Advertisements

ಭಾರತದ ಕೊನೆಯ ಹಳ್ಳಿ.. ಇಲ್ಲಿ ಸ್ವರ್ಗದ ಬಾಗಿಲು ಹೇಗಿದೆ ಗೊತ್ತಾ?

Kannada Mahiti

ಭಾರತ ಕೃಷಿ ಪ್ರಧಾನವಾಗಿದ್ದು, ಗ್ರಾಮಗಳನ್ನೇ ಹೆಚ್ಚಾಗಿ ಒಳಗೊಂಡಿರುವ ರಾಷ್ಟ್ರ. ವಿವಿಧತೆಯನ್ನು ಒಳಗೊಂಡಿದ್ದರೂ ಸಹ ಸಹಬಾಳ್ವೆಯಿಂದ ಜೀವಿಸುತ್ತಿರುವ ಏಕೈಕ ರಾಷ್ಟ್ರ. ಇನ್ನು ಈ ರಾಷ್ಟ್ರದ ಕೊನೆಯ ಗ್ರಾಮ ಯಾವುದು? ಇದಕ್ಕೆ ಯಾಕೆ ಭಾರತದ ಕೊನೆಯಹಳ್ಳಿ ಎಂದು ಕರೆಯುವರು? ಏನು ಇದರ ವಿಶೇಷತೆ? ಅಂತ ಇವತ್ತು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸುತ್ತೇವೆ. ಭಾರತದ ಸುತ್ತಲು ಗಡಿಯಲ್ಲಿ ಗ್ರಾಮಗಳು ಇದ್ದರೂ ಸಹ ಇದನ್ನೇ ಯಾಕೆ ಭಾರತದ ಕೊನೆಯ ಹಳ್ಳಿ ಎಂದು ಕರೆದರು ಎಂದು ನೋಡುವುದಾದರೆ, ಇದು ಪುರಾಣಕಾಲದಲ್ಲಿ ಪಾಂಡವರಿಗೆ ಸ್ವರ್ಗಕ್ಕೆ ಹೋಗಲು ದಾರಿ ಮಾಡಿದಂತ ಗ್ರಾಮ. ವ್ಯಾಸ ಮುನಿಗಳು ಇದೆ ಗ್ರಾಮದ ಗುಹೆಯಲ್ಲಿ ಕುಳಿತು ಗಣೇಶನಿಂದ ‘ಮಹಾಭಾರತ’ ಗ್ರಂಥ ರಚಿಸಿದರು ಎಂದು ಇತಿಹಾಸವಿದೆ. ಈಗಲೂ ಈ ಗುಹೆಯನ್ನು ವ್ಯಾಸರಾಯರ ಗುಹೆ ಎಂದೇ ಕರೆಯುವರು.

Advertisements

ಈ ಗ್ರಾಮದಲ್ಲಿ ಈಗಲೂ 40ರಿಂದ 50 ಮನೆಗಳು ಮಾತ್ರ ಇವೆ. ಇವುಗಳಲ್ಲಿ 100ರಿಂದ 120 ಜನರು ಮಾತ್ರ ವಾಸವಾಗಿರುತ್ತಾರೆ. ಇವರಲ್ಲಿ ಮಹಿಳೆಯರೇ ಹೆಚ್ಚು. ಪುರುಷರು ಕೆಲಸಕ್ಕೆಂದು ಚೆಮ್ಮುಲಿ ಎಂಬ ಪಟ್ಟಣಕ್ಕೆ ಹೋಗುತ್ತಾರೆ. ವಾರಕ್ಕೆ ಒಮ್ಮೆ ಮಾತ್ರ ಕುಟುಂಬದೊಂದಿಗೆ ಕಾಲಕಳೆಯುತ್ತಾರೆ. ಯಾಕೆಂದರೆ ಈ ಗ್ರಾಮ ವರ್ಷದ 6 ತಿಂಗಳು ಹಿಮದಿಂದ ಕೂಡಿರುತ್ತದೆ.ಇನ್ನು 6 ತಿಂಗಳು ಮಾತ್ರ ಕೃಷಿಗೆ ಯೋಗ್ಯವಾಗಿರುತ್ತದೆ. ಆದ್ದರಿಂದ ಮಹಿಳೆಯರು ಇಲ್ಲಿ ಕೃಷಿಭೂಮಿಯನ್ನು ನೋಡಿಕೊಳ್ಳುತ್ತಾರೆ. ಚಳಿಗಾಲದಲ್ಲಿ ಎಲ್ಲರೂ ಚಮ್ಮಲಿಗೆ ಹೋಗಿ ನೆಲೆಸುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿ ಹಿಮಪಾತ ವಿರುತ್ತದೆ. ಅಷ್ಟಕ್ಕೂ ಇದು ಇರುವುದಾದರೂ ಎಲ್ಲಿ ಅಂತೀರಾ, ಇದು ಉತ್ತರಕಾಂಡ ರಾಜ್ಯದ ಚಮೋಲಿ ಪಟ್ಟಣದಲ್ಲಿ. ಈ ಗ್ರಾಮದ ಹೆಸರು ಮಾನ. ಮಾನವನ್ನು ಅಧಿಕೃತವಾಗಿ ಭಾರತದ ಕೊನೆಯ ಗ್ರಾಮ ಎಂದು ಹೇಳಲಾಗಿದ್ದು, ಇಲ್ಲಿಯ ಪ್ರತಿ ಅಂಗಡಿ ಮುಂಗಟ್ಟು ಮೇಲೆಯೂ ಭಾರತದ ಕೊನೆಯ ಹಳ್ಳಿ ಎಂದು ಬೊರ್ಡಗಳನ್ನು ಕಾಣಬಹುದಾಗಿದೆ.

