Advertisements

ಈ 22 ವರ್ಷದ ಭಿಕ್ಷುಕ ಮಾಡಿರುವ ಕೆಲಸ ನೋಡಿ ಇಡೀ ಪ್ರಪಂಚವೇ ತಿರುಗಿ ನೋಡಿದೆ.. ಅಷ್ಟಕ್ಕೂ ಈತ ಮಾಡಿದ ಕೆಲಸ ಎಂತದ್ದು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಸತತ ಗುರಿ ಹಾಗು ಪರಿಶ್ರಮವಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಸ್ಬಷ್ಟ ಉದಾಹರಣೆ.. ಜೀವನದಲ್ಲಿ ಹತ್ತಾರು ಅಡೆ ತಡೆಗಳು ಬಂದರು ಎಂತಹ ಕಷ್ಟದ ಪರಿಸ್ಥಿತಿಯಗಳಲ್ಲಿಯೂ ಕೂಡ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ವ್ಯಕ್ತಿ ಆಕಾಶದ ಎತ್ತರಕ್ಕೆ ಏರುತ್ತಾನೆ. ಅದೇ ರೀತಿ ಚೆನ್ನೈನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇಂದು ಚೆನ್ನೈನಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಪೇಮಸ್ ಆಗಿದ್ದಾನೆ.. ಹಾಗಾದರೆ ಈ ಭಿಕ್ಷುಕ ಸಾಧಿಸಿದ್ದಾದರು ಏನು, ಚೆನ್ನೈನಲ್ಲಿ ಅಷ್ಟೊಂದು ಪೇಮಸ್ ಆಗಲು ಕಾರಣವೇನು ಗೊತ್ತಾ? ಈತನ ಹೆಸರು ಜೈವಿಲ್..

Advertisements

ಭಿಕ್ಷುಕನಾಗಿದ್ದ ಈತ ಇಂದು ಲಂಡನ್ ನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜನಿಯರಿಂಗ್ ಕೆಲಸ ಮಾಡುತ್ತಿದ್ದಾನೆ. ಒಬ್ಬ ಭಿಕ್ಷುಕ ಇಂಜನಿಯರಿಂಗ್ ಆಗಿ ಲಂಡನ್ ನಲ್ಲಿ ಕೆಲಸ ಮಾಡುತ್ತಿದ್ದಾನಾ ಎಂದು ನಿಮಗೆ ಆಶ್ಚರ್ಯವಾಗಬಹುದು.. ಆದರೆ ಇದು ಖಂಡಿತ ಸತ್ಯ ಕಥೆ. ಸುಮಾರು ಮೂವತ್ತು ವರ್ಷದ ಹಿಂದೆ ಜೈವಿಲ್ ನ ತಂದೆ ತಾಯಿ ತಮ್ಮ ಊರಿನಲ್ಲಿ ತುಂಬಾ ಸಾಲ ಮಾಡಿಕೊಂಡು ಚೆನ್ನೈಗೆ ವಲಸೆ ಬರುತ್ತಾನೆ. ಆ ಸಮಯದಲ್ಲಿ ಅವರಿಗೆ ಯಾವುದೇ ಕೆಲಸ ಸಿಗುವುದಿಲ್ಲ.. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಾಗ ಭಿಕ್ಷೆ ಬೇಡಲು ಶುರುಮಾಡುತ್ತಾನೆ. ಈಗೆ ಕೆಲವು ದಿನಗಳು ಕಳೆದ ನಂತರ ಜೈವಿಲ್ ನ ತಂದೆ ಹೃದಯ ಸಮ’ಸ್ಯೆಯಿಂದ ತೀರಿಕೊಳ್ಳುತ್ತಾರೆ..

