Advertisements

ದೇವಸ್ತಾನಕ್ಕೆ ಬಂದಾಗಲೆಲ್ಲ ಭಿಕ್ಷುಕನಿಗೆ ಹಣ ಕೊಡುತ್ತಿದ್ದ ಯುವಕ.. ಆದರೆ ಒಂದು ದಿನ ಇವರಿಬ್ಬರ ನಡುವೆ ನಡೆದ ಘಟನೆ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಒಂದು ಊರಿನಲ್ಲಿ ಒಂದು ದೇವಸ್ಥಾನದ ಮುಂದೆ ಕುರುಡ ಭಿಕ್ಷುಕ ಒಂದು ಮರದ ಕೆಳೆಗೆ ಕೂತು ಭಿಕ್ಷೆ ಬೇಡುತ್ತಾ ಜೀವನವನ್ನ ನಡೆಸುತ್ತಿದ್ದ. ಪ್ರತಿದಿನ ಒಬ್ಬ ಭಕ್ತ ದೇವಸ್ಥಾನಕ್ಕೆ ಬೇಟಿಕೊಟ್ಟು ಹಿಂದಿರುಗುವಾಗ ಭಿಕ್ಷುಕನ ತಟ್ಟೆಗೆ ಒಂದು‌ ರೂಪಾಯಿ ಹಾಕುತ್ತಿದ್ದ.. ಕಾಲ ಕಳೆದಂತೆ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಕೂಡ ಬೆಳೆಯಿತು‌. ಭಿಕ್ಷುಕ ವರ್ಷಗಳು ಕಳೆದಂತೆ ವೃದ್ಧನಾದ.. ನಂತರ ಒಂದು ಕೋರಿಕೆಯನ್ನ ಆ ಭಕ್ತನ ಮುಂದೆ ಇಡುತ್ತಾನೆ. ಅದೇನೆಂದರೆ ನಾನು ಸ’ತ್ತು ಹೋದ ಮೇಲೆ ನಾನು ಕೂತಿರುವ ಈ ಮರದ ಕೆಳಗೆ ನನ್ನ ದೇಹವನ್ನು ಇಟ್ಟು ಮಣ್ಣು ಮಾಡಬೇಕೆಂದು ಕೇಳಿಕೊಂಡ.

Advertisements

ಅದಕ್ಕೆ ಆ ಹುಡುಗ ಕೂಡ ಒಪ್ಪಿಗೆ ಕೊಟ್ಟ.. ಆ ಸಮಯ ಬಂದೇ ಬಿಡುತ್ತದೆ. ಭಿಕ್ಷುಕನನ್ನು ಮಣ್ಣು ಮಾಡಲು ಆತನು ಕೂರುತಿದ್ದ ಜಾಗದಲ್ಲಿ ಗುಂಡಿ ತೋಡಲು ಶುರುಮಾಡಿದ ಅಲ್ಲಿ ಅವನಿಗೆ ಒಂದು ಮಡಿಕೆಯಷ್ಟು ಬಂಗಾರದ ನಿಧಿ ಸಿಗುತ್ತದೆ. ಅದನ್ನು ಭಕ್ತ ಮನೆಗೆ ತೆಗೆದುಕೊಂಡು ಹೋದ.. ಇನ್ನೂ ಭಿಕ್ಷುಕ ಸ್ವರ್ಗಕ್ಕೆ ಹೋದ. ಆಗ ಅವನಿಗೆ ಈ ವಿಷಯ ತಿಳಿಯುತ್ತದೆ. ಅದಕ್ಕೆ ಸಂತೋಷ ಪಟ್ಟ.. ಒಂದು ಸಂದೇಹವನ್ನ ದೇವರ ಮುಂದಿಟ್ಟ ಅದೇನೆಂದರೆ, ನನ್ನ ಜೀವನವೆಲ್ಲ ನಿಧಿಯ ಮೇಲೆ ಕೂತಿದ್ದೆ ಆದರೆ ಅದನ್ನು ಅನಭವಿಸಲಿಲ್ಲ, ಆದರೆ ಈಗ ದಾರಿಯಲ್ಲಿ ಹೋಗುವ ದಾಸಯ್ಯನ ಪಾಲಾಯಿತು..

ಏನಯ್ಯ ನಿನ್ನ ಲೀಲೆ ಎಂದು ಪ್ರಶ್ನಿಸಿದ. ಅದಕ್ಕೆ ದೇವರು ಈ ರೀತಿ ಉತ್ತರ ಕೊಡುತ್ತಾನೆ.. ನೀನು ಜೀವನವೆಲ್ಲಾ ದೇವರ ಸನ್ನಿಧಿಯಲ್ಲಿ ಕಾಲ ಕಳೆದೆ ಅದಕ್ಕೆ ನೀನು ಸ್ವರ್ಗಕ್ಕೆ ಕಾಲಿಟ್ಟೆ. ಆದರೆ ಆ ಹುಡುಗ ದೇವರೆ ಸೇವೆ ಮಾಡುತ್ತಾ ನಿನ್ನಲ್ಲಿ ಏನು ಕೂಡ ಅಪೇಕ್ಷೆ ಪಡೆಯದೆ ಹಾಗೂ ನಿನಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದ, ನಿನಗೆ ಕೊಟ್ಟ ಮಾತನ್ನು ಕೂಡ ಉಳಿಸಿಕೊಂಡ ಅದಕ್ಕೆ ಅವನಿಗೆ ಸಿರಿ ಸಂಪತ್ತು ಲಭಿಸಿದೆ ಎಂದು ದೇವರು ಉತ್ತರಿಸಿದ. ಪ್ರತಿಯೊಬ್ಬರು ಕೂಡ ಏನು ಅಪೇಕ್ಷೆ ಪಡೆಯದೆ ಸಹಾಯ ಮಾಡಿದರೆ ಅದು ಮುಂದೊಂದು ದಿನ ಸುಖ ಸಂಪತ್ತಿನ ರೂಪದಲ್ಲಿ ಅವರನ್ನ ಮತ್ತೆ ಹುಡುಕಿಕೊಂಡು ಬಂದೇ ಬರುತ್ತದೆ..