Advertisements

ನಮ್ಮ ದೇಶದ ಒಂದು ರೂಪಾಯಿಗೆ ಈ ದೇಶಗಳಲ್ಲಿರುವ ಬೆಲೆ ಕೇಳಿದ್ರೆ ನೀವು ನಂಬೋದಿಲ್ಲ !

Kannada Mahiti

ನಮಸ್ತೇ ಸ್ನೇಹಿತರೇ, ನಾವು ನಮ್ಮ ದೇಶದ ಹಣದ ಮೌಲ್ಯವನ್ನ ರೂಪಾಯಿಯಲ್ಲಿ ಬಳಸುತ್ತೇವೆ.. ಜೊತೆಗೆ ನಮ್ಮ ದೇಶದ ರೂಪಾಯಿಯನ್ನ ಬೇರೆ ದೇಶದ ಹಣದ ಮೌಲ್ಯದ ಜೊತೆಗೆ ಹೋಲಿಸಿ ಮಾತನಾಡುವುದು ಸಾಮಾನ್ಯ. ಅದರಲ್ಲೂ ಜಗತ್ತಿನಲ್ಲಿ ಅತೀ ಹೆಚ್ಚು ಮೌಲ್ಯ ಹೊಂದಿರುವ ಅಮೇರಿಕಾದ ಡಾಲರ್ ಜೊತೆಗೆ ಹೋಲಿಸುವದಂತು ಹೆಚ್ಚು. ಹೌದು, ಭಾರತದ ರೂಪಾಯಿ ಕರೆನ್ಸಿ ಮುಂದೆ ಅಮೇರಿಕಾದ ಡಾಲರ್ ಮೌಲ್ಯ ಹೆಚ್ಚಿದೆ. ಇನ್ನು ನಾವು ತಿಳಿದುಕೊಳ್ಳಲೇಬೇಕಾದ ವಿಷಯ ಏನಪ್ಪಾ ಅಂದರೆ ನಮ್ಮ ರೂಪಾಯಿಗಿಂತಲೂ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳು ತುಂಬಾ ಇವೆ..ಹೌದು, ನಾವು ದೂರದ ದೇಶಗಳ ಬಗ್ಗೆ ಹೇಳಬೇಕೆಂದೇನಿಲ್ಲ. ನಮ್ಮ ಅಕ್ಕ ಪಕ್ಕದ ದೇಶಗಳೇ ಆದ ನೇಪಾಳ, ಶ್ರೀಲಂಕಾ ಹಾಗು ಪಾಕಿಸ್ತಾನ ದೇಶಗಳಿಗೆ ಹೋಲಿಸಿದ್ರೆ ನಮ್ಮ ದೇಶದ ರೂಪಾಯಿ ಮೌಲ್ಯವೇ ಹೆಚ್ಚು..

Advertisements

ನೀವು ನಂಬಲೇಬೇಕಾದ ವಿಷಯ ಏನಪ್ಪಾ ಎಂದರೆ ಕೆಲವೊಂದು ದೇಶಗಳಲ್ಲಿ ನಮ್ಮ ಭಾರತದ ಒಂದು ರುಪಾಯಿಗೆ ೮೦೦ರೂಪಾಯಿ ಮೌಲ್ಯ ಇದೆ ಎಂದರೆ ನೀವು ನಂಬಲೇಬೇಕು. ಹಾಗಾದ್ರೆ ಯಾವೆಲ್ಲಾ ದೇಶಗಳಲ್ಲಿ ನಮ್ಮ ರುಪಾಯಿಗೆ ಮೌಲ್ಯ ಹೆಚ್ಚಿದೆ ಅಂತ ತಿಳಿಯೋಣ ಬನ್ನಿ.. ಸ್ನೇಹಿತರೆ ಪೆರುಗ್ವೆ ದೇಶದ ಕರೆನ್ಸಿ ಪರಾಗ್ವೆಯ ಗೌರಾನಾ. ನಮ್ಮ ದೇಶದ ಒಂದು ರುಪಾಯಿಗೆ ಆ ದೇಶದಲ್ಲಿ 93.8769 ಗೌರಾನಾ ಮೌಲ್ಯವಿದೆ. ಇಂಡೋನೇಷ್ಯಾದಲ್ಲಿ 1 ರುಪಾಯಿಗೆ 193.53 ಇಂಡೋನೇಷಿಯನ್ ರುಪೈ ಮೌಲ್ಯವಿದೆ. ಇನ್ನು ಮಂಗೋಲಿಯಾ ದೇಶದಲ್ಲಿ ಒಂದು ರುಪಾಯಿಗೆ 38.3317 MNT ಬೆಲೆಯಿದೆ. ಕೋಸ್ಟರೀಕಾ ದೇಶದಲ್ಲಿ ಒಂದು ರೂಪಾಯಿಗೆ 8.36 ಕೋಸ್ಟಾ ರಿಕಾನ್ ಮೌಲ್ಯವಿದೆ.

