Advertisements

ಕಾಲೇಜಿನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದ ಈತ ಇಂದು ಅದೇ ಕಾಲೇಜಿಗೆ ಏನ್ ಆಗಿದ್ದಾರೆ ಗೊತ್ತಾ? ಎಲ್ಲರ ಟೈಮ್ ಒಂದೇ ರೀತಿ ಇರಲ್ಲಾ..

Inspire Kannada Mahiti

ಡೆಡಿಕೇಶನ್ ಹಾಗೂ ಡೆರ‍್ರ್ಮಿನೇಷನ್ ಇದೆರೆಡು ಇದ್ದೋರು ಬಹಳ ಬೇಗ ಆಂಬಿಷನ್ ಹತ್ರ ರೀಚ್ ಆಗುತ್ತಾರೆ ಅನ್ನೋ ಮಾತು ಅಕ್ಷರಶಃ ಸುಳ್ಳಲ್ಲ, ಕೆಲವೊಮ್ಮೆ ಲೋಕಾರೂಢಿಯಾಗಿ, ಇನ್ನು ಕೆಲವೊಮ್ಮೆ ನಮಗೆ ನಾವೇ ಸ್ಥೈರ್ಯ ತುಂಬಿಕೊಳ್ಳಲು ಈ ಸಾಲುಗಳನ್ನು ನೆನಪಿಸಿಕೊಳ್ತೇವೆ. ಆದರೆ ಈ ಸಾಲು ಒಬ್ಬ ಮನುಷ್ಯ ಬದುಕಿನಲ್ಲಿ ಅಳವಡಿಸಿಕೊಂಡ್ರೆ ಬದುಕು ಸುಂದರ ಹಾಗೂ ನಾವಂದುಕೊಂಡಿದ್ದನ್ನ ಬಹಳ ಬೇಗ ಸಾಧಿಸಲು ಸಾಧ್ಯವಾಗ್ತದೆ.
ಪ್ರಿಯ ಓದುಗರೇ ಇವತ್ತು ನಾವು ನಿಮಗೆ ತಾನು ಓದುತ್ತಿರುವ ಕಾಲೇಜಿನಲ್ಲಿಯೇ ಮಾಲಿಯಾಗಿ ಕೆಲಸ ಮಾಡ್ತಿದ್ದ ವ್ಯಕ್ತ್ತಿ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಸ್ತಿರುವ ಇನ್ಸ್ಪೈರಿಂಗ್ ಸ್ಟೋರಿಯನ್ನು ಹೇಳ್ತೀವಿ
ಎಸ್ ಈಶ್ವರ್ ಸಿಂಗ್ ಎನ್ನುವ ಛತ್ತೀಸ್‌ಘಡದ ವ್ಯಕ್ತಿಯೇ ಇವತ್ತಿನ ನಮ್ಮ ಕಥಾನಾಯಕ.

[widget id=”custom_html-3″]

Advertisements

ಕಡುಬಡತನದಲ್ಲಿ ಹುಟ್ಟಿ ಬೆಳೆದರೂ ಸಹ ಉತ್ತಮವಾಗಿ ಓದಬೇಕು, ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಅಂತ ಉಜ್ವಲವಾದ ಬದುಕಿನ ಕನಸು ಕಾಣ್ತಿದ್ದ ಕನಸುಗಾರ ಈಶ್ವರ್ ಸಿಂಗ್. ಆದರೆ ಕಡುಬಡತನದಿಂದ ಪಿಯುಸಿ ಮುಗಿಸಿ ಕೆಲಸಕ್ಕೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಬಂತು. ಆಗ ವಿದ್ಯೆಯನ್ನು ತೊರೆದು ತನ್ನೂರಿನ ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮೇನ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ನಂತರ ಸ್ವಲ್ಪ ದಿನಗಳ ಬಳಿಕ ಓದುವ ಆಸೆ ಮತ್ತೆ ಚಿಗುರೊಡೆಯುತ್ತೆ. ನಗರದ ಕಲ್ಯಾಣ್ ಕಾಲೇಜಿಗೆ ಪದವಿಗೆ ಸೇರಿಕೊಳ್ತಾರೆ, ವೇಳೆ ಅದೇ ಕಾಲೇಜಿನಲ್ಲಿ ತೋಟದ ಮಾಲಿ ಕೆಲಸ ಸಹ ಖಾಲಿಯಿರುತ್ತೆ. ಹೀಗಾಗಿ ಓದಿನ ಜೊತೆಗೆ ಆ ಕೆಲಸವನ್ನು ಸಹ ಈಶ್ವರ್ ಸಿಂಗ್ ಅವರು ಮಾಡ್ತಾ ಇರುತ್ತಾರೆ.