ಈ ಗ್ರಾಮ ಬದ್ರಿನಾಥ ದೇವಾಲಯದಿಂದ 5 ಕಿಲೋ ಮೀಟರ್ ದೂರದಲ್ಲಿದ್ದು, ಸರಸ್ವತಿ ನದಿ ತಟದಲ್ಲಿದೆ. ಸುತ್ತಲೂ ಹಸಿರಿನಿಂದ, ಬಿಳಿಯ ಹಿಮದಿಂದ ಕಂಗೊಳಿಸುವ ಮಾನ ಗ್ರಾಮ ಪ್ರವಾಸಿಗರ ತಾಣಗಳಲ್ಲಿ ಒಂದು. ಇದು ಭಾರತ ಮತ್ತು ಚೀನಾ ದೇಶಗಳಿಂದ 14 ಕಿಲೋಮೀಟರ್ ಅಂತರದಲ್ಲಿದೆ. ಇನ್ನು ಯಾಕೆ ಇದನ್ನು ಭಾರತದ ಕೊನೆಯ ಗ್ರಾಮಯೆನ್ನುತ್ತಾರೆ ಎಂದು ನೋಡುವುದಾದರೆ, ಇದು ಭಾರತದ ಉತ್ತರದಲ್ಲಿ ಅತಿ ಎತ್ತರವಾದ ಅಂದ್ರೆ 3200ಮೀ ಎತ್ತರದಲ್ಲಿರುವ ಕೊನೆಯ ಗ್ರಾಮ ಆಗಿದೆ. ಇದು ಚೀನಾ ಮತ್ತು ಭಾರತದ ಗಡಿಯಲ್ಲಿದೆ. ಆದ್ದರಿಂದಲೇ ಇದನ್ನು ಭಾರತದ ಕೊನೆಯ ಹಳ್ಳಿ ಎಂದು ಕರೆಯುವರು. ಇನ್ನು ಎರಡು ಬೆಟ್ಟಗಳಿದ್ದವು. ಇವುಗಳ ಮಧ್ಯೆ ಬಹು ದೊಡ್ಡ ಕಂದಕವನ್ನು ದಾಟಲು ಆಗುತ್ತಿರಲಿಲ್ಲ. ಪಾಂಡವರಲ್ಲಿ ಒಬ್ಬನಾದ ಭೀಮನು ಬೃಹದಾಕಾರದ 2 ಬಂಡೆಗಳನ್ನು ಎತ್ತಿ ಈ ನದಿಯಲ್ಲಿ ಹಾಕಿದಾಗ ಕಂದಕ ಮುಚ್ಚಿ ಬೆಟ್ಟಗಳನ್ನು ದಾಟಲು ಸೇತುವೆಯಾಯಿತು.

