Advertisements

ಕೊನೆಗೂ ಕಪ್ ಗೆದ್ದ RCB ! ಈ ಸಲ ಕಪ್ ನಿಮ್ದೇ ಎಂದು ಕಾಲೆಳೆದ ಚೆನ್ನೈ ಸೂಪರ್ ಕಿಂಗ್ಸ್

Sports

ಐಪಿಎಲ್ ನಲ್ಲಿ ಕನ್ನಡಿಗರ ನೆಚ್ಚಿನ ತಂಡ RCB ಇದವರೆಗೂ ಒಂದೇ ಒಂದು ಕಪ್ ಕೂಡ ಗೆದ್ದಿಲ್ಲ. ಪ್ರತಿ ಬಾರಿ ಐಪಿಎಲ್ ಸ್ಟಾರ್ಟ್ ಆದಾಗ ಕನ್ನಡಿಗರು ಈ ಸಲ ಕಪ್ ನಮ್ಮದೇ ಎಂಬ, ಆರ್ ಸಿಬಿ ನೇ ಚಾಂಪಿಯನ್ ಎಂಬ ಸ್ಲೋಗನ್ ಹಾಕುತ್ತಲೇ ಇರುತ್ತಾರೆ. ಆದರೆ ಕನ್ನಡಿಗರ ಕನಸು ಮಾತ್ರ ಇದುವರೆಗೂ ನನಸಾಗಿಲ್ಲ. ಆದರೆ ‘ಇಂಡಿಯನ್ ಪೋಲ್ ಲೀಗ್’ ನಲ್ಲಿ ಬೆಂಗಳೂರಿನ ಆರ್ ಸಿಬಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Advertisements

ಏನೂ..ಆರ್ ಸಿಬಿ ಕೊನೆಗೂ ಗೆದ್ದುಬಿಡ್ತಾ..ಅಂತ ಶಾಕ್ ಆಗಬೇಡಿ.!ಇತ್ತೀಚಿಗೆ ಆರ್ ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ೫೫ ದಿನಗಳ ವೋಟಿಂಗ್ ಪೋಲ್ ನಡೆಸಿದ್ದು, ಅಭಿಮಾನಿಗಳು ಬೆಂಗಳೂರಿನ RCB ತಂಡಕ್ಕೆ ವೋಟಿಂಗ್ ಮಾಡಿದ್ದಾರೆ. ಇನ್ನು ಇಂಡಿಯನ್ ಪೋಲ್ ಲೀಗ್ ನಲ್ಲಿ ಪ್ಲೇ ಆಫ್ ಸ್ಟೇಜ್, ಎಲಿಮನೇಟರ್ಸ್, ಕ್ವಾಲಿಫೈರ್ಸ್ ಸೇರಿದಂತೆ ಫೈನಲ್ ನಡೆಯಲಿದ್ದು, ಪ್ರತೀ ಪಂದ್ಯದಲ್ಲೂ ವೋಟಿಂಗ್ ನಡೆಯುತ್ತೆ.ಯಾವ ತಂಡಕ್ಕೆ ಹೆಚ್ಚು ವೋಟಿಂಗ್ ಸಿಗುತ್ತೋ ಆ ತಂಡವನ್ನ ವಿನ್ನರ್ ತಂಡ ಎಂದು ನಿರ್ಧಾರ ಮಾಡಲಾಗುತ್ತೆ.

ಹೌದು, ಸ್ನೇಹಿತರೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಈ ಪೋಲ್ ಲೀಗ್ ನ ಫೈನಲ್ ನಲ್ಲಿ ಆರ್ ಸಿಬಿ ಮತ್ತು ಹೈದರಾಬಾದ್ ನ ಸನ್ ರೈಸರ್ಸ್ ತಂಡ ಮುಖಾಮುಖಿಯಾಗಿದ್ದು, RCB ಗೆ ಅತೀ ಹೆಚ್ಚು ವೋಟಿಂಗ್ ಅಂದರೆ 80% ಮತಗಳನ್ನ ಹಾಕಿ ವಿನ್ನರ್ ಆಗಿ ಮಾಡಿದ್ದಾರೆ. ಇನ್ನು ಇದನ್ನ RCB ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಂಡಿಯನ್ ಪೋಲ್ ಲೀಗ್ ನ ರಿಸಲ್ಟ್ ನ್ನ ಪೋಸ್ಟ್ ಮಾಡಿದ್ದಾರೆ. ಇದನ್ನ ನೋಡಿದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ “ಈ ಸಲ ಕಪ್ ನಿಮ್ದೇ” ಅಂತ ವ್ಯಂಗ್ಯವಾಗಿ ಟ್ವೀಟ್ ಮಾಡಿ ಆರ್ ಸಿಬಿ ತಂಡದ ಕಾಲೆಳೆದಿದೆ. ಒಟ್ಟಿನಲ್ಲಿ ಈ ಎರಡು ಐಪಿಎಲ್ ಫ್ರಾಂಚೈಸಿಗಳ ತಂಡದ ಫ್ರೆಂಡ್ಲಿ ಫೈಟ್ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿರುವುದಂತೂ ಸುಳ್ಳಲ್ಲ.