ಅದೇ ಸಮಯದಲ್ಲಿ ತಾಯಿ ಅ’ನಾರೋಗ್ಯ ಪೀ’ಡಿತರಾಗುತ್ತಾರೆ. ಆಗ ಜೈವಿಲ್ ಗೆ ಕೇವಲ 6 ವರ್ಷ ವಯಸ್ಸು. ಈಗೆ ಒಮ್ಮೆ ತಾಯಿಯ ಪಕ್ಕದಲ್ಲಿ ಜೈವಿಲ್ ಅಳುತ್ತಾ ಕುಳಿತಿರುವುದನ್ನ ಅಲ್ಲಿಯೇ ಹೋಗುತ್ತಿದ್ದ ಉಮಾ ಮಧುರಂ ದಂಪತಿಗಳು ಗಮನಿಸುತ್ತಾರೆ.. ಆಗ ಅವರಿಗೆ ಮನಸ್ಸಿಗೆ ತುಂಬಾ ನೋವಾಗಿ ಹೇಗಾದರೂ ಮಾಡಿ ಆತನಿಗೆ ಸಹಾಯ ಮಾಡಬೇಕೆಂದು ಆ ಹುಡುಗನ ಕಷ್ಟದ ಬಗ್ಗೆ ಒಂದು ಪೊಟೊವನ್ನು ಹಿಡಿಯುತ್ತಾರೆ. ಮತ್ತು ಆ ಪೊಟೊಗೆ ಒಂದು ಟೈಟಲ್ ಬರೆದು ಪಬ್ಲೀಶ್ ಮಾಡುತ್ತಾರೆ.. ಆ ಪೊಟೊವನ್ನು ನೋಡಿದ ಪ್ರತಿಯೊಬ್ಬರು ಆತನ ಸಹಾಯಕ್ಕೆ ಬರುತ್ತಾರೆ.

ಹಾಗೆ ಸೂಯಂ ಎಂಜಿಒ ಟ್ರಸ್ಟ್ ನ ಮೂಲಕ ಆತನ ವಿದ್ಯಾಭ್ಯಾಸಕ್ಕೆ ತಗಲುವ ಖರ್ಚನ್ನು ನೀಡುತ್ತಾರೆ.. ಜೈವಿಲ್ ಬೆಳಗ್ಗೆ ಶಾಲೆಗೆ ತೆರಳಿ ಮಧ್ಯಾಹ್ನ ಭಿಕ್ಷೆ ಬೇಡಿ ತಾಯಿಯನ್ನು ನೋಡಿಕೊಳ್ಳುತ್ತಾ ಹೇಗೋ ಪಿಯುಸಿ ಮುಗಿಸುತ್ತಾ‌ನೆ. ಮತ್ತು ಪಿಯುಸಿಯಲ್ಲಿ ಟಾಪ್ ರ್ಯಾಂಕರ್ ಆಗಿ ಹೊರ ಹೊಮ್ಮುತ್ತಾನೆ.. ಹಾಗೆ ಆತ ರ್ಯಾಂಕ್ ಬರುತ್ತಿದ್ದಂತೆ ಕೆಲವರು ಆತನ ಸಹಾಯಕ್ಕೆ ನಿಲ್ಲುತ್ತಾರೆ. ನಂತರ ಲಂಡನ್ ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಂಟರ್ಸ್ ಪರೀಕ್ಷೆಯಲ್ಲಿ ಕ್ಲಿಯರ್ ಮಾಡಿ ಅಲ್ಲಿ ಇಂಜನಿಯರಿಂಗ್ ಜಾಬ್ ಪಡೆದುಕೊಳ್ಳುತ್ತಾನೆ..

ಹಾಗೆ ತಾಯಿಗೂ ಈ ವಿಷಯ ತಿಳಿಸುತ್ತಾನೆ. ನಂತರ ಬಂದ ಹಣದಿಂದ ತಾನು ಪಟ್ಟ ಕಷ್ಟ ಬೇರೆ ಯಾರು ಪಡಬಾರದು ಎಂದು ಬಡ ಹಾಗು ಭಿಕ್ಷುಕರಿಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡುತ್ತಾನೆ.. ಮತ್ತು ಬಡವರಿಗೆ ಸಹಾಯ ಮಾಡತ್ತಾನೆ. ನೋಡಿ ಸ್ನೇಹಿತರೆ ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತಾನೆ ಅನ್ನುವುದಕ್ಕೆ ಈತನೇ ಸಾಕ್ಷಿ.. ಏನೂ ಇಲ್ಲದಿದ್ದರು. ಈತನಲ್ಲಿ ಇರುವ ಆತ್ಮ ವಿಶ್ವಾಸ ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಯಿತು. ಸ್ನೇಹಿತರೆ ನಿಜವಾದ ಸಾಧನೆ ಅಂದರೆ ಇದೆ ಅಲ್ಲವೇ..