ಈ ಸೇತುವೆಯ ಮೂಲಕ ಪಾಂಡವರು ಸ್ವರ್ಗಕ್ಕೆ ಹೋದರು ಎಂದು ಪ್ರತಿತಿ ಮತ್ತು ಇತಿಹಾಸವಿದೆ. ಇನ್ನು ಮಹರ್ಷಿ ವ್ಯಾಸರು ಇಲ್ಲಿಯ ಗುಹೆಯಲ್ಲಿ ನೆಲೆಸಿ 4 ವೇದಗಳನ್ನು ವಿಗಂಡಿಸಿದರಂತೆ. ಮುಂದೆ ಗಣೇಶನಿಂದ ಮಹಾಭಾರತ ಗ್ರಂಥವನ್ನು ರಚಿಸುವಾಗ ಸರಸ್ವತಿ ನದಿಯು ಅತೀ ಜೋರಾಗಿ ಭೋರ್ಗಗರೆಯುತ್ತಾಳೆ. ಇದರಿಂದ ವಿಚಲಿತರಾದ ಮಹರ್ಷಿ ವ್ಯಾಸರು ಶಾಂತವಾಗಿ ಹರಿಯುವಂತೆ ಸರಸ್ವತಿಗೆ ಕೇಳುತ್ತಾರೆ. ವ್ಯಾಸರಾಯರ ಮಾಹಿತಿಗೆ ಸರಸ್ವತಿಯು ಬೆಲೆ ಕೊಡುವುದಿಲ್ಲ. ಆಗ ಕುಪಿತರಾದ ಮಹರ್ಷಿ ವ್ಯಾಸರು ನೀನು ಇಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ ಹರಿ ಎಂದು ಶಪಿಸಿದರಂತೆ. ಆಗಿನಿಂದ ಇಲ್ಲಿಯವರೆಗೂ ಸರಸ್ವತಿ ಎಲ್ಲಿ ಹುಟ್ಟಿದರು ಮುಂದೆ ಎಲ್ಲಿ ಹರಿಯುತ್ತಾಳೆ ಎಂದು ತಿಳಿದಿಲ್ಲ.
ವಾಸುಧಾರ ಜಲಪಾತ ಇಲ್ಲಿಯ ಇನ್ನೊಂದು ವಿಶೇಷ.

ಹೌದು ಇಲ್ಲಿಗೆ ಬರುವ ಭಕ್ತರು ಪಾಪ ಮಾಡಿ ಬಂದು ಈ ಜಲಪಾತದಲ್ಲಿ ಮಿಂದರೇ ಅವರ ಮೈ ಒದ್ದೆಯಾಗುದಿಲ್ಲವಂತೆ. ಹೀಗೆ ಹಲವಾರು ವಿಶೇಷತೆಗಳನ್ನು ಒಳಗೊಂಡ ಹಾಗೂ ಭೋಜಪತ್ರಗಳನ್ನು, ಗಿಡಮೂಲಿಕೆಗಳನ್ನು ಹೇರಳವಾಗಿ ತನ್ನ ಒಡಲಲ್ಲಿ ಅಡಗಿಸಿಕೊಂಡ ಪುಟ್ಟಗ್ರಾಮವೇ ಮಾನ. ಇದು ಭಾರತದ ಗಡಿಯಲ್ಲಿ ಇದ್ದು, ಭಾರತ ಸೈನಿಕರಿಗೆ ಬೆಂಬಲ ನೀಡುತ್ತಾ ಬಂದಿದೆ. ಸಂದರ್ಭ ಬಂದರೆ ಭಾರತ ಸೈನಿಕರೊಂದಿಗೆ ಯುದ್ಧಕ್ಕೂ ಸಿದ್ದ ಎಂದು ಹೇಳುತ್ತಾರೆ ಇಲ್ಲಿಯ ಜನರು. ಇನ್ನು ಈ ಗ್ರಾಮ ಬದ್ರಿನಾಥ ದೇವಸ್ಥಾನದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿ ಮಾತ್ರ ಇದ್ದು, ನೀವು ಈ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ತಪ್ಪದೆ ಈ ಮಾನ ಗ್ರಾಮಕ್ಕೆ ಭೇಟಿ ನೀಡಿ. ಇಲ್ಲಿಯ ಸುಂದರ ಪರಿಸರ ಸೊಬಗನ್ನು ಸವಿಯಿರಿ..