Advertisements

ಮದುವೆಗೆ ಕಂಕಣ ಭಾಗ್ಯ ಕೂಡಿ ಬರಲು ನೀವು ಮೆಚ್ಚುವ ವಧು ವರ ಸಿಗಲು ಹೀಗೆ ಮಾಡಿ ಸಾಕು !

Adyathma

ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಕಂಕಣ ಭಾಗ್ಯ ಒದಗಿ ಬರುವುದಿಲ್ಲ. ಸರಿಯಾದ ವಧು ಅಥವಾ ವರ ಸಿಗುವುದಿಲ್ಲ. ಇನ್ನು ಕೆಲವರ ಮನೆಯಲ್ಲಿ ಮಕ್ಕಳು ಮದುವೆಗೇ ಒಪ್ಪುವುದಿಲ್ಲ. ಇನ್ನು ಕೆಲವರು ತಾವು ಇಷ್ಟ ಪಟ್ಟರೂ ಮನೆಯಲ್ಲಿ ಒಪ್ಪುವುದಿಲ್ಲ. ಹೀಗೆ ಯಾವುದೇ ಸಮಸ್ಯೆ ಇರಲಿ ಯಾವುದೇ ವಿಘ್ನ ಇಲ್ಲದೆ ಮದುವೆ ನೆರವೇರಲು ಇಲ್ಲೊಂದು ಸಾಂಪ್ರದಾಯಕ ಪರಿಹಾರವಿದೆ. ಮದುವೆಯಾಗುವ ಹುಡುಗ ಅಥವಾ ಹುಡುಗಿ ಈ ಒಂದು ಪೂಜೆಯನ್ನು ಮಾಡಬೇಕು. ಬೆಳಗಿನ ಜಾವ ಬ್ರಾಹ್ಮೀ ಮಹೂರ್ತದಲ್ಲಿ ಈ ಪೂಜೆ ನೆರವೇರಿಸಬೇಕು. ಇದು ಶಿವ ಪಾರ್ವತಿ ಗಣೇಶರ ಪ್ರತೀಕವಾದ ಬಿಳಿ ಎಕ್ಕದ ಗಿಡಕ್ಕೆ ಸಲ್ಲಿಸುವ ಪೂಜೆ.

Advertisements

ಇದಕ್ಕಾಗಿ ಮೊದಲು ಶಿವ ಅಥವಾ ದೇವಿಯ ದೇವಾಲಯಕ್ಕೆ ತೆರಳಿ ಅಲ್ಲಿ ಮದುವೆಯಾಗಬೇಕಾದ ಹುಡುಗಿ ಅಥವಾ ಹುಡುಗನ ಹೆಸರಿನಲ್ಲಿ ಪೂಜೆ ಮಾಡಿಸಿ ಕುಂಕುಮ ಪ್ರಸಾದ ತರಬೇಕು. ನಂತರ ಸೋಮವಾರದ ದಿನದಂದು ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಎಕ್ಕದ ಗಿಡಕ್ಕೆ ಪೂಜೆ ಮಾಡಿ ಹರಿಷಿನದ ಕೊಂಬು ಅಥವಾ ತಾಳಿ ಕಟ್ಟಬೇಕು.

ಪೂಜಾ ವಿಧಾನ:. ಬೆಳಗಿನ ಜಾವ 5 ರಿಂದ 6 ಗಂಟೆಗೆ ಈ ಪೂಜೆ ಮಾಡಬೇಕು. ಇದಕ್ಕಾಗಿ ಬಾಳೆಹಣ್ಣು, ತೆಂಗಿನ ಕಾಯಿ, ಅಡಿಕೆ ವೀಳ್ಯದ ಎಲೆ, ವಿಭೂತಿ ಅರಿಶಿನ ಕುಂಕುಮ ಮೊದಲಾದ ಪೂಜಾ ಸಾಮಗ್ರಿಗಳು ಬೇಕಾಗುತ್ತವೆ. ಮೊದಲು ಯಾವುದಾದರೂ ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡಲು ಆಯ್ಕೆ ಮಾಡಿಕೊಳ್ಳಿ. ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಗೊಳಿಸಿ ರಂಗೋಲಿ ಹಾಕಿ. ನಂತರ ಮಡಿಯಿಂದ ಪೂಜೆ ಪ್ರಾರಂಭಿಸಿ. ಎಕ್ಕದ ಗಿಡವನ್ನು ಶಿವ ಪಾರ್ವತಿಯ ಪ್ರತಿರೂಪವಾಗಿ ಭಾವಿಸಿ ಹರಿಶಿನ ಕುಂಕುಮ ವಿಭೂತಿ ಹೂಗಳನ್ನು ಮೊದಲು ಹಾಕಿ. ನಂತರ ಪೂಜೆ ಮಾಡಿ ಪೂಜೆಯ ನಂತರ ಹರಿಶಿನದ ಕೊಂಬನ್ನು ಗಿಡಕ್ಕೆ ಕಟ್ಟಿ ನಂತರ ಹಾಲು ತುಪ್ಪ ಬಿಟ್ಟು ಐದು ಸುತ್ತು ಪ್ರದಕ್ಷಣೆ ಹಾಕಿ.

ನಂತರ ನಿಮ್ಮ ಮನದ ಇಷ್ಟಾರ್ಥ ವಾನ್ನು ಕೊರಿಕೊಳ್ಳಿ. ಈ ಪೂಜೆಯನ್ನು ಬೆಳಗಿನ ಜಾವವೇ ಮಾಡಬೇಕು. ಯಾರಿಗೆ ಮದುವೆಯಾಗಬೇಕು ಅವರೇ ಮಾಡಬೇಕು. ಇದನ್ನು ಒಂದು ಸೋಮವಾರ ಮಾಡಿದರೆ ಸಾಕು. ನಂತರ ದೇವಾಲಯದಿಂದ ತಂದ ಕುಂಕುಮ ಪ್ರಸಾದವನ್ನು 42 ದಿನಗಳ ಕಾಲ ಪ್ರತೀ ದಿನ ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ಮದುವೆಗೆ ಎದುರಾದ ಎಲಾ ವಿಘ್ನಗಳು ಮಾಯವಾಗಿ ಮದುವೆಗೆ ಕಂಕಣ ಭಾಗ್ಯ ಶೀಘ್ರವೇ ಕೂಡಿ ಬರುತ್ತದೆ. ಈ ಪೂಜಾ ವಿಧಾನ ದಿಂದ ಎಷ್ಟೋ ಜನರ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಬಂಧು ಮಿತ್ರ ರೊಂದಿಗೂ ಹಂಚಿಕೊಳ್ಳಿ. ಅವರಿಗೂ ಉಪಯೋಗವಾಗಲಿ.