Advertisements

Tik Tok ಗೆ ಠಕ್ಕರ್ ಕೊಡಲು ಬಂತು Mitron ಆ್ಯಪ್ ! ಟಿಕ್ ಟಾಕ್ ಗೆ ಶುರುವಾಯ್ತು ಅಂತ್ಯಕಾಲ

News

ಈಗ ಭಾರತದಲ್ಲಿ ಹೆಚ್ಚು ಪಾಪ್ಯೂಲರ್ ಆಗಿರುವ ಟಿಕ್ ಟಾಕ್ ಆ್ಯಪ್ ಬ್ಯಾನ್ ಆಗಬೇಕೆಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಈಗ ಇದೆ ಸಮಯದಲ್ಲಿ ಟಿಕ್ ಟಾಕ್ ಗೆ ಠಕ್ಕರ್ ಕೊಡಲು ಮಿತ್ರೋ (Mitron App) ಆ್ಯಪ್ ಬಂದಿದೆ. ಭಾರತೀಯರೆ ಮಾಡಿರುವ ಈ ಸ್ವದೇಶಿ ಆ್ಯಪ್ ಥೇಟ್ ಟಿಕ್ ಟಾಕ್ ನಂತಯೇ ಕೆಲಸ ಮಾಡುತ್ತೆ. ಅತೀ ವೇಗದಲ್ಲಿ ಪಾಪ್ಯೂಲರ್ ಆಗುತ್ತಿರುವ ನಮ್ಮ ದೇಶದ ಮಿಟ್ರಾನ್ ಆ್ಯಪ್ ಈಗಾಗಲೇ 50 ಲಕ್ಷಕ್ಕಿಂತ ಹೆಚ್ಚು ಡೌನ್ಲೋಡ್ ಆಗಿದೆ.

Advertisements

ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕರ್ಸ್ ಮತ್ತು ಯೌಟ್ಯುಬರ್ಸ್ ಮಧ್ಯೆ ದೊಡ್ಡ ಜಟಾಪಟಿಯೇ ಏರ್ಪಟ್ಟಿದ್ದು, ಈಗ ನಮ್ಮ ದೇಶದ ಆ್ಯಪ್ ಗೆ ನಾವು ಸಪೋರ್ಟ್ ಮಾಡಬೇಕೆಂದು ಎಲ್ಲರೂ ಮಿತ್ರೋ ಆ್ಯಪ್ ಗೆ ಬದಲಾಗುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ಈ ಆ್ಯಪ್, ಲಾಂಚ್ ಆಗಿದ್ದು ಐಐಟಿ ರೂರ್ಕಿ ಯಲ್ಲಿ ವಿದ್ಯಾರ್ಥಿಯಾಗಿರುವ ಶಿವಾಂಕ್ ಅಗರವಾಲ್ ಎಂಬುವವರು ಈ ಆ್ಯಪ್ ಡೆವಲಪ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಟಿಕ್ ಟಾಕ್ 1.6 ರೇಟಿಂಗ್ಸ್ ಹೊಂದಿದ್ದರೆ, ಮಿತ್ರೋ ಆ್ಯಪ್ ಅದಕ್ಕಿಂತ ಹೆಚ್ಚು ಅಂದರೆ 4.7 ರೇಟಿಂಗ್ಸ್ ನ್ನ ಹೊಂದಿದೆ.

ಪ್ರಧಾನಿಗಳು ತಮ್ಮ ಭಾಷಣಗಳಲ್ಲಿ ಮಿತ್ರೋ ಎಂಬ ಪದವನ್ನ ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಸ್ಫೂರ್ತಿ ಪಡೆದೆ ಈ ಅಪ್ಲಿಕೇಶನ್ ಗೆ ಮಿತ್ರೋ ಎಂದು ಹೆಸರಿಡಲಾಗಿದೆ. ಇನ್ನು ಗೂಗಲ್ ಪ್ಲೇ ಸ್ಟೋರ್ ಉಚಿತವಾಗಿ ಸಿಗುವ ಈ ಮಿತ್ರೋ ಆ್ಯಪ್  ಕೆಲವೊಂದು ನ್ಯೂನತೆಗಳು ಇವೆ. ಬಳಕೆದಾರರು ಕೂಡ ಇದನ್ನೆಲ್ಲಾ ಸರಿಪಡಿಸುವಂತೆ ಮಿತ್ರೋ ಬಳಿ ಕೇಳಿದ್ದಾರೆ. ಇದು ಇದೀಗ ಪ್ರತಿ ಪ್ಲಾಟ್‌ಫಾರ್ಮ್‌ನಲ್ಲೂ ಲಭ್ಯವಿದೆ. ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರು ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಚೀನಾ ಟಿಕ್ ಟಾಕ್ ಗೆ ಠಕ್ಕರ್ ಕೊಡಲು ಬಂದಿರುವ ಈ ನಮ್ಮ ಸ್ವದೇಶಿ ಆ್ಯಪ್ ನ್ನ ಬೆಳೆಸುವುದು ಭಾರತೀಯರ ಕೈನಲ್ಲಿದೆ.