ಭಾರತದ ಗಡಿಯ ಪೂರ್ವ ಲಡಾಕ್ ನಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಚೀನಾ ಮಾಡಿರುವ ಕುತಂತ್ರಗಳು ಒಂದೊಂದಲ್ಲ. ಹೌದು, ಚೀನಾ ಸೈನಿಕರು ಭಾರತದ ಯೋಧರ ಜತೆ ಮಾಡಿದ ಸಂಘರ್ಷದಲ್ಲಿ ಮಡಿದ ಕುತಂತ್ರಗಳು ಈಗ ಜಗತ್ತಿನ ಮುಂದೆ ಬಹಿರಂಗವಾಗುತ್ತಿವೆ. ಹೌದು ಭಾರತ ಹಾಗೂ ಚೀನಾ ಯೋಧರ ನಡುವೆ ಸಂಘರ್ಷ ನಡೆಯುವುದಕ್ಕೂ ಮುನ್ನ ಮಾರ್ಷಲ್ ಆಟ್ಸ್ರ್ ಫೈಟರ್ಗಳನ್ನ ಚೀನಾ ಗಡಿ ರೇಖೆಯ ಬಳಿ ಕರೆಸಿಕೊಂಡಿತ್ತು ಎಂಬುದನ್ನ ಈಗ ಸ್ವತಃ ಚೀನಾ ಪತ್ರಿಕೆಯೊಂದು ಬಹಿರಂಗ ಮಾಡಿದೆ.

ಇನ್ನು ಗಲ್ವಾನ್ ಕಣಿವೆ ದೊಡ್ಡ ದೊಡ್ಡ ಕಂದಕಗಳಿಂದ ಕೂಡಿದೆ. ಜೊತೆಗೆ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರು ಶಸ್ತಾಸ್ತ್ರಗಳನ್ನ ಬಳಸಬಾರದು ಎಂಬ ಒಪ್ಪಂದ ಕೂಡ ಇದೆ. ಈ ಹಿನ್ನಲೆಯಲ್ಲೇ ಮಾರ್ಷಲ್ ಆಟ್ಸ್ರ್ ಫೈಟರ್ ಗಳ ಜೊತೆಗೆ ಪರ್ವತಾರೋಹಿಗಳ ತಂಡವನ್ನ ಚೀನಾ ಕರೆಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಈಗ ಭಾರತ ಕೂಡ, ಚೀನಾದ ಮಾರ್ಷಲ್ ಆಟ್ಸ್ರ್ ಫೈಟರ್ ಗಳಿಗೆ ಸಜ್ಜು ಹೊಡೆಯುವ ಸಲುವಾಗಿ, ಭಾರತೀಯ ಸೇನಾಪಡೆಯ ವಿಶೇಷ ಕಾರ್ಯಪಡೆಯಾಗಿರುವ, ಘಾತಕ್ ಕಮ್ಯಾಂಡೋಗಳ ಪಡೆಯನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಿದೆ ಎಂದು ಹೇಳಲಾಗಿದೆ.
ಇನ್ನು ಈ ಘಾತಕ್ ಕಮ್ಯಾಂಡೋಗಳ ಒಂದು ಪಡೆಯಲ್ಲಿ ೨೨ ಕಮ್ಯಾಂಡೋಗಳಿದ್ದು, ಇಬ್ಬರು ಅಧಿಕಾರಿ ಸೇರಿದಂತೆ ಒಬ್ಬರು JCO ಇರುತ್ತಾರೆ ಎಂದು ಹೇಳಲಾಗಿದೆ. ಇನ್ನು ಇದೆ ರೀತಿಯ ೪೦ ರಿಂದ ೪೫ ಜನರ ಪಡೆಗಳು ಸದಾ ಸಿದ್ಧವಾಗಿರುತ್ತವೆ ಎಂದು ಹೇಳಲಾಗಿದೆ. ೪೩ ದಿನಗಳ ವಿಶೇಷ ತರಭೇತಿಯನ್ನ ಪಡೆಯುವ ಈ ಯೋಧರು ೩೦ ಕೆಜಿ ಗಿಂತ ಹೆಚ್ಚು ಭಾರ ಒತ್ತು ೪೦ ಕಿಮೀಗಳ ದೂರವನ್ನ ಓಡುವ ಕಠಿಣ ಅಭ್ಯಾಸವನ್ನ ಈ ಯೋಧರಿಗೆ ನೀಡಲಾಗಿರುತ್ತದೆ.ಇವರು ಮುಷ್ಠಿ ಯುದ್ಧ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ ಎಂದು ಹೇಳಲಾಗಿದೆ.