ಇನ್ನು ನಮ್ಮ ಪಕ್ಕದ ದೇಶವಾದ ಶ್ರೀಲಂಕಾದಲ್ಲಿ ನಮ್ಮ ಒಂದು ರೂಪಾಯಿ ಮೌಲ್ಯಕ್ಕೆ 2.57 ಶ್ರೀಲಂಕನ್ ರೂಪಿ ವ್ಯಾಲ್ಯೂ ಇದೆ. ಇನ್ನು ನೇಪಾಳ ದೇಶದಲ್ಲಿ ನಮ್ಮ ಒಂದು ರುಪಾಯಿಗೆ 1.60 ನೇಪಲ್ಸ್ ರೂಪಾಯಿ ಬೆಲೆ ಇದೆ. ಉಬ್ಜೇಕಿಸ್ತಾನ್ ದೇಶದಲ್ಲಿ ಇಂಡಿಯಾದ 1 ರುಪಾಯಿಗೆ 142.29 ಉಜ್ಬೇಕಿಸ್ತಾನಿ ಸೋಮ್ ಮೌಲ್ಯ ಇದೆ. ಇರಾನ್ ದೇಶದಲ್ಲಿ ನಮ್ಮ ಒಂದು ರೂಗೆ 572.58 ಇರಾನಿಯನ್ ರಿಯಲ್ ಇದೆ. ವಿಯೆಟ್ನಾಮ್ ದೇಶದಲ್ಲಿ ಒನ್ ರುಪಿಗೆ 313.69 ವಿಯೆಟ್ನಾಮೀಸ್ ಡಾಂಗ್ ಮೌಲ್ಯವಿದೆ. ಇನ್ನು ಪಾಕಿಸ್ತಾನಕ್ಕಿಂತ ನಮ್ಮ ರೂಪಾಯಿ ಮೌಲ್ಯ ತುಸು ಹೆಚ್ಚಿದೆ ಖುಷಿ ಪಡೆಯುವ ವಿಷಯ. ಹೌದು ನಮ್ಮ ಒಂದು ರುಪಾಯಿಗೆ ಅಲ್ಲಿ 2.18 ಪಾಕಿಸ್ತಾನಿ ರೂಪಿ ಬೆಲೆಯಿದೆ. ಸ್ನೇಹಿತರೇ, ಇದೆಲ್ಲಾ ಮಾಹಿತಿ ಗೂಗಲ್ ನಲ್ಲಿ ಕೆದಕಿಸಂಗ್ರಹ ಮಾಡಿರುವುದು. ಇನ್ನು ಈ ಮೌಲ್ಯಗಳು ಅಂತರಾಷ್ತ್ರೀಯ ಮಟ್ಟದಲ್ಲಿ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಸ್ನೇಹಿತರೇ, ನಿಮಗೆ ನಮ್ಮ ದೇಶದ ರೂಪಾಯಿಗಿಂತ ಕಡಿಮೆ ಮೌಲ್ಯ ಹೊಂದಿರುವ ದೇಶಗಳ ಹೆಸರು ಗೊತ್ತಿದ್ದರೆ ಆ ದೇಶದ ಕರೆನ್ಸಿ ಹಾಗೂ ಮೌಲ್ಯವನ್ನ ಕಾಮೆಂಟ್ ಮಾಡಿ ತಿಳಿಸಿ..