Advertisements

15 ವರ್ಷದ ಹಿಂದೆ ಜೋಗಿ ಆ ಸಮಯದಲ್ಲಿ ಎಷ್ಟು ಕೋಟಿ ದುಡಿದಿತ್ತು ಗೊತ್ತಾ?

Cinema

ಪ್ರೀಯ ವೀಕ್ಷಕರೆ…. ಕೈಯಲೊಂದು ಲಾಂಗ್… ಖಡಕ್ ಲುಕ್ , ಖದರ್ ಡೈಲಾಗ್ ನಿಂದಲೆ‌ ಅಭಿಮಾನಿಗಳ ಬಳಗವನ್ನು ಕಬಳಿಸಿದ್ದು ಸ್ಯಾಂಡಲ್ ವುಡ್ ಕಿಂಗ್ ಅಣ್ಣ ಶಿವಣ್ಣ ಅಭಿನಯದ ಜೋಗಿ ಸಿನೆಮಾ‌.. ತಾಯಿ ಮಗನ ವಾತ್ಸಲ್ಯ, ಭೊಗತ ಲೋಕದ ವಿಭಿನ್ನ ಕಥೆ ಮೂಲಕ ದಕ್ಷಿಣ ಭಾರತದ ಸಿನೆಮಾ ಇಂಡಸ್ಟ್ರಿಗಳು ಕಣ್ಣೆತ್ತಿ ನೋಡುವಂತೆ ಮಾಡಿದ್ದು ಈ‌ ಜೋಗಿ ಮೂವಿ. ವಾಸ್ತವತೆ, ಪ್ರೀತಿ ಮುಗ್ದತೆಯನ್ನ ಹೊತ್ತು ತರೆಮೇಲೆ ಬಿಂಬಿಸಿದ್ದು ಈ ಚಿತ್ರದ ತಯಾರಿ, ಪರಿಶ್ರಮ ನಿರಂತರ ಪ್ರಯತ್ನವೇ ಸಾಕ್ಷಿ. ಇದೆ ಅಗಸ್ಟ 19 ಈ ಚಿತ್ರ ತರೆಕಂಡು 15 ವರ್ಷಗಳಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜೋಗಿ‌ ಮೂವಿ ಕುರಿತಾದ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ. ಜೋಗಿ ಪ್ರೇಮ ಎಂದೆ ಖ್ಯಾತಿ ಪಡೆದ ಪ್ರೇಮ್ ಈ‌ ಸಿನಿಮಾದ ನಿರ್ದೇಶಕ ನಿರ್ಮಾಪಕ. ಕನ್ನಡ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ ಸುನಿಲ್ ಕುಮಾರ ದೇಸಾಯಿ ಅವರೊಂದಿಗೆ‌ ಕಲವು ಚಿತ್ರ ನಿರ್ಮಾಣಗಳಲ್ಲಿ ಸಹಾಯಕ‌ ನಿರ್ದೇಶಕನಾಗಿ‌ ಕೆಲಸ ನಿರ್ವಹಿಸಿ ಮುಂದೆ ೨೦೦೨ರಲ್ಲಿ ಇವರ ನಿರ್ಮಾಣದ ಚೊಚ್ಚಲ ಚಿತ್ರ ಕರಿಯ ತೆರೆ ಕಂಡಿತ್ತು.

