ಸ್ನೇಹಿತರೇ, ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರು ನಟ ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಅ’ವಹೇ’ಳನವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಲೀ’ಕ್ ಆಗಿದ್ದು, ನೆನ್ನೆ ತಾನೇ ಜಗ್ಗೇಶ್ ಅವರು ತಮ್ಮ ತೋತಾಪುರಿ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಏಕಾಏಕಿ ಬಂದ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಸುತ್ತುವರಿದ ಡಿಬಾಸ್ ಅಭಿಮಾನಿಗಳು ನವರಸನಾಯಕನನ್ನ ತ’ರಾಟೆಗೆ ತೆಗೆದುಕೊಂಡಿದ್ದರು. ಇನ್ನು ಈ ವೀಡಿಯೋವಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈ’ರಲ್ ಆಗಿದ್ದು ಎರಡು ಕಡೆ ವಾದ ಪ್ರತಿವಾದಗಳು ನಡೆಯುತ್ತಿವೆ. ಏನೇ ತಪ್ಪಾಗಿರಲಿ ಹಿರಿಯ ನಟರಾಗಿರುವ ಜಗ್ಗೇಶ್ ಅವರು ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಹಿರಿಯ ನಟನಿಗೆ ಈ ರೀತಿಯಾಗಿ ಅ’ವಮಾ’ನ ಮಾಡಬಾರದಾಗಿತ್ತು ಎಂಬುದು ಬಹುತೇಕರ ವಾದವಾಗಿದೆ.
ಇದು ಬೇಕಿತ್ತ ನಿಮಗೆ..
— ನವರಸನಾಯಕ ಜಗ್ಗೇಶ್ (@Jaggesh2) February 23, 2021
https://t.co/aED9S8Abn0
ಇನ್ನು ಇದರಿಂದ ಅ’ಪಮಾ’ನಿತರಾಗಿ ಆ’ಕ್ರೋಶಗೊಂಡಿರುವ ನಟ ಜಗ್ಗೇಶ್ ಅವರು ತಮ್ಮ ಮೇಲೆ ಎಕಾ ಏಕಿ ಮು’ತ್ತಿಗೆ ಹಾಕಿದ ಅಭಿಮಾನಿಗಳ ಬಗ್ಗೆ ತುಂಬಾ ಬೇಸರ ಹಾಗೂ ನೋವಿನಿಂದ ತಮ್ಮ ಆ’ಕ್ರೋಶವನ್ನ ಹೊರಹಾಕಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿರುವ ನಟ ಜಗ್ಗೇಶ್ ತಾನು ಕನ್ನಡ ಚಿತ್ರರಂಗದಲ್ಲಿ ನಡೆದು ಬಂದ ದಾರಿ ಬಗ್ಗೆ ಹೇಳಿಕೊಂಡಿದ್ದು, ನಾನು ಚಿತ್ರರಂಗದಕ್ಕೆ ಕಾಲಿಟ್ಟ ಸಮಯದಲ್ಲಿ ಈಗ ಬಕೆಟ್ ಹಿಡಿಯೋರು ಯಾರೂ ಹುಟ್ಟಿರಲಿಲ್ಲ. ಆಗ ಘಟಾನು ಘಟಿ ನಟರಾಗಿದ್ದ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪ್ರಭಾಕರ್ ರವರಂತಹವರ ಜೊತೆ ಹೆಜ್ಜೆ ಹಾಕಿ ಬಂದವನು. ನಾನು ಈ ದಿನ ಕನ್ನಡ ಚಿತ್ರರಂಗದಲ್ಲಿ ಈ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ಕನ್ನಡಿಗರ ಪ್ರೀತಿಯಿಂದ ಎಂದು ತಮ್ಮ ನೋ’ವನ್ನ ತೋಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜ ನಟರುಗಳಾದ ರಾಜಣ್ಣ, ವಿಷ್ಣುವರ್ಧನ್, ಅಂಬರೀಷ್ ರವರ ನಿ’ಧನದ ಮರು ದಿನವೇ ಕನ್ನಡದ ಸ್ವಾಭಿಮಾನ ಕೂಡ ಇಲ್ಲದಂತಾಗಿದೆ. ನಿಮಗೆಲ್ಲಾ ತಿಳಿದಿರಲಿ..ಈಗ ಹಿರಿಯನಟರು ಅಂತ ನಾವು ಉಳಿದಿರುವುದು ಕೇವಲ ಮೂರ್ನಾಕು ಜನ ಮಾತ್ರ..ನಾನೊಬ್ಬ, ರವಿಚಂದ್ರನ್ ಒಬ್ಬ, ಶಿವರಾಜ್ ಕುಮಾರ್ ಒಬ್ಬ ಮತ್ತು ರಮೇಶ್ ಅರವಿಂದ್ ಒಬ್ಬರು ಮಾತ್ರ. ನಾವು ಹೋದ ಮೇಲೆ ತಿ’ಥಿ ಮಾಡಿ ಆನಂದ ಪಡಿ, ಸಂತೋಷ ಪಡಿ..ಎಂದು ಆಕ್ರೋಶದಿಂದ ತಮ್ಮ ನೋವನ್ನ ತೋಡಿಕೊಂಡಿದ್ದಾರೆ ಜಗ್ಗೇಶ್. ಸ್ನೇಹಿತರೇ, ಏನೇ ಆಗಲಿ ಜಗ್ಗೇಶ್ ಅವರು ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟರು. ಕನ್ನಡ ಚಿತ್ರರಂಗಕ್ಕೆ ಅವರದ್ದೇ ಆದ ಅಪಾರ ಕೊಡುಗೆ ಇದೆ. ಇಂತಹ ಹಿರಿಯ ನಟರನ್ನ ಈ ರೀತಿಯಾಗಿ ಅ’ವಮಾನ ಮಾಡುವುದನ್ನ ಸ್ವತಃ ನಟ ದರ್ಶನ್ ಅವರು ಕೂಡ ಇಷ್ಟಪಡೋದಿಲ್ಲ. ಇದು ಒಂದು ರೀತಿ ದರ್ಶನ್ ಅವರಿಗೇನೇ ಮಾಡೋ ಅ’ವಮಾನ ಎಂಬುದು ನಮ್ಮ ಅನಿಸಿಕೆ..ಇನ್ನು ಈ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..