Advertisements

ಅಂದು ವಿಜಯಲಕ್ಷ್ಮಿ ಸಿಂಗ್ ಅವರನ್ನ ಮದುವೆ ಆಗೋದು ಸ್ವತಃ ಜೈ ಜಗದೀಶ್ ಗೆ ಗೊತ್ತಿರಲಿಲ್ಲ.. ಅಂದು ಹೋಟೆಲ್ ನಲ್ಲಿ ನಡೆದಿದ್ದೇನು ಗೊತ್ತಾ?

Cinema

ಕನ್ನಡದ ಹಿರಿಯ ನಟರಲ್ಲಿ ಒಬ್ಬರಾದ ಜೈ ಜಗದೀಶ್ ಅವರ ಮದುವೆ ಕತೆ ಕೇಳಿದ್ರೆ ಆಶ್ಚರ್ಯ ಆಗುತ್ತೆ, ಅವರ ಬದುಕಿನಲ್ಲಿ ಅವರಿಗೆ ಗೊತ್ತಿಲ್ಲದೇ ಮದುವೆಯಾಯ್ತು ಅಂದ್ರೆ ನೀವು ನಂಬ್ತೀರಾ? ನಂಬಲೇಬೇಕು ಆ ಇಂಟ್ರೆಸ್ಟಿಂಗ್ ಕತೆಯನ್ನ ಹೇಳ್ತೀವಿ ಕೇಳಿ ನಾಯಕ ನಟ, ಪೋಷಕ ನಟ, ಖಳನಾಯಕ, ಎಲ್ಲ ಪಾತ್ರಗಳಿಗೂ ಒಪ್ಪುವ ಕನ್ನಡದ ಹೆಸರಾಂತ ಕಲಾವಿದ ಜೈ ಜಗದೀಶ್, ಇತ್ತೀಚಿಗಷ್ಟೇ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ರು, ಬಿಗ್‌ಬಾಸ್‌ನಲ್ಲಿಯೇ ತನ್ನ ಮನದಾಳದ ನೋವನ್ನ ಹಂಚಿಕೊಂಡ್ರು. ಹೌದು ಜೈ ಜಗದೀಶ್ ಅವರ ವೈಯಕ್ತಿಕ ಬದುಕಿನ ಬಗೆಗೆ ಯಾರು ಊಹಿಸಿಯೇ ಇರದ ಸ್ಫೋ’ಟ’ಕ ವಿಚಾರವನ್ನ ಅವರೇ ಹೇಳಿದ್ರು..

Advertisements

ನಿಮಗೂ ಗೊತ್ತಿರಬಹುದು ಜೈಜಗದೀಶ್ ಅವರ ವೈವಾಹಿಕ ಬದುಕಿನ ಬಗೆಗೆ ವಿಜಯಲಕ್ಷಿ ಅವರನ್ನ ಮದುವೆಯಾಗುವ ಮುನ್ನವೇ ಜೈಜಗದೀಶ್ ಅವರಿಗೆ ಅದಾಗಲೇ ಒಂದು ಮದುವೆಯಾಗಿ ಹೋಗಿತ್ತು. ರೂಪಾ ಎನ್ನುವವರನ್ನ ಮದುವೆಯಾಗಿ ಒಂದು ಮುದ್ದಾದ ಹೆಣ್ಣುಮಗು ಕೂಡ ಇತ್ತು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಆಗದ ಕಾರಣ ಇಬ್ಬರು ಪರಸ್ಪರ ಒಪ್ಪಿ ವಿಚ್ಚೇದನವನ್ನ ಪಡೆದುಕೊಂಡಿದ್ರು. ವಿಚ್ಚೇದನದ ಬಳಿಕ ಜೈಜಗದೀಶ್ ಮಂಕಾಗಿ ಹೋಗಿದ್ದರು, ದೂರದ ಹೋಟೆಲ್ ಒಂದರಲ್ಲೇ ಕಾಲ ಕಳೆಯಲು ಶುರು ಮಾಡಿದ್ರು.
ಆ ಸಮಯದಲ್ಲಿಯೇ ಜೈಜಗದೀಶ್ ಬಾಳಿಗೆ ಬೆಳಕಾಗಿ ಬಂದವರು ವಿಜಯಲಕ್ಷ್ಮಿ ಸಿಂಗ್..

