Advertisements

ತಾಯಿಯ ಆಸೆಯನ್ನು ಈಡೇರಿಸಲು ಸ್ಕೂಟರ್ ನಲ್ಲಿ ಬರೋಬ್ಬರಿ 56 ಸಾವಿರ ಕಿಲೋಮೀಟರ್ ಕರೆದುಕೊಂಡು ಹೋದ ಮಗ.. ಈ ತಾಯಿಯ ಆಸೆ ಏನಿತ್ತು ಗೊತ್ತಾ?

Kannada Mahiti

ತ್ರೇತಾಯುಗದ ಶ್ರವಣ ಕುಮಾರನ ಕತೆ ಯಾರಿಗೆ ಗೊತ್ತಿಲ್ಲ ಹೇಳಿ? ತಂದೆ ತಾಯಿಯನ್ನು ಹೊತ್ತು ಪುಣ್ಯಕ್ಷೇತ್ರಗಳಿಗೆಬ ಕರೆದೊಯ್ದ ಹೆಮ್ಮೆಯ ಪುತ್ರ, ಅಂತಹದ್ದೇ ಒಬ್ಬ ಈ ಕಲಿಯುಗದ ಶ್ರವಣಕುಮಾರನ ಬಗ್ಗೆ ಇವತ್ತು ನಿಮಗೆ ನಾವು ಹೇಳ್ತೀವಿ. ಇವರ ಹೆಸರು ಕೃಷ್ಣಾ ಕುಮಾರ್. ಮೂಲತಃ ಮೈಸೂರಿನವರಾದ ಕೃಷ್ಣಾ ಕುಮಾರ್ ತನ್ನ ತಾಯಿಯ ಆಸೆ ಪೂರೈಸೋದಾಗಿ ಮಾಡಿದ ಕೆಲಸ ಎಂತಹದ್ದು ಗೊತ್ತಾ? ಬರೋಬ್ಬರಿ 56 ಸಾವಿರದ 200 ಕಿಲೋಮೀಟರ್‌ನ್ನು ಬಜಾಜ್ ಬೈಕ್ ಅಲ್ಲಿ ಕ್ರಮಿಸಿ ತಾಯಿ ಆಸೆ ಪೂರೈಸಿದ ಆದರ್ಶ ಪುತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೌದು ಕೃಷ್ಣಾಕುಮಾರ್ ವೃತ್ತಿಯಲ್ಲಿ ಇಂಜಿನಯರಾಗಿದ್ದವರು. ಇವರದ್ದು ಕೂಡು ಕುಟುಂಬ.

[widget id=”custom_html-3″]

Advertisements

ಇವರ ತಾಯಿ ಚೂಡಾಮಣಿರತ್ನ ಅವರು ಚಿಕ್ಕವಯಸ್ಸಿನಿಂದಲೂ ಸಹ ಹೊರ ಜಗತ್ತನ್ನ ನೋಡಿದವರೇ ಅಲ್ಲ, ಮದುವೆಗೆ ಮುನ್ನ ತವರು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮದುವೆ ಬಳಿಕ ಗೃಹಿಣಿಯಾಗಿ ಗಂಡನ ಮನೆಗೆ ಸೇರಿಕೊಳ್ತಾರೆ. ಇತ್ತೀಚಿಗೆ ಅಂದ್ರೆ ªನಾಲ್ಕು ವರ್ಷದ ಹಿಂದೆ ಇವರ ಗಂಡ ತೀರಿಕೊಳ್ಳುತ್ತಾರೆ. ಆಗ ಕೆಲದಿನಗಳ ಬಳಿಕ ಮಗನ ಬಳಿ ಬಂದು ನಾನು ಬೇಲೂರು ಹಳೆಬೀಡು ನೋಡಬೇಕು ಅಂತ ಆಸೆ ವ್ಯಕ್ತಪಡಿಸ್ತಾರಂತೆ. ಅದನ್ನು ಕೇಳಿ ಕೃಷ್ಣ ಕುಮಾರ್ ಅವರಿಗೆ ಶಾಕ್ ಆಗುತ್ತೆ, ನನ್ನ ತಾಯಿ ಇಷ್ಟು ವರ್ಷಗಳಲ್ಲಿ ಇನ್ನು ಬೇಲೂರು ಹಳೇಬೀಡು ನೋಡಿಲ್ವ ಅಂತ ನೊಂದು ಕೊಳ್ಳುತ್ತಾರೆ. ಬಳಿಕ ಒಂದು ನಿರ್ಧಾರಕ್ಕೆ ಬಂದು ತನ್ನ ಕೆಲಸಕ್ಕೆ ಗುಡ್‌ಬೈ ಹೇಳಿ ತಾಯಿಗೆ ದೇಶದ ನಾನಾ ಭಾಗದಲ್ಲಿರುವ ತೀರ್ಥಕ್ಷೇತ್ರಗಳನ್ನು ತೋರಿಸಬೇಕು ಅಂತ ನಿರ್ಧರಿಸ್ತಾರೆ..