[widget id=”custom_html-3″]

ಮುಂದೆ ಅದೇ ಕಾಲೇಜಿನಲ್ಲಿ ವಾಚ್‌ಮ್ಯಾನ್ ಆಗಿ ಸುಪರ್‌ವೈಸರ್ ಆಗಿ ಸಹ ಕೆಲಸ ಮಾಡಿ ಪದವಿ ಮುಗಿಸಿ ಉತ್ತೀರ್ಣರಾಗುತ್ತಾರೆ. ನಂತರ ಬಿಎಡ್ ಪರೀಕ್ಷೆಯನ್ನು ಬರೆದರಾದರೂ ಬಿಎಡ್‌ಕೋರ್ಸ್ ಮಾಡಲು ಸಾಕಷ್ಟು ದುಡ್ಡಿರದ ಹಿನ್ನಲೆ ಮತ್ತೆ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿಕೊಂಡು ನಂತರ ಪರೀಕ್ಷೆ ಬರೆದು ಉತ್ತೀರ್ಣರಾಗ್ತಾರೆ.
ಇವರಲ್ಲಿದ್ದ ಜ್ಞಾನಕ್ಕೆ ಕಲ್ಯಾಣ ಕಾಲೇಜಿನಲ್ಲಿಯೇ ಉಪನ್ಯಾಸಕರಾಗಿ ನೇಮಕರಾಗ್ತಾರೆ. ಬಳಿಕ ಕಾಲೇಜಿನಲ್ಲಿ ಕೆಲಸ ಮಾಡುತ್ತಲೇ ಎಂಎಡ್, ಎಂಫಿಲ್‌ಗಳನ್ನು ಸಹ ಮುಗಿಸಿಕೊಂಡ್ರು ಉತ್ತೀರ್ಣರಾಗ್ತಾರೆ.

ಇವರ ಕಾರ್ಯ ವೈಖರಿಗೆ ಓದಿನ ಮೇಲಿರುವ ಇವರ ತುಡಿತಕ್ಕೆ ಬದುಕಿನಲ್ಲಿ ಏನಾದ್ರೂ ಸಾಧಿಸಲೇಬೇಕು ಎಂಬ ಇರುವ ಛಲಕ್ಕೆ ಮನಸೋತು ಕಾಲೇಜು ಆಡಳಿತ ಮಂಡಳಿಯೇ ಈಶ್ವರ್‌ಸಿಂಗ್ ಅವರನ್ನು ಪ್ರಾಂಶುಪಾಲರಾಗಿ ನೇಮಿಸ್ತಾರೆ. ತನ್ಮೂಲಕ ತಾನು ಕಲಿತ ಕಾಲೇಜಿನಲ್ಲಿಯೇ ಅದರಲ್ಲೂ ತಾನೂ ಹಗಲಿರುಳು ನಿದ್ದೆ ಬಿಟ್ಟು ಬದುಕಿಗಾಗಿ ಮಾಲಿಯಾಗಿ ದುಡಿಯುತ್ತಿದ್ದ ಕಾಲೇಜಿನಲ್ಲಿಯೇ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಭಾಜನರಾಗಿದ್ದಾರೆ.