Advertisements

ರೋಡ್ ನಲ್ಲಿ ಪೆನ್ ಮಾರುತ್ತಿದ್ದ ಹುಡುಗ ಜಗತ್ತೇ ಮೆಚ್ಚುವಂಥ ನಟನಾಗಿದ್ದು ಹೇಗೆ ಗೊತ್ತಾ? 36 ವರ್ಷದಿಂದ ಅದೇ ಬೇಡಿಕೆಯಲ್ಲಿರುವ ಏಕೈಕ ನಟ..

Cinema

ಸತತ ಸೋಲು ಹಾಗೂ ಅವಮಾನಗಳನ್ನು ಕಂಡು ಈಗ ಸಖತ್ ಹಿಟ್ ಆಗಿರುವ ಜಾನಿ ಡೆಪ್​​.. 36 ವರ್ಷಗಳ ಸುದೀರ್ಘ ಸಿನಿ ಜೀವನದಲ್ಲಿದ್ದು, ಈಗಲೂ ಸಹ ತನ್ನ ಬೇಡಿಕೆಯನ್ನಿಟ್ಟುಕೊಂಡಿರುವ ಜಾನಿ ಡೆಪ್ ಎವರ್ ಯಂಗ್ ಹಿರೋ.. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿ ಬೇರಾದ ನೋವನ್ನು ಅನುಭವಿಸುತ್ತಾ, ಜೀವನ ಮಾಡಲು ದುಡ್ಡಿಲ್ಲದೇ, ಒದ್ದಾಡುತ್ತಾ,, ಕಾರಿನಲ್ಲಿ ವಾಸವಿದ್ದ ನಟ ಜಾನಿ ಡೆಪ್.. ಅದಾಗ್ಯೂ ವಯಕ್ತಿಕ ಬದುಕಿನ ಖರ್ಚು ನಿಭಾಯಿಸಲು ಪೆನ್ ಕಂಪನಿಯಲ್ಲಿ ಪೆನ್ ಸಹ ಮಾರಾಟ ಮಾಡ್ತಿದ್ದರು.. ಹೀಗಿದ್ದ ಜಾನಿಗೆ ಸಂಗೀತ ಕ್ಷೇತ್ರದಲ್ಲಿ ಅಪಾರ ಒಲವಿತ್ತು, ತಾನೊಬ್ಬ ಪಾಪ್​ ಸ್ಟಾರ್ ಆಗಬೇಕು ಅನ್ನೋ ಕನಸಿತ್ತು. ಆದ್ರೆ ನಾವ್ ಏನ್ ಆಗಬೇಕೋ ಅದೇ ಆಗೋದು ಅನ್ನೋ ಹಾಗೇ ಜಾನಿಯಾಗಿದ್ದು ಮಾತ್ರ ನಟ ಕಮ್ ನಿರ್ಮಾಪಕ
ತನ್ನ ಆರಂಭದ ದಿನಗಳಲ್ಲಿ ಜಾನಿ ಹಾಡು ಹೇಳ್ತಾ, ತನ್ನದೇ ಆದ ಬ್ಯಾಂಡ್ ಜೊತೆ ಊರೂರು ಸುತ್ತುತ್ತಾ ಜನರನ್ನು ರಂಜಿಸ್ತಾಯಿದ್ದರು..

Advertisements

ಇವರಿಗೆ ಯಾವತ್ತು ಕೂಡ ಹಿರೋ ಆಗೋ ಆಲೋಚನೆಯೇಯಿರಲಿಲ್ಲವಂತೆ, ಆದ್ರೆ ತನ್ನ ಹೆಂಡತಿಯ ಫ್ರೆಂಡ್ ಗೋಸ್ಟ್ ರೈಡರ್ ಚಿತ್ರದ ಹಿರೋ ನಿಕೋಲಸ್ ಕೇಜ್ ಪರಿಚಯದಿಂದ ಈತ ಸಿನಿರಂಗಕಕ್ಕೆ ಕಾಲಿಡ್ತಾನೆ, ಆತನ ಸಲಹೆ ಮೇರೆಗೆ ಆಡಿಷನ್ಸ್ ಕೊಡ್ತಾನೆ, ಒಂದೆರಡು ಸಿನಿಮಾಗಳಲ್ಲಿ ಕ್ಲಿಕ್ ಸಹ ಆಗ್ತಾನೆ, ಆದ್ರೆ ಆರಂಭದ ಸಿನಿ ಕೆರೀಯರ್ ಅಂತಹ ಹೇಳಿಕೊಳ್ಳೋ ರೇಂಜ್​ಲ್ಲಿ ಏನಿರಲ್ಲ, ಹೋಗ್ತಾ ಹೋಗ್ತಾ ಒಂದೊಂದೆ ಸಿನಿಮಾಗಳು ಕ್ಲಿಕ್ ಆಗಿ ಇವತ್ತು ಹಾಲಿವುಡ್​ನ ಬಹುಬೇಡಿಕೆಯ ನಟರಾಗಿದ್ದಾರೆ. ಜಾನಿ ವಿಶೇಷತೆ ಅಂದ್ರೆ ಸ್ಟೋರಿ ಸೆಲೆಕ್ಷನ್, ಸಿಕ್ಕ ಸಿಕ್ಕ ಎಲ್ಲ ಸ್ಟೋರಿಯನ್ನ ಜಾನಿ ಆಯ್ಕೆ ಮಾಡಲ್ಲ..

ಬಾಕ್ಸ್ ಆಫೀಸ್ ಅಲ್ಲಿ ಕೊ’,ಳ್ಳೆ ಹೊ’ಡೆ’ಯುವ ಸಿನಿಮಾಗಳಿಗಿಂತ ಚಿತ್ರದಿಂದ ತನ್ನ ನಟನಾ ಪ್ರೌಢಿಮೆ ಹೇಗೆ ವ್ಯಕ್ತವಾಗ್ತದೆ ಹಾಗೂ ತನ್ನ ಸಿನಿ ಕರೀಯರ್​ಗೆ ಹೇಗೆ ನೆರವಾಗುತ್ತೆ ಎಲ್ಲ ಆಯಾಮಗಳಲ್ಲಿ ಆಲೋಚನೆ ಮಾಡಿ ಜಾನಿ ಸಿನಿಮಾ ಆಯ್ಕೆ ಮಾಡುತ್ತಾರೆ.
ಸತತ ನೋವು ಕಂಡು ಈಗ ಯಶಸ್ಸಿನ ಉತ್ತುಂಗದಲ್ಲಿರುವ ಜಾನಿ ಬಾಳಲ್ಲಿ ಸಹ ಕಾಂಟ್ರವರ್ಸಿಗಳೇನು ಕಡಿಮೆಯಿಲ್ಲ, ಆದ್ರೆ ಎಲ್ಲ ವಿವಾದಗಳಿಗಿಂತ ಹೆಚ್ಚಾಗಿ ಜಾನಿಯೋರ್ವ ಸಹೃದಯವಿರುವ ಮಾನವೀಯ ಮೌಲ್ಯ ಹೊಂದಿರುವ ಅದ್ಭುತ ಕಲಾವಿದ ಅಂತ ಹಾಲಿವುಡ್ ಅಂಗಳ ಒಪ್ಪಿಕೊಳ್ಳುತ್ತೆ.