ಇಬ್ಬರು ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ರು, ಆ ವೇಳೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗ್ತದೆ. ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದ ಜೈಜಗದೀಶ್ ಅವರ ಬಾಳಿಗೆ ನಂದಾದೀಪವಾಗಿ ವಿಜಯಲಕ್ಷ್ಮಿ ಸಿಂಗ್ ಅವರು ಎಂಟ್ರಿ ಕೊಡ್ತಾರೆ, ಆದರೆ ವಿಜಯಲಕ್ಷ್ಮಿ ಅವರನ್ನ ಜೈಜಗದೀಶ್ ಮನಸಾರೆ ಪ್ರೀತಿಸಿದ್ರೂ ಕೂಡ ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು, ಆಗ ಜೈಜಗದೀಶ್ ಅವರಿಗೆ ಗೊತ್ತಾಗದ ಹಾಗೇ ಅವರನ್ನೇ ವಿಜಯಲಕ್ಷ್ಮಿ ಮದುವೆಯಾಗಿದ್ದಾರೆ ಅಂದ್ರೆ ನೀವು ನಂಬಲೇಬೇಕು.
ಹೌದು ಒಂದು ದಿನ ಮೈಸೂರಿಗೆ ಹೋಗಿದ್ದ ಜೈಜಗದೀಶ್ ಅವರಿಗೆ ವಾಪಾಸ್ ಬರುವಾಗ ಒಂದು ಫೈಸ್ಟಾರ್ ಹೋಟೆಲ್‌ಗೆ ಬರಲಿಕ್ಕೆ ವಿಜಯಲಕ್ಷ್ಮಿ ಹೇಳ್ತಾರೆ..

[widget id=”custom_html-3″]

ಅದರಂತೆ ಜೈಜಗದೀಶ್ ಅವರು ಕೂಡ ಸುಮಾರು ಹನ್ನೊಂದು ಮೂವತ್ತರ ಹೊತ್ತಿಗೆ ಬರ‍್ತಾರೆ, ಇವತ್ತು ತನ್ನ ಮದುವೆ ಅನ್ನೋ ಚಿಕ್ಕ ಸುಳಿವು ಕೂಡ ಜೈಜಗದೀಶ್ ಅವರಿಗೆ ಇರಲಿಲ್ಲ. ಹೋಟೆಲ್‌ಗೆ ಬರುತ್ತಿದ್ದಂತೆ ವಿಜಯಲಕ್ಷ್ಮಿ ಅವರು ಇವತ್ತು ನಮ್ಮ ಮದುವೆ ಅಂತ ಹೇಳುತ್ತಾರೆ ಆಗ ಜೈಗದೀಶ್ ಅವರಿಗೆ ಒಂದು ಕ್ಷಣ ಶಾಕ್ ಆದ್ರೂ ಸುಮ್ಮನೆ ತಾಳಿ ಕಟ್ಟುತ್ತಾರೆ, ಅಷ್ಟಕ್ಕೂ ನೀವು ಕೇಳಬಹುದು ವಿಜಯಲಕ್ಷ್ಮಿ ಅವರು ಯಾಕೇಆ ರೀತಿ ದಿಢೀರ್ ನಿರ್ಧಾರ ತೆಗೆದುಕೊಂಡ್ರು ಅಂತ..

[widget id=”custom_html-3″]


ಸ್ನೇಹಿತರೇ ವಿಜಯಲಕ್ಷ್ಮಿ ಅವರ ಮನೆಯಲ್ಲಿ ವಿವಾಹದ ಬಗ್ಗೆ ಒತ್ತಡ ಇದ್ದದ್ದರಿಂದ ಅವರು ಜಾಸ್ತಿದಿನ ಕಾದರೆ ಸಮಸ್ಯೆಯಾಗ್ತದೆ ಅಂತ ಈ ನಿರ್ಧಾರ ಮಾಡ್ತಾರೆ. ಅದೇನೆ ಯೋಚಿಸಿದ್ರೂ ಇಬ್ಬರ ಮದುವೆಯಂತು ಆಗಿಹೋಗಿದೆ, ಮೂವರು ಮುದ್ದಾದ ಹೆಣ್ಣು ಮಕ್ಕಳು ಸಹ ಈ ಜೋಡಿಗಿದೆ. ಈಗಲೂ ಸಹ ಎಸ್ಟೇಟ್ ಇನ್ನಿತರ ಕಡೆ ಹೋಗುವಾಗ ಸಕುಟುಂಬ ಸಮೇತರಾಗಿ ಅಂದರೆ, ಜೈಜಗದೀಶ್ ಅವರ ಮೊದಲನೇ ಹೆಂಡತಿ ಹಾಗೂ ಮಗಳನ್ನು ಸಹ ವಿಜಯಲಕ್ಷ್ಮಿ ಅವರು ಆಮಂತ್ರಿಸುತ್ತಾರಂತೆ, ವಿಜಯಲಕ್ಷ್ಮಿ ಅವರ ಅನ್ಯೋನ್ಯತೆ, ಜೈ ಜಗದೀಶ್ ಮೇಲಿನ ಅವರ ಪ್ರೀತಿ, ಮದುವೆಗೆ ಅವರು ತೆಗದುಕೊಂಡ ನಿರ್ಧಾರದ ಬಗ್ಗೆ ನಿವೇನು ಹೇಳ್ತಿರಾ?