Advertisements

ಕಾಲೇಜಿನ ಕ್ಲಾಸ್ ರೂಮಿನಲ್ಲೇ ಮದುವೆಯಾದ ವಿದ್ಯಾರ್ಥಿಗಳು ! ವೈರಲ್ ಆಗಿದೆ ಈ ಜೋಡಿಯ ಮದುವೆಯ ವಿಡಿಯೋ..

News

ನಮಸ್ತೇ ಸ್ನೇಹಿತರೇ, ಇಂದಿನ ಯುವಜನಾಂಗ ಭವಿಷ್ಯದ ಅರಿವಿಲ್ಲದೆ ಬಹುಬೇಗ ಅಟ್ರಾಕ್ಷನ್ ಗೆ ಒಳಗಾಗುವುದು ಸಾಮಾನ್ಯವಾಗಿಬಿಟ್ಟಿದೆ. ಅದಕ್ಕೆ ಹೇಳೋದು ಹದಿಹರೆಯದ ವಯಸ್ಸಿನವರಿಗೆ ಬುದ್ದಿ ಕಡಿಮೆ ಅಂತ. ಸಿನಿಮಾಗಳನ್ನ ನೋಡೋದು ಅದರಂತೆ ತಾವು ಓದುವ ಸಮಯದಲ್ಲಿ ಪ್ರೀತಿಯೋ ಇಲ್ಲ ಕಾ’ಮದ ಮೋಡಿಗೆ ಬಿದ್ದು ತಮ್ಮ ಜೀವನವನ್ನ ಹಾಳು ಮಾಡಿಕೊಳ್ಳುವುದು. ಆದರೆ ಮುಂದೊಂದು ದಿನ ತಾವು ಮಾಡಿದ ತಪ್ಪಿನ ಬಗ್ಗೆ ಅರಿವಾಗುವ ಸಮಯಕ್ಕೆ ಜೀವನ ಎಲ್ಲೋ ಸಾಗಿಬಿಟ್ಟಿರುತ್ತದೆ. ಹೌದು, ಸ್ನೇಹಿತರೆ ಈ ಪೀಠಿಕೆ ಏಕೆಂದರೆ ಇದಕ್ಕೆ ನಿದರ್ಶನ ಎಂಬಂತೆ ನಮ್ಮ ಪಕ್ಕದ ಆಂದ್ರಪ್ರದೇಶದ ರಾಜಮಂಡ್ರಿಯ ಸರ್ಕಾರಿ ಕಾಲೇಜಿನಲ್ಲಿ ಘಟನೆಯೊಂದು ನಡೆದಿದೆ.

ಹೌದು, ಗೋದಾವರಿ ಜಿಲ್ಲೆಯ ರಾಜಮಂಡ್ರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆ ಆಗಿರುವ ಘಟನೆ ನಡೆದಿದೆ. ಆದರೆ ನೀವು ನಂಬಲಿಕ್ಕಿಲ್ಲ, ಈ ಮದುವೆಯಾಗಿರುವುದು ಕಾಲೇಜಿನ ಕ್ಲಾಸ್ ರೂಮಿನಲ್ಲೇ. ಇನ್ನು ಜೀವನ ಅಂದರೆ ಏನೂ ತಿಳಿಯದಂತಹ ವಯಸ್ಸಿನಲ್ಲಿ ಈ ವಿದ್ಯಾರ್ಥಿಗಳಿಬ್ಬರು ಮದುವೆಯಾಗಿದ್ದು ಈ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿರುವ ದೃಶ್ಯಗಳಂತೂ ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು ಈ ಘಟನೆ ನಡೆದಿರುವುದು ಕಳೆದ ತಿಂಗಳು ಹದಿನೇಳರಂದು. ಓದುವ ಸಮಯದಲ್ಲಿ ಅಟ್ರಾಕ್ಷನ್ ಗೆ ಒಳಗಾದ ಈ ವಿದ್ಯಾರ್ಥಿಗಳು ಕಾಲೇಜಿನ ಕ್ಲಾಸ್ ರೂಮಿನಲ್ಲೇ ಮದುವೆಯಾಗಿರುವ ಕಾರಣ ಅದೇ ಕಾಲೇಜಿನ ಪ್ರಿನ್ಸಿಪಾಲರು ಅವರಿಬ್ಬರಿಗೂ ಟಿಸಿ ಕೊಟ್ಟು ಕಾಲೇಜಿನಿಂದ ಹೊರಗೆ ಹಾಕಿದ್ದಾರೆ. ವಿದ್ಯಾರ್ಥಿಗಳು ಮದುವೆಯಾಗಿರುವ ವಿಡಿಯೋ ಇಲ್ಲಿದೆ ನೋಡಿ..

ಒಟ್ಟಿನಲ್ಲಿ ಯಾವುದೊ ಸಿನಿಮಾ ನೋಡಿಯೋ ಏನೋ ಅದೇ ಜೀವನವೆಂದು ತಿಳಿದು ಆತುರಪಟ್ಟಿರುವ ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನ ಹಾಳುಮಾಡಿಕೊಂಡಿದ್ದು ಸುಳ್ಳಲ್ಲ. ಆದರೆ ಇದೆಲ್ಲವೂ ಕೇವಲ ಕೆಲವು ದಿನಗಳು ಮಾತ್ರ. ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವರಿಗೆ ಅವರು ಮಾಡಿರುವ ತಪ್ಪು ಅರಿವಾಗುತ್ತದೆ. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಇನ್ನು ಈ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಪೋಷಕರಿಗೆ ಗೊತ್ತಾಗಿದ್ದು ಅವರು ತಮ್ಮ ಮಕ್ಕಳ ನಡೆಯಿಂದಾಗಿ ಆಘಾ’ತಗೊಂಡಿದ್ದಾರೆ. ಒಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು ತೆಗೆದುಕೊಂಡ ನಿರ್ಧಾರಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಇಂತದ್ದೆಲ್ಲವನ್ನ ಬೆಂಬಲಿಸದಿರುವುದೇ ಒಳ್ಳೆಯದು. ಏಕೆಂದರೆ ಬೇರೆ ಮಕ್ಕಳು ಕೂಡ ಇಂತದ್ದನ್ನೆಲ್ಲಾ ಅನುಸರಿಸುವ ಸಾಧ್ಯತೆ ಇರುತ್ತದೆ. ಆದರೆ ಇವರು ಉದ್ದೇಶ ಪೂರ್ವಕವಾಗಿಯೇ ಮದುವೆ ಆಗಿದ್ದಾರೆಯೇ ಅಥವಾ ಇದು ನಡೆದದ್ದು ತಮಾಷೆಗಾಗಿಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸ್ನೇಹಿತರೇ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..