Advertisements

ಜೊತೆಜೊತೆಯಲಿ ಆರ್ಯವರ್ಧನ್ ನಿಜಕ್ಕೂ ಒಳ್ಳೆಯವನಾ ! ಮುಂದಿನ ಕತೆಯಲ್ಲಿ ಏನಿದೆ ಗೊತ್ತಾ ?

Entertainment

ನಮಸ್ತೇ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಜೊತೆ ಜೊತೆಯಲಿ ಧಾರವಾಹಿ ಶುರುವಾದಾಗಿನಿಂದಲೂ ಅತ್ಯುತ್ತಮ TRP ರೇಟಿಂಗ್ ನ್ನ ಪಡೆದುಕೊಂಡು ಬಂದಿರುವ ಜನಮೆಚ್ಚಿದ ಸೀರಿಯಲ್. ಇನ್ನು ಕನ್ನಡ ಅವತರಣಿಕೆಯಲ್ಲಿ ಮೂಡಿಬರುತ್ತಿರುವ ಜೊತೆಜೊತೆಯಲಿ ಮರಾಠಿ ಧಾರವಾಹಿಯ ರಿಮೇಕ್ ಆಗಿದೆ.

Advertisements

ಇನ್ನು ಈಗಾಗಲೇ ಆ ಮರಾಠಿ ಸೀರಿಯಲ್ ಮುಕ್ತಾಯವಾಗಿದ್ದು, ಆ ಧಾರವಾಹಿಯ ಕತೆಯ ಪ್ರಕಾರ, ಸೀರಿಯಲ್ ನಾಯಕ ಪಾತ್ರಧಾರಿ ಆರ್ಯವರ್ಧನ್ ರಾಜನಂಧನಿಯನ್ನು ನಿಜಕ್ಕೂ ಪ್ರೀತಿ ಮಾಡಿರೋದಿಲ್ಲ. ಕೇವಲ ಆಸ್ತಿ ಹಣಕ್ಕೋಸ್ಕರ ಪ್ರೀತಿಯ ನಾಟಕವಾಡುತ್ತಿರಿತ್ತಾನೆ. ಇನ್ನು ನಾಯಕಿ ಪಾತ್ರಧಾರಿಯಾಗಿರುವ ಅನುಗೆ ರಾಜನಂಧಿನಿಯ ಪ್ರೀತಿಯ ವಿಷಯ ಹೇಳಿ ಆಕೆಯ ಅನುಕಂಪ ಪಡೆದುಕೊಳ್ಳುತ್ತಾನೆ. ಇನ್ನು ಇದಕ್ಕೆ ಜೇಂಡೆ ಕೂಡ ಸಾತ್ ಕೊಟ್ಟಿರುತ್ತಾನೆ.

ಆದರೆ ಆರ್ಯವರ್ಧನ್ ಅನು ಅವರನ್ನ ನಿಜಕ್ಕೂ ಕೂಡ ತುಂಬಾ ಇಷ್ಟ ಪಟ್ಟಿದ್ದು ಪ್ರೀತಿ ಮಾಡುತ್ತಿರುತ್ತಾನೆ. ಇನ್ನು ರಾಜನಂಧಿನಿಯೇ ಅನು ಮರು ಜನ್ಮ ಪಡೆದಿರೋದು ಆರಂಭದಲ್ಲಿ ಅನುಗೆ ಗೊತ್ತಿರೋದಿಲ್ಲ. ಆದರೆ ಆರ್ಯವರ್ಧನ್ ಅನು ಅವರನ್ನ ಮದ್ವೆಯಾದ ಮೇಲ ಅನುಗೆ ತಾನು ರಾಜನಂಧಿನಿ ಪುನರ್ಜನ್ಮ ಎಂಬ ಸತ್ಯ ತಿಳಿಯುತ್ತೆ. ಇದರ ಬಳಿಕ ಆರ್ಯವರ್ಧನ್ ಅವರು ನಿಜಕ್ಕೂ ತನ್ನನ್ನು ಪ್ರೀತಿ ಮಾಡಿದ್ರಾ, ಇಲ್ಲ‌ ರಾಜನಂಧಿನಿಯನ್ನ ಎಂಬ ಗೊಂದಲಕ್ಕೆ ಸಿಲುಕುತ್ತಾಳೆ ಅನು.