[widget id=”custom_html-3″]

ಹೀಗೆ ನಿರ್ಧರಿಸಿದ ಕೃಷ್ಣಾ ಕುಮಾರ್ ತನ್ನ ತಂದೆಯ ಹಳೆಯ ಬಜಾಜ್ ಸ್ಕೂಟರ್‌ನಲ್ಲಿಯೇ ತಾಯಿಯನ್ನು ಕೂರಿಸಿಕೊಂಡು ದೇಶ ಸುತ್ತಲೂ ಶುರು ಮಾಡುತ್ತಾರೆ. ಹೀಗೆ ಪಯಣ ಆರಂಭಿಸಿದ ಅವರು ಮೊದಲು ಮೈಸೂರಿನ ಕೆಲ ದೇವಾಲಯಗಳನ್ನು ತೋರಿಸಿ ನಂತರ ಕೇರಳಕ್ಕೆ ಕರೆದುಕೊಂಡು ಹೋಗ್ತಾರೆ. ಕೇರಳದಲ್ಲಿಯೇ ಸುಮಾರು 2 ತಿಂಗಳು ಸುತ್ತಿ ಬಳಿಕ ತಮಿಳುನಾಡಿಗೆ ತನ್ನ ತಾಯಿಯನ್ನು ಕೃಷ್ಣಾ ಕುಮಾರ್ ಕರೆದುಕೊಂಡು ಹೋಗ್ತಾರೆ. ಅದಾದ ಮೇಲೆ ಇವರ ಸವಾರಿ ತಮಿಳುನಾಡಿನಂದ ಗೋವಾಗೆ ಹೋಗ್ತಾರೆ.

[widget id=”custom_html-3″]

ಬಳಿಕ ಅರುಣಾಚಾಲ ಪ್ರದೇಶ, ಮೇಘಾಲಯ ಹೀಗೆ ಸಾಲು ಸಾಲು ರಾಜ್ಯಗಳಿಗೆ ತಮ್ಮ ಹಳೆ ಬಜಾಜ್ ಸ್ಕೂಟರ್ ಅಲ್ಲಿಯೇ ತಾಯಿಯೊಂದಿಗೆ ಪಯಣ ಬೆಳೆಸ್ತಾರೆ, ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳ ನೆರೆಹೊರೆಯ ಪ್ರದೇಶಗಳಾದ ನೇಪಾಳದ ಕಾಠ್ಮಂಡು, ಭೂತಾನ್ ಮಯಾನ್ಮರ್‌ನಂತಹ ಸುಂದರ ಪ್ರವಾಸಿ ತಾಣಗಳಿಗೆ ಸಹ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ. ಹೀಗೆ ಸಾಗಿದ ತಾಯಿ ಮಗನ ಪಯಣ ಕ್ರಮಿಸಿದ್ದು 56 ಸಾವಿರದ 200 ಕಿಲೋಮೀಟರ್‌ನತ್ತ.

[widget id=”custom_html-3″]

70ರ ವಯಸ್ಸಿನ ತಾಯಿಯ ಆಸೆ ಪೂರೈಸಿದ ಮಗ ಕೃಷ್ಣಾ ಕುಮಾರ್‌ರಂತಹ ಮಗನಿರಬೇಕಪ್ಪ ಬೇಕೆಂಬ ಅದೆಷ್ಟೋ ಅಪಾರ ಮೆಚ್ಚುಗೆಯ ಮಾತುಗಳು ಕೇಳಿಬಂತು. ಇನ್ನು ಮೈಸೂರಿನ ಮಹೇಂದ್ರ ಮೋಟರ‍್ಸ್ ಕಂಪನಿಯವರು ಈ ತಾಯಿ ಮಗನಿಗೆ 9 ಲಕ್ಷ ಮೌಲ್ಯದ ಒಂದು ಕಾರನ್ನು ಗೌರವಾರ್ಥವಾಗಿ ಕೊಡುಗೆ ನೀಡಿತು. ಜೊತೆಗೆ ತನ್ನ ತಾಯಿಯನ್ನು ದೇಶದ ನಾನಾ ಪುಣ್ಯಕ್ಷೇತ್ರಗಳಿಗೆ ಕರೆದೊಯ್ದ ಕೃಷ್ಣಾಕುಮಾರ್ ಈ ಯಾತ್ರೆಗೆ ಇಟ್ಟ ಹೆಸರು ಮಾತೃ ಸೇವಾ ಸಂಕಲ್ಪ.. ಸ್ನೇಹಿತರೇ ಇವತ್ತಿನ ಜಮಾನದಲ್ಲಿ ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಮಕ್ಕಳ ಮಧ್ಯೆ ತಾಯಿ ಆಸೆಯನ್ನು ಇಡೇರಿಸಿದ ಈ ಕೃಷ್ಣಾಕುಮಾರ್ ಗ್ರೇಟ್ ಅಲ್ವಾ..