Advertisements

ನಟ ಜಗ್ಗೇಶ್ ಅವರ 10 ನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ಇದೀಗ ಫುಲ್ ವೈರಲ್.. 10 ನೇ ಕ್ಲಾಸ್ ನಲ್ಲಿ ಎಷ್ಟು ಅಂಕ ಪಡೆದಿದ್ದರು ಗೊತ್ತಾ? ಆ ದಿನ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ರು..

Cinema

ನಮಸ್ತೆ ಸ್ನೇಹಿತರೆ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಹಾಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು.. ಸಿನಿಮಾ ಮಾತ್ರವಲ್ಲದೇ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾಕಾಲ ಅಭಿಮಾನಿಗಳ ಜೊತೆ ಸಂಪರ್ಕವನ್ನು ಹೊಂದಿರುತ್ತಾರೆ. ಕ’ರೋ’ನ ಎರಡನೇ ಹಾವಳಿ ಬಳಿಕ ಒಂದಷ್ಟು ದಿನಗಳ ಕಾಲ ಟ್ವಿಟ್ಟರ್ ನಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್ ಅವರು ಈಗ ಮತ್ತೆ ಸಕ್ರಿಯರಾಗಿದ್ದಾರೆ.. ವಿಶೇಷ ಏನೆಂದರೆ ಈ ಬಾರಿ ಅವರು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯನ್ನು ಹಂಚಿಕೊಡಿದ್ದಾರೆ.. ವಿದ್ಯಾಭ್ಯಾಸ ಏನೇ ಇರಲಿ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆದವರು ನಟ ಜಗ್ಗೇಶ್..

[widget id=”custom_html-3″]

Advertisements

ಶಾಲೆಯಲ್ಲಿ ಅಷ್ಟೇನು ಚುರುಕಿನ ವಿದ್ಯಾರ್ಥಿ ಆಗಿರಲಿಲ್ಲ. ಬಡತನದ ಕುಟುಂಬದಲ್ಲಿ ಬೆಳೆದ ಅವರು 10ನೇ ತರಗತಿ ಪರೀಕ್ಷೆಯಲ್ಲಿ 600 ಕ್ಕೆ 342 ಅಂಕ ಪಡೆದುಕೊಂಡಿದ್ದರು.. ಕನ್ನಡದಲ್ಲಿ 150 ಕ್ಕೆ 101 ಅಂಕ ಪಡೆದಿದ್ದರು. ಇಂಗ್ಲೀಷ್ ನಲ್ಲಿ 100 ಕ್ಕೆ 54, ಹಿಂದಿಯಲ್ಲಿ 50 ಕ್ಕೆ 20, ಗಣಿತದಲ್ಲಿ 100 ಕ್ಕೆ 57, ವಿಜ್ಞಾನದಲ್ಲಿ 100 ಕ್ಕೆ 52, ಹಾಗೂ ಸಮಾಜ ವಿಜ್ಞಾನದಲ್ಲಿ 100 ಕ್ಕೆ 58 ಮಾರ್ಕ್ಸ್ ಪಡೆದು ಜಗ್ಗೇಶ್ ಪಾಸ್ ಆಗಿದ್ದರು.. ಆ ದಿನಗಳನ್ನು ಟ್ವಿಟ್ಟರ್ ಮೂಲಕ ಜಗ್ಗೇಶ್ ನೆನಪಿಸಿಕೊಮಂಡಿದ್ದಾರೆ. ಕಡಿಮೆ ಅಂಕ ಪಡೆದ ಅವರಿಗೆ ಅಂದು ಅವಮಾನ ಆಗಿತ್ತು.. ಆದುದರಿಂದ ಅವರು ಆ’ತ್ಮಹ’ತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದರು..

[widget id=”custom_html-3″]

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಜಗ್ಗೇಶ ಶಾಲೆಯಲ್ಲಿ ಈಶ್ವರ, ಬಾಷಾಭಿಮಾನ ಬಾಲ್ಯದಿಂದಾಗ ಮಾತ್ರ ಅವನು ಸಾ’ಯು’ವವರೆಗೆ ಕನ್ನಡ ಹೃದಯ ಬಡಿತದಲ್ಲಿ ಜೊತೆಯಲ್ಲೇ ಹುಳಿಯುತ್ತದೆ ಎಂದು ಅವರು ಬರಹ ಆರಂಭಿಸಿದ್ದಾರೆ.. ಈ ಅಂಕ ಪಡೆದುಕೊಂಡಿದ್ದಕ್ಕೆ ಅಪ್ಪ ನಡು ರೋಡಿನಲ್ಲಿ ಬೂ’ಟಿನಲ್ಲಿ ಹೊ’ಡೆದಿದ್ದರು. ಮನನೊಂದು ಆ’ತ್ಮಹ’ತ್ಯೆಗೆ ಯತ್ನಿಸಿದ್ದೆ ಒಂದು ವೇಳೆ ಹೋಗಿದ್ದರೆ ಇಂದು ಜಗ್ಗೇಶ್ ಸತ್ತವರಲ್ಲಿ ಒಬ್ಬ. ಮಕ್ಕಳನ್ನು ತಂದೆ ತಾಯಿ ಹುರುದುಂಬಿಸಿ ಸಾಧಕ ಹುಟ್ಟುತ್ತಾನೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.. ಸಧ್ಯ ಜಗ್ಗೇಶ್ ಅವರ ಈ ಮಾರ್ಕ್ಸ್ ಕಾರ್ಡ್ ಪೋಟೊ ತುಂಬಾನೆ ವೈ’ರಲ್ ಆಗಿದೆ..