Advertisements

ಎರಡು ಸಾವಿರ ನೊಟು ಎಲ್ಲಿ ಪ್ರಿಂಟ್ ಆಗುತ್ತಿದೆ ಗೊತ್ತಾ? ಒಂದು ನೋಟನ್ನು ತಯಾರಿಸುವುದಕ್ಕೆ ಎಷ್ಟು ಖರ್ಚಾಗುತ್ತದೆ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ದಿನ ನಿತ್ಯ ನಾವು ಹಣದ ನೋಟನ್ನು ನೋಡುತ್ತಿರುತ್ತೇವೆ.. ಹಾಗೆ ಉಪಯುಕ್ತ ವಸ್ತುಗಳನ್ನು ತರುವುದಕ್ಕೆ ಈ ಹಣದ ನೋಟು ಬಹಳ ಅವಶ್ಯಕ. ಇದರ ಜೊತೆ ಸಣ್ಣ ಪುಟ್ಟ ಚಿಲ್ಲರೆಗೆ ಕಾಯಿನ್ ಗಳು ಸಹ ಬಳಸುತ್ತೇವೆ. ಆದರೆ ಇದುವರೆಗೂ ನಿಮಗೆ ಅನಿಸಿದಿಯೋ ಇಲ್ಲವೋ ಗೊತ್ತಿಲ್ಲ. ಈ ಹಣದ ನೋಟುಗಳು ಎಲ್ಲಿ ಪ್ರಿಂಟ್ ಆಗುತ್ತೆ, ಒಂದು ನೋಟಿಗೆ ಬೀಳುವ ಖರ್ಚು ಎಷ್ಟಿರಬಹುದು ಎಂದು.. ಮೊದಲು ನಮ್ಮ ಭಾರತದಲ್ಲಿ ಸೆಂಟ್ರಲ್ ಬ್ಯಾಂಕ್ ನಲ್ಲಿ ಹಣದ ನೋಟುಗಳು ಪ್ರಿಂಟ್ ಆಗ್ತಿತ್ತು. ಇನ್ನೂ ನಮ್ಮ ದೇಶದಲ್ಲಿ ಮೊದಲ ಬಾರಿಗೆ ನೋಟ್ ಪ್ರಿಂಟಾಗಿದ್ದು ಮಹಾರಾಷ್ಟ್ರದಲ್ಲಿ.. ಇದಾದ ನಂತರ ಮಧ್ಯಪ್ರದೇಶದಲ್ಲಿ  ಹಣದ ನೋಟನ್ನು ಪ್ರಿಂಟ್ ಮಾಡಲು ಪ್ರಾರಂಭಿಸುತ್ತಾರೆ.

Advertisements

ಇನ್ನೂ ಇದಕ್ಕೂ ಮೊದಲು ವಿನ್ ವಿಕ್ಟೋರಿಯಾ ಇದ್ದ ಸಮಯದಲ್ಲಿ ಇಂಗ್ಲೇಂಡಿನಿಂದ ಭಾರತಕ್ಕೆ ನೋಟುಗಳನ್ನು ತರೆಸಿಕೊಳ್ಳುತ್ತಿದ್ದರು. ಕಾಲ ಕಳೆದಂತೆ ನಮ್ಮ ದೇಶದಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ.. ಈಗಿರುವಾಗ ಪ್ರಥಮ ಬಾರಿಗೆ 1999 ರಲ್ಲಿ ನಮ್ಮ ಕರ್ನಾಟಕ ರಾಜಮನೆತನದ ಜಿಲ್ಲೆ ಮೈಸೂರಿನಲ್ಲಿ ನೋಟನ್ನು ಪ್ರಿಂಟಿಂಗ್ ಮಾಡಲು ಪ್ರಾರಂಭಿಸುತ್ತಾರೆ. ಇದೇ ವೇಳೆ ಕೊಯ್ಯಮತ್ತೂರ್ ನಲ್ಲಿಯೂ ಕೂಡ ಹಣದ ನೋಟನ್ನು ತಯಾರಿಸಲು ಸಿದ್ದರಾಗುತ್ತಾರೆ.. ಸಾಮಾನ್ಯವಾಗಿ ಒಂದು, ಎರಡು, ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು, ಐನೂರು ರೂಪಾಯಿಗಳ ನೋಟನ್ನು ಭಾರತದ ಎಲ್ಲಾ ನೋಟ್ ಪ್ರಿಂಟ್ ಮಾಡುವ ಜಾಗಗಳಲ್ಲಿ ಪ್ರಿಂಟ್ ಮಾಡುತ್ತಾರೆ.

