Advertisements

ನಿಮ್ಮ ಮೈಮೇಲೆ ಟ್ಯಾಟು ಇದ್ರೆ ಭಾರತೀಯ ಸೇನೆಯಲ್ಲಿ ರಿಜೆಕ್ಟ್ ಮಾಡ್ತಾರಾ ! ನೀವು ತಿಳಿಯಲೇಬೇಕಾದ ಮಾಹಿತಿ..

Kannada Mahiti

ನಮಸ್ತೇ ಸ್ನೇಹಿತರೇ, ನಮ್ಮಭಾರತೀಯ ಸೇನೆಯ ಯೋಧರು ಎಂದರೆ ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನವಾಗುತ್ತದೆ. ನಾವು ಕೂಡ ಸೈನ್ಯವನ್ನ ಸೇರಿ ದೇಶಸೇವೆ ಮಾಡಬೇಕು ಎಂದು ಲಕ್ಷಾಂತರ ಯುವಕರು ಕನಸು ಕಾಣುತ್ತಿದ್ದಾರೆ. ಆದರೆ ಭಾರತೀಯ ಸೇನೆಯ ಕೆಲವೊಂದು ನಿಯಮಗಳು ಬಹುತೇಕರಲ್ಲಿ ಗೊಂದಲಕ್ಕೆ ಕಾರಣವಾಗಿವೆ. ಹೌದು, ಯಾವುದೇ ಕೆಲಸಕ್ಕೆ ಸೇರಬೇಕಾದ್ರೆ ಅಲ್ಲಿನ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಇನ್ನು ಭಾರತೀಯ ಸೇನೆಯಲ್ಲಿ ಯೋಧನಾಗುವುದೆಂದರೆ ಕೆಲವೊಂದು ನಿಯಮಗಳನ್ನ ಪಾಲಿಸಲೇಬೇಕಾಗುತ್ತದೆ. ಆದರೆ ಸೇನೆಯಲ್ಲಿನ ಒಂದು ನಿಯಮ ಗೊಂದಲ ಉಂಟಾಗುವಂತೆ ಮಾಡಿದೆ. ಅದು ಮೈಮೇಲೆ ಹಾಕಿಸಿಕೊಳ್ಳುವ ಮಚ್ಚೆ (ಟ್ಯಾಟು).

Advertisements

ಹೌದು, ಈಗಂತೂ ಯುವಜನತೆಯಲ್ಲಿ ತಮ್ಮ ದೇಹದ ಮೇಲೆ ಎಲ್ಲೆಂದರಲ್ಲಿ ಟ್ಯಾಟು ಹಾಕಿಸಿಕೊಳ್ಳುವ ಹುಚ್ಚು ಹೆಚ್ಚಾಗಿದೆ. ಇದೆ ಕಾರಣದಿಂದಲೇ ಒಂದು ವೇಳೆ ದೇಹದ ಮೇಲೆ ಟ್ಯಾಟು ಇದ್ದರೆ ಸೇನೆಗೆ ಸೇರಿಸಿಕೊಳ್ಳುತ್ತಾರೆ ಎಂಬ ಗೊಂದಲ ಮೂಡಿಸುವ ಪ್ರಶ್ನೆ ಅನೇಕರಲ್ಲಿದೆ. ಇನ್ನು ಈಗಿನ ಯುವಜನತೆಗೆ ಕೈ ತೋಳಿನ ಭಾಗಗಲ್ಲಿ ಹೆಚ್ಚಾಗಿ ಟ್ಯಾಟು ಹಾಕಿಸಿಕೊಳ್ಳುತ್ತಾರೆ. ಹಾಗಾದ್ರೆ ಭಾರತೀಯ ಸೇನೆಯಲ್ಲಿ ಯಾವ ಭಾಗದಲ್ಲಿ ಟ್ಯಾಟು ಹಾಕೋದಕ್ಕೆ ಅವಕಾಶ ಇದೆ ಎಂದು ನೋಡುವುದಾದ್ರೆ, ನಿಮ್ಮ ಕೈನ ಎಡಗೈ ಭಾಗದ ತೋಳಿನ ಕೆಳಭಾಗದಲ್ಲಿ ಅದರಲ್ಲೂ ಚಿಕ್ಕದಾಗಿ ಕಾಣಿಸುವಂತೆ, ಟ್ಯಾಟು ಹಾಕಿಸಿಕೊಂಡಲ್ಲಿ ಸೇನೆಗೆ ಸೇರಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲಾಗಿದೆ. ಮೆಡಿಕಲಿ ಕೂಡ ನೀವು ಸೇನೆಗೆ ಸೇರಲು ಫಿಟ್ ಆಗಿರುತ್ತೀರಿ. ಇನ್ನು ಈ ನಿಯಮ ಕೇವಲ ಎಡಗೈಗೆ ಮಾತ್ರ ಸೀಮಿತವಾದದ್ದು.