Advertisements

ಆಮೆಗತಿಯಲ್ಲಿ ಜಯಗಳಿಸಿದ್ದ ಈ‌ ಮೂವಿ 25 ವರ್ಷಗಳ ಕಾಲ ಬಾಕ್ಸ ಆಫೀಸ್ನ್ ಕೊ’ಳ್ಳೆ ಹೊಡೆದಿತ್ತು. ನಂತರ ಎಕ್ಸ್ ಕ್ಯೂಸ್ ಮಿ ಸಿನೆಮಾ ನಿರ್ಮಾಣದ ಸಮಯದಲ್ಲಿ ಕೆ ಕಲ್ಯಾಣ, ಡಾ. ವಿ ನಾಗೇಂದ್ರ ಪ್ರಸಾದ ಜೊತೆ ಸಾಹಿತಿ, ಕಥೆಗಾರ‌ನಾಗಿ ಗುರುತಿಸಿಕೊಂಡ ಮಡವಳ್ಳಿ ಸಾಯಿ ಕೃಷ್ಣ ಸಂಭಾಷಣಕಾರ ಪರಿಚಯವಾಗಿದ್ದು ಮುಂದೆ ಪ್ರೇಮ ಅವರ ಬೇಡಿಕೆಯಂತೆ‌ ಇವರು ಜೋಗಿ ಚಿತ್ರಕ್ಕೆ ಸಂಭಾಷಣೆ ಬರೆಯುವುದು ಮಾತ್ರವಲ್ಲದೆ‌ ಜೋಗಿ ಹೆಸರನ್ನ ಹುಟ್ಟು ಹಾಕ್ತಾರೆ. ರವಿಚಂದ್ರನ ಸಹೋದರ ಬಾಲಾಜಿ ನಟಿಸಬೇಕಾದ ತುಂಟ ಕಥೆ ಕಾರಾಣಾಂತರಗಳಿಂದ ಇದು ನಿರ್ಮಾಣವಾಗಲಿಲ್ಲ‌ ನಂತರ ಮತ್ತೆ ಬಾಲಾಜಿ ನಟನೆಯ ಮತ್ತೊಂದು ಸಿನಿಮಾಗೆ ಸಂಭಾಷಣೆಯನ್ನು ಬರೆಯುವ ಅವಕಾಶ ಸಾಯಿರಿಗೆ ಬಂದೊದಗಿತ್ತು. ಇನ್ನು ಕಥೆಯ ಟೈಟಲ್‌ ವಿಷಯಕ್ಕೆ ಬಂದಾಗ ಜೋಗಯ್ಯ ಬಾರೊ ಜೋಗಿ ಎಂಬ ಹಳೆಯ‌ ಕನ್ನಡ ಸಾಂಗ್ ಕಿವಿಗೆ ಬಿಳುತ್ತಲೆ ಸಾ’ಯಿ’ಯವರಿಗೆ ರವಿಚಂದ್ರನ್ ನಟನೆಯ ಕೀಂದರಿ ಜೋಗಿ ಇದು ಅವರ ಸಹೋದರ ನಟನೆಯ ಚಿತ್ರಕ್ಕೆ ಜೋಗಿ‌ ಎಂದು ಹೆಸರಿಡಲು ನಿರ್ಧಾರವಾಗುತ್ತದೆ..

ಆದರೆ ಮತ್ತೆ ಕಾರಣಾಂತರಗಳಿಂದ‌ ಈ‌ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ‌ಸದ್ದಿಲ್ಲದೆ ಸುಮ್ಮನಾಗಿದ್ದ ಕಾರಣವೇ ಸಾಯಿಯವರಿಂದ ಜೋಗಿ ಪ್ರೇಮ್ ನಿರ್ಮಾಣ ಮಾಡಲು‌ ಹೊರಟ ಚಿತ್ರಕ್ಕೆ‌ ಜೋಗಿ ಹೆಸರು ಪೈನಲ್ ಆಗುತ್ತದೆ. ಪ್ರೇಮ ಅವರ ತಂ’ದೆ ಮರಣ ಹೊ‌ದಿದಾಗ ಅವರ ತಾಯಿಯ ಬಳೆ ಒಡೆಯಲು ಮುಂದಾದಾಗ ಅದಕ್ಕೆ‌‌ ವಿರುದ್ಧ ಮಾಡಿದ ಸನ್ನಿವೇಶ ಹೀಗೆ ತಮ್ಮ ನಿಜ ಜೀವನದಲ್ಲಿ ಎದುರಾದ ಘಟನೆಯೇ ಪ್ರತಿರೂಪವೇ ಈ ಜೋಗಿ ಚಿತ್ರವಾಗಲು ಕಾರಣಾವಾಯಿತು. ಕಥೆ ಸಂಪೂರ್ಣವಾಗಿ ಸಿದ್ಧವಾದಾಗ ಸಾಯಿ, ಪ್ರಸಾದ ಶಿವಣ್ಣ ಹಾಗೂ ಎಸ್ ಪಿ‌ ವರದರಾಜ ಅವರಿಗೆ‌ ಕಥೆ ಒಪ್ಪಿಸುವಲ್ಲಿ ಯಶಸ್ವಿಯಾಗ್ತಾರೆ. ಮುಂದೆ ಲೋಕೆಶನ್, ಕಾಸ್ಟಿಂಗ್ ಜೋರಾಗಿ ಸಾಗಿತ್ತು. ಈ ಚಿತ್ರಕ್ಕೆ ಮತ್ತಷ್ಟು ಮೇರಗು ನೀಡಿದ್ದು ರಂಗ ಭೂಮಿ ಕಲಾವಿದೆ ಅರುಂಧತಿ ನಾಗ್ ಅವರ ಅಭಿನಯ. ಈ‌ ಕಥೆಯನ್ನು ಕೇಳಿ ಅದರೊಳಗಿನ ನೈಜ್ಯತೆ ಎಲ್ಲವನ್ನು‌ ಅರಿತು ಕಥೆಗೆ ಜೀವ ತುಂಬಲು ಒಪ್ಪಿಗೆ‌ ನೀಡ್ತಾರೆ. ಬೆಂಗಳೂರು, ಮೈಸೂರು, ಚಾಮರಾಜನಗರ ರಾಜ್ಯಸ್ಥಾನಗಳಲ್ಲಿ ಈ‌ ಚಿತ್ರದ ಶೂಟಿಂಗ್ ನಡೆದಿತ್ತು. ಇದಕ್ಕೆ ಗುರುಕಿರಣ ಸಂಗೀತ, ಶಿವಣ್ಣ ಹಾಗು ಅರುಂಧತಿಯವರ ನಟನೆ ಈ‌ ಚಿತ್ರಕ್ಕೆ‌‌ ನವಿನತೆಯ ಮೆರಗನ್ನ ಚೆಲ್ಲಿತ್ತು.