ಆದರೆ 2000 ಸಾವಿರ ಪಿಂಕ್ ನೋಟ್ ಮಾತ್ರ ಮೈಸೂರಿನಲ್ಲಿ ತಯಾರಾಗುತ್ತದೆ.. ಇನ್ನೂ ಭಾರತದಲ್ಲಿ ಸಂಪೂರ್ಣವಾಗಿ ಬಳಕೆ ಮಾಡುತ್ತಿರುವ 2000 ನೋಟುಗಳು ಸಹ ಮೈಸೂರಿನಲ್ಲಿ ಪ್ರಿಂಟ್ ಆಗಿರುವ ನೋಟುಗಳು ಅಂದರೆ ಹೆಮ್ಮೆ ಪಡುವಂತದ್ದು. ಹಾಗೆ ಈ ಎರಡು ಸಾವಿರ ರೂಪಾಯಿಯ ನೋಟನ್ನು ಪ್ರಿಂಟ್ ಮಾಡೊದಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ ನಿಮಗೆ ಆಶ್ಚರ್ಯ ಆಗಬಹುದು.. ಸ್ನೇಹಿತರೆ ಕೇವಲ ನಾಲ್ಕು ರೂಪಾಯಿ 19 ಪೈಸೆ ಖರ್ಚಾಗುತ್ತದೆ. ಇನ್ನೂ ಈ ನೋಟಿನಲ್ಲಿ ಬಳಕೆಯಾಗುವ ಬಣ್ಣಗಳನ್ನ ಇಂಗ್ಲೆಂಡ್ ನಿಂದ ತರೆಸಿಕೊಳ್ಳುತ್ತಾರೆ.. ಅದೇ ರೀತಿ 500 ರೂಪಾಯಿ ನೋಟನ್ನು ಪ್ರಿಂಟ್ ಮಾಡೊದಕ್ಕೆ ತಗುಲುವ ಖರ್ಚು 2 ರೂಪಾಯಿ 47 ಪೈಸೆ. 

ಹಾಗೂ ಹತ್ತು, ಇಪ್ಪತ್ತು, ಐವತ್ತು, ನೂರು ರೂಪಾಯಿಗಳ ನೋಟನ್ನು‌ ಪ್ರಿಂಟ್ ಮಾಡುವ ಸರ್ಕಾರಕ್ಕೆ ನೋಟಿನ ಮೇಲೆ ಒಂದು ರೂಪಾಯಿ 19 ಪೈಸೆ ಖರ್ಚಾಗುತ್ತದೆ. ಮತ್ತು ಉಳಿದಿರುವ ಚಿಲ್ಲರೆ ಕಾಯಿನ್ ಗಳನ್ನು ತಯಾರು ಮಾಡುವುದುಕ್ಕೆ ಒಂದು ರೂಪಾಯಿ ಹದಿನಾಲ್ಕು ಪೈಸೆ ಖರ್ಚಾಗುತ್ತದೆ. ಇನ್ನೂ ಕಾಯಿನ್ ಗಳನ್ನು ಸಾಮಾನ್ಯವಾಗಿ ಹೈದರಾಬಾದ್, ಕೊಲ್ಕತ್ತಾ, ಮುಂಬೈ, ಮತ್ತು ನೋವಿಡಾದಲ್ಲಿ ತಯಾರಿಸಲಾಗುತ್ತದೆ. ಈ ರೀತಿ ನಮ್ಮ ಭಾರತ ಸರ್ಕಾರ ನೋಟುಗಳನ್ನು ತಯಾರಿಸಿ ಬಿಡುಗಡೆ ಮಾಡುತ್ತಾರೆ.. ಒಟ್ಟಿನಲ್ಲಿ ನಮ್ಮ ಮೈಸೂರಿನಲ್ಲಿಯೂ ಕೂಡ 2000 ರುಪಾಯಿ ನೋಟುಗಳನ್ನು ಪ್ರಿಂಟ್ ಮಾಡುತ್ತಿರುವುದು ಇನ್ನೊಂದು ದೊಡ್ಡ ವಿಶೇಷ ಎನ್ನಬಹುದು.