ಆದರೆ ನಿಮ್ಮ ಬಲಗೈ ತೋಳಿನಲ್ಲಿ ಯಾವುದೇ ಚಿಕ್ಕ ಪುಟ್ಟ ಟ್ಯಾಟು ಕೂಡ ಇರುವಂತಿಲ್ಲ. ಜೊತೆಗೆ ನಿಮ್ಮ ಎಡಗೈ ತೋಳಿನಲ್ಲಿ ದೊಡ್ಡ ದೊಡ್ಡ ಟ್ಯಾಟುಗಳಿದ್ದರೆ ಅಥ್ವಾ ದೇಹದ ಇನ್ನಾವುದೇ ಭಾಗದಲ್ಲಿ ಟ್ಯಾಟುಗಳಿದ್ದರೆ, ನಿಮ್ಮನ್ನ ಸೇನೆಗೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಎಡಗೈ ತೋಳಿನ ಮುಷ್ಟಿ ಭಾಗದಲ್ಲಿಯೂ ಕೂಡ ಚಿಕ್ಕದಾಗಿ ನೀವು ಟ್ಯಾಟು ಹಾಕಿಸಿಕೊಳ್ಳಬಹುದಾಗಿದೆ. ಆದರೆ ನೆನಪಿರಲಿ, ನಿಮ್ಮ ಬಲಗೈನ ತೋಳಿನ ಭಾಗದಲ್ಲಿ ಯಾವುದೇ ಚಿಕ್ಕ ಪುಟ್ಟ ಟ್ಯಾಟು ಕೂಡ ಇರಬಾರದು. ಹಾಗಾದ್ರೆ ಬಲಗೈನ ತೋಳಿನ ಭಾಗದಲ್ಲಿ ಹಚ್ಚೆ ಏಕೆ ಹಾಕಿಸಿಕೊಳ್ಳುವುದಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು, ಯಾವುದೇ ಒಬ್ಬ ವ್ಯಕ್ತಿ ಭಾರತೀಯ ಸೇನೆಗೆ ಸೇರಿದಾಗ ಸೆಲ್ಲುಟ್ ಮುಖಾಂತರವೇ ಅವರಿಗೆ ಗೌರವ ಕೊಡೋದು. ಬಲಗೈ ಭಾಗದಿಂದಲೇ ಸೆಲ್ಲುಟ್ ಮಾಡುವುದು. ಇನ್ನು ಬಲಗೈನಿಂದ ಸೆಲ್ಲುಟ್ ಮಾಡುವಾಗ ಆ ಭಾಗ ಪೂರ್ತಿಯಾಗಿ ಎಲ್ಲರಿಗೂ ಕಾಣಿಸುತ್ತೆ. ಇದೆ ಕಾರಣದಿಂದಲೇ ಬಲಗೈನ ಭಾಗದಲ್ಲಿ ಯಾವುದೇ ಚಿಕ್ಕ ಪುಟ್ಟ ಹಚ್ಚೆಗಳೂ ಕೂಡ ಇರಬಾರದು ಎಂಬ ನಿಯಮ ಮಾಡಲಾಗಿದೆ.

ಇನ್ನು ಎಡಗೈ ಭಾಗದಲ್ಲಿ ಹಾಕಿಸಿಕೊಳ್ಳುವ ಚಿಕ್ಕ ಪುಟ್ಟ ಹಚ್ಚೆಗಳಿಗೂ ಕೂಡ ನಿಯಮಗಳಿವೆ. ಯಾವುದೇ ಧರ್ಮದ ಕುರಿತು ಅ’ವಮಾನ ಮಾಡುವ ಟ್ಯಾಟುಗಳನ್ನಾಗಲಿ, ತಂದೆ ತಾಯಿಯ ಹೆಸರುಗಳನ್ನಾಗಿ ಹಚ್ಚೆಗಳ ರೂಪದಲ್ಲಿ ಹಾಕಿಸಿಕೊಳ್ಳುವಂತಿಲ್ಲ. ಒಂದು ವೇಳೆ ನೀವು ಇದಕ್ಕೆ ಮೊದಲೇ ದೊಡ್ಡ ದೊಡ್ಡ ಟ್ಯಾಟುಗಳನ್ನ ನಿಮ್ಮ ಬಲಗೈ ಅಥ್ವಾ ಎಡಗೈ ತೋಳಿನಲ್ಲಿ ಹಾಕಿಸಿಕೊಂಡಿದ್ದರೆ ಅದನ್ನ ಅಳಿಸಿ ಹಾಕಿ ಸೇನೆಗೆ ಸೇರಬಹುದಾಗಿದೆ. ಇನ್ನು ಹಚ್ಚೆ ಹಾಕಿಸಿಕೊಳ್ಳುವುದು ಬುಡುಕಟ್ಟು ಜನಾಂಗದವರ ಸಂಸ್ಕೃತಿಯ ಒಂದು ಭಾಗವಾಗಿರುವ ಕಾರಣ ಅದಕ್ಕೆ ಸಂಬಂಧಪಟ್ಟ ಹಾಗೆ ದಾಖಲಾತಿಗಳನ್ನ ಸೇನೆಗೆ ನೀಡಿ ಸೇರಬಹುದಾಗಿದೆ. ಹಾಗಾಗಿ ನೀವು ಭಾರತೀಯ ಸೇನೆಗೆ ಸೇರಬೇಕು ಎಂದುಕೊಂಡಿದ್ದಲ್ಲಿ ಟ್ಯಾಟುಗಳನ್ನ ಹಾಕಿಸಿಕೊಳ್ಳುವ ಮುಂಚೆ ಒಂದು ಬಾರಿ ಯೋಚನೆ ಮಾಡಿ ಮುಂದುವರಿಯುವುದು ಉಚಿತ. ಏಕೆಂದರೆ ದೇಶ ಸೇವೆ ಮಾಡಲು ಸಿಕ್ಕ ಅವಕಾಶವನ್ನ ನೀವಾಗೇ ಕಳೆದುಕೊಳ್ಳಬೇಕಾಗುತ್ತದೆ.