Advertisements

ಈ ಟ್ರೈನ್ ನಲ್ಲಿ ಪ್ರಯಾಣಿಸುವುದು ಒಂದೇ ಹುಡುಗಿ.. ಆಕೆಗಾಗಿ 12 ವರ್ಷದಿಂದ ಟ್ರೈನ್ ಓಡುತ್ತಿದೆ ಯಾಕೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ನಮ್ಮ ದೇಶದಲ್ಲಿರುವ ರೈಲುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ.. ಸ್ವಚ್ಚತೆಯನ್ನು ಕಾಪಾಡುವುದಿಲ್ಲ ಎನ್ನುವುದು ತುಂಬಾ ಜನರ ಅಭಿಪ್ರಾಯವಾಗಿದೆ. ಇನ್ನೂ ನಾವೇನಾದರೂ ಎಕ್ಸಾಮ್ ಟೈಮ್ ನಲ್ಲಿ ಅಪ್ಪಿ ತಪ್ಪಿ ರೈಲು ಹತ್ತಿದರೆ ಕತೆ ಮುಗಿದಾಗೆ..  ಯಾಕೆಂದರೆ ಎಲ್ಲಿ ಸಿಗ್ನಲ್ ಬಿದ್ದು ರೈಲು ನಿಲ್ಲಿಸಿ ಬಿಡುತ್ತಾರೆ ಅನ್ನುವ ಭಯ. ಈಗಂತೂ ನಮ್ಮ ದೇಶದ ರೈಲ್ವೇ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ.. ಇದರ ಜೊತೆ ಜಪಾನ್ ಒಂದು ರೈಲಿನ ಸ್ಟೋರಿ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗುತ್ತದೆ..

Advertisements

ಅಷ್ಟಕ್ಕೂ ಆಶ್ಚರ್ಯ ಆಗುವಂತಹ ವಿಷಯ ಈ ರೈಲಿನ ಸ್ಟೋರಿಯಲ್ಲಿ ಏನಿದೆ ಎಂದು ನಿಮಗ ಅನಿಸುತ್ತದೆ. ತಿಳಿಯೋಣ ಬನ್ನಿ.. ಕ್ಯು ಶಿರಟಾಕಿ. ಜಪಾನ್ ಪ್ರದೇಶ ಒಂದು ಐಸ್ ಲ್ಯಾಂಡ್ ಆಗಿದ್ದು ಸಿಟಿಯಿಂದ ಅಲ್ಲಿಗೆ ಒಂದು ರೈಲು ಪ್ರತಿದಿನ ಬರುತ್ತಿತ್ತು.. ಆದರೆ ಆ ರೈಲಿನಲ್ಲಿ ಯಾರು ಪ್ರಯಾಣ ಮಾಡದಿದ್ದ ಕಾರಣ ಅದನ್ನು ನಿಲ್ಲಿಸಲು ಸರ್ಕಾರ ಮುಂದಾಗುತ್ತದೆ. ಆಗ ಅವರಿಗೆ ಒಂದು ಆಸಕ್ತಿದಾಯಕ ವಿಷಯ ಗೊತ್ತಾಗುತ್ತದೆ.. ಅದೇನೆಂದರೆ ಒಂದು ಹುಡುಗಿ ಪ್ರತಿದಿನ ಶಾಲೆಗೆ ಇದೇ ರೈಲಿನಲ್ಲಿ ಹೋಗಿ ಬರುತ್ತಿದ್ದಳು ಎಂದು ಸರ್ಕಾರಕ್ಕೆ ತಿಳಿಯುತ್ತದೆ..

ಇದಾದ ನಂತರ ಈ ರೈಲನ್ನು ಸ್ಟಾಪ್ ಮಾಡಿದರೆ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸಿದ ಸರ್ಕಾರ ಈ ಒಂದು ಹುಡುಗಿಗಾಗಿ ರೈಲನ್ನು ಓಡಿಸಲು ನಿರ್ಧಾರ ಮಾಡುತ್ತಾರೆ.. ಈಗೆ ಸುಮಾರು 12 ವರ್ಷಗಳ ಕಾಲ ಒಬ್ಬ ಹುಡುಗಿಗೋಸ್ಕರ ರೈಲು ಪ್ರತಿದಿನ ಬರುತ್ತಿತ್ತು.. ಬೆಳಗ್ಗೆ ಶಾಲೆಯ ಸಮಯಕ್ಕೆ ಹಾಗೂ ಸಾಯಂಕಾಲ ಶಾಲೆಯ ಬಿಡುವ ಸಮಯಕ್ಕೆ ರೈಲಿನ ವೇಳಾಪಟ್ಟಿ ಮಾಡಲಾಯಿತು.. ಈಗ ಆ ಹುಡುಗಿ ಒಳ್ಳೆಯ ಶಿಕ್ಷಣಕ್ಕಾಗಿ ಬೇರೆ ಸಿಟಿಯ ಹಾಸ್ಟೆಲ್ ನಲ್ಲಿ ಓದುತ್ತಿದ್ದಾಳೆ. ಇನ್ನೂ ಈ ಹುಡುಗಿ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಹೋದ ನಂತರ ಈ ರೈಲನ್ನು ಕೂಡ ಸ್ಟಾಪ್‌ ಮಾಡುತ್ತಾರೆ..

ನಿಮಗೆ ಅನಿಸಬಹುದು ಮೊದಲೇ ಈ ಹುಡುಗಿಯನ್ನು ಹಾಸ್ಟೆಲ್ ನಲ್ಲಿ ಸೇರಿಸಬಹುದಾಗಿತ್ತಲ್ವಾ ಎಂದು.. ಶಾಲೆಯಲ್ಲಿ ಓದುವ ಮಕ್ಕಳನ್ನು ಪೋಷಕರಿಂದ ದೂರ ಮಾಡುವುದು ಸರ್ಕಾರಕ್ಕೆ ಇಷ್ಟವಿಲ್ಲದಿದ್ದ ಕಾರಣ ಅದಕ್ಕಾಗಿ ಸರ್ಕಾರವೇ ಈ ರೈಲಿನ ವೆಚ್ಚವನ್ನು ನೋಡಿಕೊಂಡು ಪ್ರತಿದಿನ ರೈಲನ್ನು ಕಳುಹಿಸುತ್ತಿದ್ದರು.. ಒಬ್ಬ ಪ್ರಜೆಗೆ ದೇಶ ಕೊಡುವ ಗೌರವ ನೊಡಿದರೆ ನಿಜಕ್ಕೂ ಗ್ರೇಟ್ ಅನಿಸುತ್ತದೆ.. ಒಂದು ಮಗುವಿಗಾಗಿ ಆ ಮಗು ತಂದೆ ತಾಯಿ ಜೊತೆ ಇರಲಿ ಎಂಬ ಒಂದೇ ಒಂದು ಕಾರಣಕ್ಕೆ ಹನ್ನೆರಡು ವರ್ಷ ರೈಲಿನ ವೆಚ್ಚವನ್ನು ನೋಡಿಕೊಂಡ ಜಪಾನ್ ಸರ್ಕಾರ ನಿಜಕ್ಕೂ ಹೆಮ್ಮೆ ಅನಿಸುತ್ತದೆ.. ಇದರ ಬಗ್ಗೆ ನೀವೇನು ಹೇಳ್ತೀರಾ ಅನಿಸಿಕೆ ತಿಳಿಸಿ..