Advertisements

ಜೈ ಜಗದೀಶ್ ಮೊದಲ ಹೆಂಡ್ತಿ ಮತ್ತು ಮಗಳ ರಹಸ್ಯ ಬಯಲು.. ಮದುವೆ ಮಾಡಿಸಿದ್ದು ವಿಷ್ಣುವರ್ಧನ್! ಮುಂದೇನಾಯ್ತು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ.. ಆದರೆ ತನ್ನ ಮೊದಲನೆಯ ಹೆಂಡತಿ ಹಾಗು ಮಗಳ ಬಗೆಗಿನ ರಹಸ್ಯವನ್ನು ಜೈ ಜಗದೀಶ್ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲಾ. ಅನೇಕ ವರ್ಷಗಳಿಂದ ತನ್ನಲ್ಲೇ ಇಟ್ಟುಕೊಂಡು ಕೊರಗುತ್ತಿದ್ದ ನೋವನ್ನು ಬಿಗ್ ಬಾಸ್ ಮನೆಯಲ್ಲಿ ಹೊರ ಹಾಕಿದ್ದಾರೆ.. 1976 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಜೈ ಜಗದೀಶ್ ಆಗಲೇ ಸಕ್ಸಸ್ ಕಂಡ ನಟ. ಆ ಯಶಸ್ಸು ಬೇಕಾದಷ್ಟು ಹಣವನ್ನು ಸಂಪಾದನೆ ಮಾಡಿಕೊಟ್ಟಿತು. 1980 ರಲ್ಲಿ ಜೈ ಜಗದೀಶ್ ಅವರಿಗೆ ರೂಪ ಅವರ ಪರಿಚಯವಾಯ್ತಂತೆ.. ನಂತರ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿ ಮದುವೆಯಾಗಲು ನಿರ್ಧಾರ ಮಾಡಿದರು.

[widget id=”custom_html-3″]

Advertisements

ಈ ವಿಷಯ ಮನೆಯವರಿಗೆ ಹೇಳಿದರೆ ಎಲ್ಲಿ ನಮ್ಮಿಬ್ಬರನ್ನು ದೂರ ಮಾಡ್ತಾರೇ ಎಂದು ಭಾವಿಸಿ ಯಾರಿಗೂ ಹೇಳದೇ ವಿಷ್ಣುವರ್ಧನ್ ಅವರ ಸಹಾಯ ಪಡೆದು ಮದುವೆಯಾದ ಜೈ ಜಗದೀಶ್ ಅವರು ಒಂದಷ್ಟು ದಿನ ವಿಷ್ಣುವರ್ಧನ್ ಅವರ ಮನೆಯಲ್ಲಿ ಇದ್ದರಂತೆ.. 1982 ರಲ್ಲಿ ನನ್ನ ಮಗಳು ಹುಟ್ಟಿದಳು. 6 ವರ್ಷದ ನಂತರ ನನಗೂ ರೂಪಾಗು ಮನಸ್ಥಾಪ ಬಂತು.. ಆನಂತರ ಮತ್ತೆ ನಾವು ಬೇಟಿಯಾಗಲಿಲ್ಲಾ. ನಾನು ಮನೆ ಬಿಟ್ಟು ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡು ಇದ್ದೆ. ಸುಮಾರು 8 ವರ್ಷಗಳು ಹೋಟೆಲ್ ನಲ್ಲಿ ಇದ್ದೆ..

[widget id=”custom_html-3″]

ಮಗಳಿಗಾಗಿ ನಾನು ರೂಪಾಗೆ ವಿ’ಚ್ಚೇ’ದನ ಕೂಡ ಕೊಟ್ಟಿರಲಿಲ್ಲಾ. ಆದರೆ ಒಂದು ದಿನ ವಿಚ್ಚೇದನ ಬೇಕು ಅಂಥ ಕೇಳಿದಳು.. ನಾನು ಪೇಪರ್ಸ್ ಗೆ ಸೈನ್ ಮಾಡಿಕೊಟ್ಟೆ. ನಂತರ ನನ್ನ ಮಗಳನ್ನು ಕರೆದುಕೊಂಡು ಹೊರಟು ಹೋದಳು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.. ಎಷ್ಟೋ ವರ್ಷಗಳಾದ ಮೇಲೆ ನನ್ನ ಮಗಳನ್ನು ಮತ್ತೆ ಬೇಟಿ ಮಾಡಿದೆ. ನಂತರ ಆಕೆಗೆ ಮದುವೆ ಮಾಡಿದ್ವಿ.. 6 ವರ್ಷ ಗಂಡನ ಜೊತೆ ಚೆನ್ನಾಗಿಯೇ ಇದ್ದಳು ಆದರೆ ಪ್ರತೀ ಬಾರಿ ಅವಳಿಗೆ ನನ್ನ ಅನುಪಸ್ಥಿತಿ ಕಾಡುತ್ತಿತ್ತು.. 6 ವರ್ಷಗಳಾದರು ಮಕ್ಕಳಾಗಲಿಲ್ಲ. ಯಾಕೆ ಅಂಥ ಒಂದು ದಿನ ವಿಚಾರಿಸಿದಾಗ ನನ್ನ ಮಗಳು ಹೇಳಿದ್ದು ಗಂಡನಿಗೆ ಮಗು ಬೇಡವಂತೆ ಎಂದು..

[widget id=”custom_html-3″]

ಅಲ್ಲಿಗೆ ಮಗಳ ಮದುವೆ ಕೂಡ ಮುರಿದು ಬಿತ್ತು. ನನ್ನ ಮಗಳಿಗೆ ಒಂದು ಕಡೆ ತಂದೆಯ ಆಸರೆ ಇರಲಿಲ್ಲಾ.. ಇನ್ನೊಂದು ಕಡೆ ಗಂಡ ಇಲ್ಲಾ. ನನ್ನ ಮತ್ತು ರೂಪಾಳ ತಪ್ಪಿನಿಂದ ನನ್ನ ಮಗಳು ಕಷ್ಟದಿಂದ ಬಳಲುವಂತೆ ಆಯಿತು. ಈಗ ತಾಯಿ ಜೊತೆ ಇದ್ದಾಳೆ.. ಅವಳು ಆದಷ್ಟು ಬೇಗ ಲೈಪ್ ನಲ್ಲಿ ಸೆಟಲ್ ಆಗ್ಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ.. ಈಗೆ ಎಷ್ಟೋ ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದ ತಮ್ಮ ನೋವನ್ನು ಹೊರಹಾಕಿದ್ದಾರೆ ಜೈ ಜಗದೀಶ್ ಅವರು‌.