Advertisements

ಮಾರ್ಕೆಟ್ ಬಿದ್ದೋಗಿದ್ದಾಗ ಶಂಕರ್ ನಾಗ್ ಎಂತಹ ಕೆಲಸ ಮಾಡ್ತಿದ್ದರು ಗೊತ್ತಾ? ಶಾಕ್..

Cinema

ಶಂಕರನಾಗ್ ಹಾಗೂ ನಟಿ ಮಂಜುಳಾ ಅವರ ವಿಷಯವನ್ನು ಬಿಗ್ ಬಾಸ್ ಶೊ ನಲ್ಲಿ ಹಿರಿಯ ನಟ ಜೈ ಜಗದೀಶ್ ಹೇಳಿಕೊಂಡಿದ್ದರು. ಯಾರು ಊಹೆ ಮಾಡದ ಯಾರಿಗೂ ಗೊತ್ತಿಲ್ಲದ ಶಂಕರ್ ನಾಗ್ ಬಗೆಗಿನ ಒಂದು ವಿಷಯವನ್ನು ನಟ ಜೈ ಜಗದೀಶ್ ಅವರು ತೆರೆದಿಟ್ಟಿದ್ದಾರೆ. ಈ ವಿಷಯ ತಿಳಿದು ಹಲವಾರು ಜನ ಒಂದು ಕ್ಷಣ ಶಾಕ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶಾಶ್ವತವಾಗಿ ಉಳಿದಿರುವ ಹೆಸರುಗಳಲ್ಲಿ ಶಂಕರ್ ನಾಗ್ ಕೂಡ ಒಬ್ಬರು ಅಷ್ಟೇ ಅಲ್ಲದೆ ಕನ್ನಡಿಗರ ಮನದಲ್ಲಿ ಆಟೋ ರಾಜ ಶಾಶ್ವತವಾಗಿ ನೆಲೆಯೂರಿದ್ದಾರೆ. ಅನೇಕ ಹಿಟ್ ಚಿತ್ರಗಳು ನೀಡಿ ಯಶಸ್ಸಿನ ನಾಯಕನಟ ಎಂದು ಎನಿಸಿಕೊಂಡಿದ್ದ ಶಂಕರ್ ನಾಗ್ ಅವರಿಗೂ ಒಂದು ಕಾಲದಲ್ಲಿ ಕಷ್ಟದ ಪರಿಸ್ಥಿತಿ ಬಂದಿತ್ತು ಜೈ ಜಗದೀಶ್ ರವರು ಬಹಿರಂಗ ಪಡಿಸಿದ್ದಾರೆ. ಜೈ ಜಗದೀಶ್ ಅವರು ಇತರ ಸ್ಪರ್ಧಿಗಳ ಜೊತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು.

[widget id=”custom_html-3″]

Advertisements

ಆ ಪ್ರಶ್ನೆ ಏನು ಅಂದರೆ ಒಬ್ಬ ಫೇಮಸ್ ನಟ ಮಾರ್ಕೆಟ್ ಬಿದ್ದಾಗ ವ್ಯಾನ್ ಹೊಳಗೆ ಕ್ಯಾಂಟೀನ್ ಇಟ್ಟುಕೊಂಡು ಓಡಾಡುತ್ತಿದ್ದರು ಅವರು ಯಾರು ಗೊತ್ತಾ ಎಂದು ಜಗದೀಶ್ ಅವರು ಪ್ರಶ್ನೆ ಕೇಳಿದರು. ಇದಕ್ಕೆ ಸ್ಪರ್ಧಿಗಳು ನಾನ ಹೆಸರುಗಳು ಹೇಳಿದರು ಕೊನೆಗೆ ಜೈಜಗದೀಶ್ ಅವರೇ ಅದಕ್ಕೆ ಉತ್ತರ ಶಂಕರ್ ನಾಗ್ ಎಂದು ಹೇಳಿದಾಗ ಎಲ್ಲರೂ ಒಮ್ಮೆ ಬೆಕ್ಕಸ ಬೆರಗಾದರು. ಶಂಕರ್ ನಾಗ್ ಅವರಿಗೆ ಮಾರ್ಕೆಟ್ ಯಾವಾಗ ಬಿದ್ದು ಹೋಗಿತ್ತು ಸರ್ ಎಂದು ಎಲ್ಲರೂ ಅಚ್ಚರಿಯಿಂದ ಕೇಳಿದಾಗ ಸುಮಾರು ಮೂರು ವರ್ಷ ಶಂಕರನಾಗ್ ಅವರಿಗೆ ಮಾರ್ಕೆಟ್ ಇರ್ಲಿಲ್ಲ ಹಾಗೂ ಮೆಟಾಡೋರ್ ವ್ಯಾನ್ ನಲ್ಲಿ ನಗರದ ಕ್ವೀನ್ಸ್ ಪ್ರತಿಮೆ ಬಳಿ ಕ್ಯಾಂಟೀನ್ ಇಟ್ಕೊಂಡು ಊಟ ತಿಂಡಿ ಮಾರುತ್ತಿದ್ದರು.

[widget id=”custom_html-3″]

ಆದರೆ ನಂತರ ದಿನಗಳಲ್ಲಿ ಅವರು ಮತ್ತೆ ಟಾಪ್ ನಟನಾಗಿ ಬೆಳೆದರು ಎಂದು ಜೈಜಗದೀಶ್ ಅವರು ಹೇಳಿದ್ದಾರೆ. ಅಂದಿನ ಕಾಲದಲ್ಲಿ ಮೆಟ್ರೋ ಪರಿಕಲ್ಪನೆಯನ್ನು ಮುಂದಿಟ್ಟಿದ್ದ ರಂತೆ ಶಂಕರ್ ನಾಗ್ ಅವರು. ಅವರ ಸ್ವಂತದ ಹಣದಲ್ಲಿ ವಿದೇಶಕ್ಕೆ ಹೋಗಿ ಮೆಟ್ರೋ ಬಗ್ಗೆ ತಿಳಿದುಕೊಂಡು ಬಂದಿದ್ದರಂತೆ. ಅಷ್ಟೇ ಅಲ್ಲದೆ ನಂದಿ ಬೆಟ್ಟದ ಮೇಲಿಂದ ಕೆಳಗಿನವರೆಗೆ ರೋಪ್ ವೆ ಹಾಕಲು ಶಂಕರ್ ನಾಗ್ ಅವರು ಯೋಜನೆ ಹಾಕಿಕೊಂಡಿದ್ದರು ಎಂಬ ಅಚ್ಚರಿಯ ವಿಷಯಗಳನ್ನು ಬಹಿರಂಗ ಪಡಿಸಿದರು ಜೈಜಗದೀಶ್ . ವಾವ್ ಇದನ್ನೆಲ್ಲ ಕೇಳಿದರೆ ಶಂಕರ್ ನಾಗ್ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ ಅಲ್ಲವೇ.

[widget id=”custom_html-3″]