ಚಿತ್ರ ಮೊದಲಿಗೆ ರಾಜ್ ದಂಪತಿ‌ ಶಿವಣ್ಣ ಜೋಳಿಗೆಗೆ ದಾನ ನೀಡುವ ಸೀನ್ ಕನ್ನಡಭಿಮಾನಿಗಳ‌ ಮನದ ಮೂಲೆ ಮೂಲೆಗಳಲ್ಲಿ ಪಾಲುದಾರಿಕೆ ಸಂಪಾದಿಸಿತ್ತು. ಇದು ರಾಜ್ ಕಾಣಿಸಿಕೊಂಡ‌ ಕಟ್ಟಕಡೆಯ‌ ಹಿರಿತೆರೆಯ ಸಿನಿಮಾ. ಈ ಚಿತ್ರಕ್ಕೆ ಸಾಥ್ ನೀಡಿದ ರಾಜ್ ಕುಟುಂಬ‌ ಕಲಾವಿದರು ಹಾಗೂ ಅಭಿಮಾನಿ ಬಳಕ್ಕೆ‌ ಯಾವಾಗಲು ಚಿರುರುಣಿ ಎನ್ನುತ್ತಾರೆ ಪ್ರೇಮ್. 100 ದಿನಗಳ ತರೆ ಮೇಲೆ ಸದ್ದಿಲ್ಲದೆ‌ ಗುಡುಗಿದ ಈ ಚಿತ್ರ 2005 ಸಾಲಿನ ಅತ್ಯುತ್ತಮ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತ್ತು. ನಾಲ್ಕು ಕೋಟಿ‌ ಬಜೆಟ್ ನಲ್ಲಿ‌ ತಯಾರಾದ ಈ ಚಿತ್ರ ತೆರೆ ಕಂಡ ಒಂದೆ ‌ವಾರದಲ್ಲಿ 3 ಕೋಟಿ‌ ಬಾಕ್ಸ್ ಆಫೀಸ್ ‌ಕೊ’ಳ್ಳೆ ಹೊ’ಡೆ’ದು 40 ಕೋಟಿ ದಾಟಿತ್ತು. 2006 ತೆಲುಗು ಭಾಷೆಯಲ್ಲಿ ಯೋಗಿ ಎಂದು ತರೆ‌ಕಂಡಿತ್ತು. ಹೀಗೆ ದೇಶ್ಯಾದ್ಯಂತ ಸದ್ದು ಮಾಡಿದ್ದ ಸಿನೆಮಾ ಅನೇಕ ನಟರಿಂದ ಪತ್ರಿಕೆಗಳಿಂದ ‌ಶ್ಲಾಘನೀಯಗಳ‌ ಸುರಿಮಳೆಯನ್ನ ಸುರಿಸಿತ್ತು. ತಾಯಿ‌ ಮಗನ ಪ್ರೀತಿ, ಹಳ್ಳಿಯ ಬದುಕು, ಪ್ರಕೃತಿ ಸೌಂದರ್ಯ ಎಲ್ಲವು ಚಿತ್ರಕ್ಕೆ‌ ಭದ್ರ ಬುನಾದಿಯಂತಿವೆ. ತನ್ನದೆ ಆದ ಸೆಂಟಿಮೆಂಟ್ ಮತ್ತು ಡೈಲಾಗ್ ‌ಮೂಲಕ‌ ಇನ್ನು ಕೂಡ ಅದೆ ಗರ್ಜನೆ ಯನ್ನು ಮಾಡುತ್ತಿದೆ. ಇಗಲು ಜೋಗಿ ಎಂದರೆ ಸಾಕು ಮರದ ಮೇಲೆ ಕುಳಿತು ತಾಯಿ ಕೂಗೊ ಕುಗಿಗೆ ತಲೆ‌ ಕೊಡದೆ.. ಅಮ್ಮ ಹಾಕೊ ಹೆಜ್ಜೆಗೆ ತಾನು‌ ಜೊತೆಯಾಗಿ ಹೆಜ್ಜೆ ಹಾಕುವ ಮುಗ್ದನಿಂದ ಲಾಂ’ಗ್ ಹಿಡಿದು ವಿ’ಲ’ನ್ ಗಳ ಹೆಡೆಮುರಿ‌ ಕಟ್ಟುವ ಮಾಧೆಶನ ಅಭಿನಯದ ವಿಭಿನ್ನ ಸಾರವೆ ಈ ಜೋಗಿ ಮೂವಿ..