Advertisements

ಮೊದಲ ಬಾರಿಗೆ ಜಗ್ಗೇಶ್ ಅವರ ಕುರಿತು ಪ್ರತಿಕ್ರಿಯೆ ಕೊಟ್ಟ ನಟ ಶಶಿಕುಮಾರ್ ಮತ್ತು ಪ್ರಥಮ್..ಘ’ಟನೆಯ ಬಗ್ಗೆ ಹೇಳಿದ್ದೇನು ಗೊತ್ತಾ ?

Cinema

ಸ್ನೇಹಿತರೇ, ಹಿರಿಯ ನಟ ಜಗ್ಗೇಶ್ ಅವರ ಮೇಲೆ ನಟ ಡಿಬಾಸ್ ಅವರ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ಕಾರಣ, ಇಂದು ಜಗ್ಗೇಶ್ ಅವರು ಅದರ ಬಗ್ಗೆ ಕುರಿತು ವಿಡಿಯೊಂದನ್ನ ಪೋಸ್ಟ್ ಮಾಡಿದ್ದು ಆ’ಕ್ರೋಶಭರಿತರಾಗಿ ನಾವಿರೋದು ಮೂರ್ನಾಲ್ಕು ಜನ ಹಿರಿಯ ನಟರು ನಾವು ಸ’ತ್ತ ಮೇಲೆ ನಮ್ಮ ತಿಥಿ ಮಾಡಿ ಆನಂದ ಪಡಿ ಎಂದು ತಮ್ಮ ನೋವನ್ನ ತೋಡಿಕೊಂಡಿದ್ದರು. ಆದರೆ ಇಲ್ಲಿಯವರೆಗೆ ಈ ಘಟನೆಯ ಬಗ್ಗೆ ಸ್ಯಾಂಡಲ್ವುಡ್ ನ ಹಿರಿಯ ನಟರಾಗಲಿ, ಸ್ವತಃ ನಟ ದರ್ಶನ್ ಅವರಾಗಲಿ ಯಾವುದೇ ಹೇಳಿಕೆ ನೀಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನು ಈಗ ಈ ಘಟನೆಯ ಬಗ್ಗೆ ಸುಪ್ರೀಂ ಹೀರೊ ನಟ ಶಶಿಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ..ಹಾಗಾದರೆ ಅವರು ಹೇಳಿದ್ದೇನು ಅಂತ ನೋಡೋಣ ಬನ್ನಿ..

Advertisements

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಶಶಿಕುಮಾರ್ ಅವರು ಈ ರೀತಿ ಬರೆದುಕೊಂಡಿದ್ದಾರೆ..ಯಾವಾಗಲು ನಲಿಯುವಂತೆ ಮಾಡುತ್ತಿದ್ದ ನಿಮ್ಮ ಮೊಗದಲ್ಲಿ ನೋವಿನ ನೆರಳು ಕಾಣುತ್ತಿದೆ. ನಮಗೆ ಇದರಿಂದ ತುಂಬಾ ನೋವಾಗಿದ್ದು ಬೇಜಾರಾಗಿದೆ. ಆದರೆ ಎಲ್ಲದಕ್ಕೂ ಒಳ್ಳೆಯ ಕಾಲ ಅನ್ನೋದು ಬಂದೆ ಬರುತ್ತೆ. ನಿಮ್ಮ ಆ ನಗು, ನಿಮ್ಮ ಮಾತುಗಳು ನೀವು ಕೊಡುತ್ತಿದ್ದ ಸಲಹೆಗಳು, ಈ ನಿಮ್ಮ ಪ್ರೀತಿಗೆ ಕನ್ನಡಿಗರಾದ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ ನಟ ಶಶಿಕುಮಾರ್.

ಇನ್ನು ಈ ಘಟನೆಯ ಬಗ್ಗೆ ಹಿರಿಯ ಖ್ಯಾತ ನಿರ್ದೇಶಕರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನಮ್ಮ ಕನ್ನಡ ಚಿತ್ರರಂಗ ಒಂದು ದೊಡ್ಡ ಕುಟುಂಬವಿದ್ದಂತೆ. ಈಗಾಗಲೇ ಕೊ’ರೋನಾ ಸೋಂ’ಕಿನಿಂದಾಗಿ ನಿಂತು ಹೋಗಿದ್ದ ಚಿತ್ರರಂಗ ಈಗೀಗ ಕೊಡವಿಕೊಂಡು ಎದ್ದೇಳುತ್ತಿದೆ. ಇಂತಹ ಸಮಯದಲ್ಲಿ ಈ ತರಹದ ವಿವಾದಗಳು ಅವಶ್ಯಕತೆ ಇಲ್ಲ. ಈಗಾಗಲೇ ಆಗಿರುವ ಕಹಿಯಾದ ವಿವಾದವನ್ನ ಮರೆತು ಎಲ್ಲರೂ ಒಟ್ಟಾಗಿ ಸೇರಿ ನಮ್ಮ ಚಿತ್ರರಂಗದ ಅಭಿವೃದ್ಧಿಗೆ ದುಡಿಯೋಣ ಎಂದು ಸಲಹೆ ನೀಡಿದ್ದಾರೆ. ಇನ್ನು ನಟ ಪ್ರಥಮ್ ಕೂಡ ಈ ಘಟನೆಯ ಕುರಿತು ಈ ರೀತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.