ಎಲ್ಲರಿಗೂ ತನ್ನ ಸತ್ಯ ತಿಳಿಯಿತು ಎಂದು ಗೊತ್ತಾದ ಕೂಡಲೇ ಆರ್ಯವರ್ಧನ್ ಸಂಕಟಕ್ಕೆ ಸಿಲುಕಿಕೊಳ್ಳುತ್ತಾನೆ. ಧಾರವಾಹಿಯ ನಾಯಕಿ ಅನು ಕೂಡ ಆರ್ಯವರ್ಧನ್ ನನ್ನ ಸಂಪೂರ್ಣವಾಗಿ ಒಪ್ಪೋದಿಲ್ಲ. ಇನ್ನು ಆರ್ಯವರ್ಧನ್ಗೆ ತಾನು‌ ಹಣ ಆಸ್ತಿಗೋಸ್ಕರ ರಾಜನಂಧಿನಿಗೆ ಮಾಡಿದ ಮೋಸ ಪಾಪಗಳು ಮರುಕಳಿಸಿ ಆರ್ಯವರ್ಧನ್ ಗೆ ನೆಮ್ಮದಿ ಇಲ್ಲದಂತೆ ಮಾಡುತ್ತದೆ. ಇದರಿಂದ ತುಂಬಾ ಪಚ್ಚಾತಾಪಕ್ಕೆ ಒಳಗಾಗುವ ಆರ್ಯವರ್ಧನ್ ತಾನು ರಾಜನಂಧಿನಿಯನ್ನ ಮನೆಯ ಮಹಡಿ ಮೇಲಿನಿಂದ ತ’ಳ್ಳಿ ಸಾ’ಯಿ’ಸಿದ ಜಾಗದಿಂದಲೇ ಬಿದ್ದ ಆರ್ಯವರ್ಧನ್ ಪ್ರಾ’ಣ ಕಳೆ’ದುಕೊಳ್ಳುತ್ತಾನೆ. ಈ ಸಂಪೂರ್ಣ ಕತೆ ಮರಾಠಿ ಧಾರವಾಹಿಯಲ್ಲಿ ಮೂಡಿ ಬಂದಿರುವುದಾಗಿದೆ.

ಆದರೆ ಕನ್ನಡದಲ್ಲಿ ಮೂಡಿಬರುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ರನ್ನ ಕೆಟ್ಟವನನ್ನಾಗಿ ತೋರಿಸುವುದಿಲ್ಲ ಎಂದು ತಿಳಿದುಬಂದಿದ್ದು, ರಾಜನಂಧಿನಿ ಕುರಿತಂತಾದ ಕತೆಯನ್ನ ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ. ಇನ್ನು ವೀಕ್ಷಕರಿಗೂ ಸಹ ಆರ್ಯವರ್ಧನ್ ಅವರನ್ನ ಖಳನಾಯಕನನ್ನಾಗಿ ನೋಡಲು ಇಷ್ಟಪಡುವುದಿಲ್ಲ ಎಂದು ಸೀರಿಯಲ್ ತಂಡದವರು ಹೇಳಿದ್ದಾರೆ. ಸ್ನೇಹಿತರೇ ಆರ್ಯವರ್ಧನ್ ಪಾತ್ರವನ್ನು ಒಳ್ಳೆಯವನಾಗಿ ನೋಡಲು ಇಷ್ಟಪಡುತ್ತೀರಾ..ಇಲ್ಲ ಕೆಟ್ಟವನನ್ನಾಗಿ ನೋಡಲು ಇಷ್ಟಪಡುತ್ತೀರಾ ಕಾಮೆಂಟ್ ಮಾಡಿ..