Advertisements

ವಿಶ್ವ ಬೆಸ್ಟ್ ತಂಡ ರಚಿಸಿದ ಬ್ರಾಡ್ ಹಾಗ್ : ಕೋಹ್ಲಿಗಿಲ್ಲ ಅವಕಾಶ ! ಸ್ಥಾನ ಪಡೆದ 4 ಭಾರತೀಯರು ಯಾರು ಗೊತ್ತಾ?

Sports

ವಿಶ್ವ ಕ್ರಿಕೆಟ್ ನ ಯಾವುದೇ ಮಾದರಿಯ ತಂಡದಲ್ಲಾದರ ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬುದು ಅವರ ಅಭಿಮಾನಿಗಳ ಅನಿಸಿಕೆ ಆಗಿದ್ದರೆ ಅದು ತಪ್ಪು. ಹೌದು, ವಿಶ್ವದ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ನೆಚ್ಚಿನ ಬೆಸ್ಟ್ ತಂಡವನ್ನ ಹೆಸರಿಸುತ್ತಿದ್ದಾರೆ. ಈಗ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಅವರ ಕಲ್ಪನೆಯಲ್ಲಿ ಒಂದು ಬೆಸ್ಟ್ ತಂಡವನ್ನ ಹೆಸರಿಸಿದ್ದಾರೆ. ಆದರೆ ಆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಅವಕಾಶವಿಲ್ಲ ಎಂಬುದೇ ಅಚ್ಚರಿಯಾಗಿದೆ..

Advertisements

ಬ್ರಾಡ್ ಹಾಗ್ ಅವರ ಅನಿಸಿಕೆಯ ಬೆಸ್ಟ್ ತಂಡದಲ್ಲಿ ಕೊಹ್ಲಿಯನ್ನ ಹೊರತುಪಡಿಸಿ ನಾಲ್ಕು ಜನ ಭಾರತೀಯ ಆಟಗಾರರಿಗೆ ಅವರ ಕನಸಿನ ಬೆಸ್ಟ್ ತಂಡದಲ್ಲಿ ಅವಕಾಶ ನೀಡಿದ್ದಾರೆ. ಬ್ರಾಡ್ ಹಗ್ ನ ಬೆಸ್ಟ್ ತಂಡದಲ್ಲಿ ಕೇವಲ ಆಸ್ಟ್ರೇಲಿಯಾ ಹಾಗೂ ಭಾರತೀಯ ಆಟಗಾರರೇ ಹೆಚ್ಚಿದ್ದಾರೆ. ಇನ್ನು ಈ ತಂಡದ ಆರಂಭಿಕ ಆಟಗಾರರು ಕೂಡ ಭಾರತೀಯರೇ ಆಗಿದ್ದು, ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಾಯಾಂಕ್ ಅಗರವಾಲ್ ಆರಂಭಿಕ ಆಟಗಾರರಾಗಿ ಅವರ ಬೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಅಜಿಂಕ್ಯಾ ರಹಾನೆ ಕೂಡ ಈ ಬೆಸ್ಟ್ ತಂಡದಲ್ಲಿದ್ದು, ಫಾಸ್ಟ್ ಬೌಲರ್ ಮೊಹಮದ್ ಶಮಿ ಕೂಡ ಈ ತಂಡದಲ್ಲಿದ್ದಾರೆ.

ಇನ್ನುಳಿದಂತೆ ಈ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ದಕ್ಷಿಣ ಆಫ್ರಿಕಾ ತಂಡದ ಡಿ ಕಾಕ್ ಅವಕಾಶ ಪಡೆದಿದ್ದರೆ, ಪಾಕಿಸ್ತಾನದ ಬಾಬಲ್ ಅಜಂ ಮತ್ತು ನ್ಯೂಜಿಲ್ಯಾಂಡ್ ನ ನೀಲ್ ವ್ಯಾಗ್ನರ್, ಬ್ರಾಡ್ ಹಾಗ್ ಅನಿಸಿಕೆಯ ಬೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇನ್ನುಳಿದಂತೆ ಆಸೀಸ್ ಆಟಗಾರರಾದ ಸ್ಟೀವ್ ಸ್ಮಿತ್, ಮರ್ನಾಸ್ ಲ್ಯಾಬುಶೈನ್ ಬ್ಯಾಟಿಂಗ್ ವಿಭಾಗದಲ್ಲಾದರೆ, ನಥನ್ ಲಯನ್ ಮತ್ತು ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ವಿಭಾಗದಲ್ಲಿ ಅವಕಾಶ ಪಡೆದಿದ್ದಾರೆ.

ಇನ್ನು ವಿಶ್ವ ಬೆಸ್ಟ್ ತಂಡದಲ್ಲಿ ಕೊಹ್ಲಿಗೆ ಏಕೆ ಸ್ಥಾನ ಇಲ್ಲ ಎಂಬುದಕ್ಕೆ ಬ್ರಾಡ್ ಹಾಗ್ ಹೇಳಿದ್ದು ಹೀಗೆ : ನಾನು ಹೀಗಿನ ಫಾರ್ಮ್ ನ್ನ ವಿಶ್ವದ ಬೆಸ್ಟ್ ತಂಡವನ್ನ ಹೆಸರಿಸಿದ್ದೇನೆ. ಆದರೆ ವಿರಾಟ್ ಕೋಹ್ಲಿ ಕಳೆದ ೧೫ ಇನ್ನಿಂಗ್ಸ್ ಗಳಲ್ಲಿ ಕೇವಲ ೪ರಲ್ಲಿ ಮಾತ್ರವೇ ೩೧ ಅಂಕಿಯ ಗಡಿ ದಾಟಿದ್ದಾರೆ ಎಂದು ಹೇಳಿದ್ದಾರೆ.