Advertisements

ಜೇನು ಸಾಕಾಣಿಕೆ ಮಾಡೋದು ಹೇಗೆ! ಇದಕ್ಕೆ ಎಷ್ಟು ಬಂಡವಾಳ ಬೇಕು ಗೊತ್ತಾ? ಇದರಿಂದ ಒಳ್ಳೆ ಲಾಭ ಇದೆ..

Kannada Mahiti

ಕೃಷಿ ಮಾಡುವ ಮೂಲಕ ನೀವು ಹಣ ಗಳಿಸಬೇಕಾ ಹಾಗಿದ್ದರೆ ಈ ಸ್ಟೋರಿನಾ ಒಮ್ಮೆ ಓದಿ.. ಕೃಷಿ ಎಂದರೆ ಕೇವಲ‌ ಗದ್ದೆಗಳಲ್ಲಿ ಕೆಲಸ ಮಾಡುವುದಲ್ಲ ಅದನ್ನ ಹೊರತು ಪಡಿಸಿ ಅನೇಕ ಉಪ ಕಸುಬುಗಳು ಈ ಕೃಷಿಯಲ್ಲಿ ಬರುತ್ತವೆ. ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದರ ಮೂಲಕ ಲಾಭ ಗಳಿಸಬಹದು.. ಸಾಮಾನ್ಯವಾಗಿ ಇಲ್ಲಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ,ಮೀನಿಗಾರಿಕೆ ಇನ್ನು ಹಲವು ಉಪ ಕಸುಬುಗಳಾಗಿವೆ. ಅದರಲ್ಲಿ ಪ್ರಮುಖವಾಗಿರುವುದು ಜೇನು ಸಾಕಾಣಿಕೆ. ಜೇನು ಸಾಕಾಣಿಕೆ ಮಾಡುವುದರ ಮೂಲಕ ಲಾಭ ಗಳಿಸಬಹುದಾಗಿದೆ. ಹಾಗಾದರೆ ಜೇನು ಸಾಕಾಣಿಕೆ ಮಾಡುವುದು ಹೇಗೆ, ಜೇನು ಸಾಕಾಣಿಕೆ ಮಾಡಲು ಯಾವೆಲ್ಲ ಕ್ರಮಗಳನ್ನು ತಿಳಿದುಕೊಳ್ಳಬೇಕೆಂಬುವುದನ್ನು ಈ ಸ್ಟೋರಿಯಲ್ಲಿ ಹೇಳ್ತಿವಿ‌.. ಜೇನು ಸಾಕಾಣಿಕೆಯನ್ನು ಸಾಮಾನ್ಯವಾಗಿ ಜೇನು ತುಪ್ಪ ಪಡೆಯಲು ಮಾಡುತ್ತಾರೆ. ಜೇನು ತುಪ್ಪ ಸಮಾನ್ಯವಾಗಿ ಮನುಷ್ಯ ಆರೋಗ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆಯು ಹೆಚ್ಚಿದೆ.

[widget id=”custom_html-3″]

Advertisements

ಜೇನು ತುಪ್ಪ ತನ್ನ ರುಚಿಯಿಂದ ಮಾತ್ರವಲ್ಲದೆ, ಔ’ಷ’ಧಿಯ ಗುಣಗಳಿಂದಲೂ ಬಹು ಉಪಯುಕ್ತವಾಗಿದೆ. ತೂಕ ನಿರ್ವಹಣೆ, ರೋಗ ನಿರೋಧಕ ಶ’ಕ್ತಿ ಹೆಚ್ಚಳ, ಚರ್ಮದ ತೇವಾಂಶ ನಿರ್ವಹಣೆ, ಸ್ಮರಣಾ ಶಕ್ತಿ ಹೆಚ್ಚಳ, ಶೀತ, ಸೈ’ನ’ಸ್ ಮತ್ತು ಕೆಮ್ಮಿಗೆ ರಾಮಬಾಣ, ತಲೆ ಹೊಟ್ಟಿನ ಸ’ಮ’ಸ್ಯೆ ನಿವಾರಣೆ ಜತೆಗೆ ನಿದ್ರಾ ಹೀನತೆಗೂ ಮ’ದ್ದು ಜೇನುತು’ಪ್ಪ ಅತ್ಯಂತ ಪರಿ’ಣಾ’ಮಕಾರಿ. ಇದನ್ನು ಸಮಾನ್ಯವಾಗಿ ಎಲ್ಲದರಲ್ಲಿಯೂ ಬಳಸಲಾಗುತ್ತದೆ. ಜೇನು ಕೃಷಿಯಲ್ಲಿ ವರ್ಷಕ್ಕೆ ಲಕ್ಷರೂ ವರೆಗೆ ಗಳಿಸುವ ಮೂಲಕ‌ ಲಾಭ ಪಡೆದವರಿದ್ದಾರೆ. ಜೇನು ಸಾಕಾಣಿಕೆಯನ್ನು ಮುಖ್ಯ ಉದ್ದಿಮೆಯನ್ನಾಗಿ ಮಾಡಿಕೊಂಡಿರುವ ಮಂದಿ ವರ್ಷಕ್ಕೆ ಒಂದು ಕೋಟಿಯಿಂದ ಎರಡು ಕೋಟಿ ರೂ ವರೆಗೆ ಗಳಿಸಿರುವ ಜನ ನಮ್ಮ ಮಧ್ಯದಲ್ಲಿದ್ದಾರೆ. ಇನ್ನು ಜೇನು ಸಾಗಾಣಿಕೆಯನ್ನು ಕೃಷಿ ಜತೆಗೆ ಮುಖ್ಯ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಮಂದಿ ವರ್ಷಕ್ಕೆ 20 ರಿಂದ 30 ಲಕ್ಷ ರೂ ಗಳಿಸುತ್ತಿದ್ದಾರೆ.

