಹಾಗದಿರಲಿ. ಪೋಷಕರು ಸಹ ಇದನ್ನು ಗಮನದ್ದಲ್ಲಿಟ್ಟು ಕೊಂಡು ಈ ನಿಮ್ಮ ಮಕ್ಕಳ ಮೇಲೆ ನಿಗಾವಹಿಸಿ.