ಪದೇ ಪದೇ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ ಕುತಂತ್ರಿ ಚೀನಾ. ಇನ್ನು ಮೊನ್ನೆ ತಾನೇ ಲಡಾಕ್ ನ ಗ್ವಾಲಾನ್ ಪ್ರದೇಶದಲ್ಲಿ ನಮ್ಮ ಯೋಧರು ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಚೀನೀ ಸೈನಿಕರ ಕುತಂತ್ರದಿಂದ ನಮ್ಮ 20 ವೀರ ಯೋಧರು ಬಲಿದಾನ ಮಾಡಬೇಕಾಗಿ ಬಂತು. ಇನ್ನು ಇದೀಗ ಭಾರತ ಹಾಗೂ ಚೀನಾ ಗಡಿಯಲ್ಲಿ ಎರಡು ದೇಶಗಳ ಹೆಚ್ಚಿನ ಸೈನಿಕರು ನಿಯೋಜನೆ ಆಗಿದೆ. ಇನ್ನು ಭಾರತ ಸರ್ಕಾರ ಕೂಡ ಸೇನೆಗೆ ಸಂಪೂರ್ಣ ಅಧಿಕಾರವನ್ನ ಕೊಟ್ಟಿದ್ದು, ಕೇಂದ್ರ ಸರ್ಕಾರದ ಪರ್ಮಿಷನ್ ಗೋಸ್ಕರಕಾದು ಕುಳಿತುಕೊಳ್ಳುವ ಅವಶ್ಯಕೆತೆ ಈಗ ಭಾರತೀಯ ಸೇನೆಗೆ ಇಲ್ಲ.

ಇನ್ನು ಗಡಿಯಲ್ಲೂ ಕೂಡ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇನ್ನು ಈ ಸಂಘರ್ಷವನ್ನ ಗಮನಿಸಿದ್ರೆ ಇದು ಚೀನಿಯರ ಪೂರ್ವನಿಯೋಜಿತ ಕೃತ್ಯವಾಗಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಈಗ ಇದನ್ನೆಲ್ಲಾ ಗಮನಿಸುತ್ತಿರುವ ಅಮೆರಿಕಾ ಪದೇ ಪದೇ ಭಾರತದ ಗಡಿಯಲ್ಲಿ ಚೀನಾ ಕುತಂತ್ರ ಮಾಡುತ್ತಿರುವುದೇಕೆ ಎಂಬುದಕ್ಕೆ ಕಾರಣವನ್ನ ನೀಡಿದೆ.ಹೌದು, ನಮಗೆಲ್ಲಾ ಗೊತ್ತಿರುವಂತೆ ಈಗ ಇಡೀ ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ಸೋಂಕು ರಣಕೇಕೆ ಹಾಕುತ್ತಿದೆ.

ಇನ್ನು ಈಗ ಜಗತ್ತು ಈ ರೀತಿ ಅಪಾಯಕ್ಕೆ ಸಿಲುಕಿರುವ ಕಾರಣ ಚೀನಾ. ಇನ್ನು ಇದೆ ಕಾರಣದಿಂದ ಅಮೆರಿಕಾ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ಚೀನಾ ಮೇಲೆ ಉರಿದುಬಿದ್ದಿವೆ. ಇನ್ನು ಕೊರೋನಾದಿಂದಾಗಿ ಇಡೀ ಜಗತ್ತು ವಿಚಲಿತವಾಗಿದೆ. ಇದರ ಲಾಭ ಪಡೆದುಕೊಳ್ಳುವ ಸಲುವಾಗಿಯೇ ಚೀನಾ ಭಾರತದ ಗಡಿಯಲ್ಲಿ ಕುತಂತ್ರ ಮಾಡುತ್ತಿದೆ ಎಂದು ಅಮೆರಿಕಾ ವಿದೇಶಾಂಗ ಇಲಾಖೆ ಹೇಳಿದೆ. ಇಡೀ ಜಗತ್ತು ಕೊರೋನಾ ವಿರುದ್ದದ ಹೋರಾಟದಲ್ಲಿದ್ದರೆ, ಇದರ ಲಾಭವನ್ನ ಪಡೆದುಕೊಳ್ಳುವ ಸಲುವಾಗಿ ಈ ರೀತಿಯ ಕುತಂತ್ರವನ್ನ ಚೀನಾ ಮಾಡುತ್ತಿದೆ ಎಂದು ಅಮೆರಿಕಾ ಹೇಳಿದೆ.