[widget id=”custom_html-3″]

ಸಣ್ಣ ಮಟ್ಟದಲ್ಲಿ ಎಂದರೆ ಐದರಿಂದ ಹತ್ತು ಜೇನು ಪೆಟ್ಟಿಗೆ ಇಟ್ಟುಕೊಂಡಿರುವ ಮಂದಿ ಹೆಚ್ಚು ಪರಿಶ್ರಮ ಇಲ್ಲದೆ ತಿಂಗಳಿಗೆ ಐದಾರು ಸಾವಿರ ರೂ ಗಳಿಸುತ್ತಿದ್ದಾರೆ ಹಾಗಾಗಿ ಇದು ಆರಾಮದಾಯಕ ಕೆಲಸವಾಗಿದ್ದು ವ್ಯವಸ್ಥಿತ ಮತ್ತು ಕ್ರಮಬದ್ದತೆಯ ಮೂಲಕ ಅಧಿಕ ಲಾಭ ಪಡೆಯಬಹದು. ಇನ್ನು ಇದನ್ನು ಪ್ರಾರಂಭಿಸಲು ಹೆಚ್ಚು ಬಂಡವಾಳ ಬೇಕೆಂದೆನಿಲ್ಲ. ಕಡಿಮೆ ಖರ್ಚಿನಲ್ಲಿ ಪ್ರಾರಂಭಿಸಬಹುದು. ಜೇನು ಪ್ರಾಕೃತಿಕ ವಸ್ತುವಾಗಿದ್ದು ನೈಸರ್ಗಿಕವಾಗಿ ಜೇನು ತುಪ್ಪ ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ರೀತಿಯ ಅಗತ್ಯವಾದ ಸ್ಥಳ ಬೇಕಾಗಿಲ್ಲ.. ಹೂದೋಟ ಅಥವಾ ಜೇನಿಗೆ ಮಕರಂದವನ್ನು ಸವಿಯಲು ಪೂರಕವಾದ ಸ್ಥಳವಾದರೆ ಸಾಕು. ಜೇನುತುಪ್ಪದ ಮಾರಾಟದ ಜತೆಗೆ ಉಪ ಉತ್ಪನ್ನಗಳ ತಯಾರಿಕೆಯಿಂದ ಜೇನು ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ. ಜೇನು ಸಾಕುವ ಜೇನು ಪೆಟ್ಟಿಗೆ, ಹುಳು ಮಾರಟ, ಪರಾಗ, ಮೇಣ, ನ್ಯಾಚುರಲ್ ವ್ಯಾಸಲಿನ್ ಮಾರಾಟದಿಂದ ಹಣಗಳಿಸುವ ಅವಕಾಶವಿದೆ.

[widget id=”custom_html-3″]

ಹನಿ ಜಾಮ್, ಗಾರ್ಲಿಕ್ ಹನಿ, ಅಕೇಶಿಯಾ ಹನಿ, ರಾಯಲ್ ಜೆಲ್ಲಿ ಹನಿ, ಜಿಂಜರ್ ಹನಿ ಸೇರಿ ಹಲವು ಮಾದರಿಯ ಜೇನು ತುಪ್ಪ ಉತ್ಪಾದಿಸಬಹುದು. ಇನ್ನು ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳು ಇದ್ದು ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ 75 ಸಬ್ಸಿಡಿ ನೀಡುತ್ತಿದೆ, ಎಸ್ಸಿ ಎಸ್ಟಿ ಸಮುದಾಯದವರಿಗೆ ಶೇ 90 ಸಹಾಯಧನದ ಸೌಲಭ್ಯವು ಇದೆ. ಜೇನು ಸಾಕಾಣಿಕೆ ಪ್ರೋತ್ಸಾಹ ನೀಡಲು ಈ ಬಾರಿ ತೋಟಗಾರಿಕೆ ಇಲಾಖೆ ಕೋಟಿ ರೂ ಅನುದಾನ ಮೀಸಲಿಟ್ಟದೆ. ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ಮಾಣಕ್ಕೂ ನೆರವು ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಸಲಿಸಾಗಿ ಜೇನು ಹುಳುಗಳ‌ ಸಾಗಾಣಿಕೆ ಮಾಡುವುದರ ಮೂಲಕ ಲಾಭ ಗಳಿಸಬಹುದಾಗಿದ್ದು ಇದು ಕೃಷಿಯಲ್ಲಿ ಉತ್ತಮ ಮಟ್ಟದ ಸಾಧನಗೆ ಮತ್ತು ಲಾಭ ಗಳಿಸಬಹುದಾಗಿದೆ.

[widget id=”custom_html-3″]