Advertisements

ಜೊತೆ ಜೊತೆಯಲಿ ಜೇಂಡೆ ಬಗ್ಗೆ ನೀವು ತಿಳಿಯದ ರಹಸ್ಯ.. ಏನು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ಸದ್ಯಕ್ಕೆ ಕನ್ನಡ ಟೆಲಿವಿಷನ್ ದುನಿಯಾದಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿರುವ ಧಾರವಾಹಿ ಎಂದರೆ ಅದು ಜೀ ಕನ್ನಡ ವಾಹಿನಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಎಂದು ಹೇಳಬಹುದು.. ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತಿರುವ ಎಲ್ಲಾ ಪಾತ್ರಧಾರಿಗಳು ವೀಕ್ಷಕರಿಗೆ ತುಂಬಾನೆ ಇಷ್ಟವಾಗಿದೆ.. ಅದರಲ್ಲೂ ಆರ್ಯವರ್ದನ್, ಅನು, ಜೇಂಡೆ ಮತ್ತು ಮೀರಾ ಪಾತ್ರ ಪ್ರೇಕ್ಷಕರಿಗೆ ಪ್ರತಿನಿತ್ಯ ಸಿಕ್ಕಾಪಟ್ಟೆ ಕುಷಿ ನೀಡುತ್ತಿದೆ..

Advertisements

ಇನ್ನೂ ಜೊತೆ ಜೊತೆಯಲಿ ಜೇಂಡೆ ಪಾತ್ರದಲ್ಲಿ ನಟಿಸುತ್ತಿರುವ ನಟನ ಬಗ್ಗೆ ಗೊತ್ತಿಲ್ಲದಂತಹ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.. ಜೇಂಡೆಯವರ ನಿಜವಾದ ಹೆಸರು ಬಿ.ಎಮ್ ವೆಂಕಟೇಶ್.. ವೆಂಕಟೇಶ್ ಅವರು ಸುಮಾರು ಮೂವತ್ತು ವರ್ಷಗಳಿಂದ ನಟನೆ ಮಾಡುತ್ತಿದ್ದಾರೆ.. ಹತ್ತು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ವಟಾರ ಧಾರವಾಹಿ ಮೂಲಕ ವೆಂಕಟೇಶ್ ಅವರು ಮೊದಲ ಬಾರಿಗೆ ಕರ್ನಾಟಕ ಜನತೆಗೆ ಪರಿಚಯವಾಗುತ್ತಾರೆ.. ವಟಾರ ಧಾರವಾಹಿಯಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ ವೆಂಕಟೇಶ್ ಅವರು ಸಿನಿಮಾದಲ್ಲೂ ಸಣ್ಣ ಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ..

ಈ ಮಧ್ಯೆ ವೆಂಕಟೇಶ್ ಅವರು ವೈಯಕ್ತಿಕ ಹಾಗೂ ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ಬಣ್ಣದ ಲೋಕದಿಂದ ಐದು ವರ್ಷಗಳ ಕಾಲ ದೂರವಿದ್ದರು.. ಆದರೆ ಮತ್ತೆ ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಪುನಃ ಬಂದಿದ್ದು ಎಲ್ಲರ ಗಮನ ಸೆಳೆದಿದ್ದಾರೆ.. ಮೊದಲು ಜೇಂಡೆ ಪಾತ್ರ ಅವಕಾಶ ಸಿಕ್ಕಾಗ ವೆಂಕಟೇಶ್ ಅವರಿಗೆ ಇದೊಂದು ಮಾಮೂಲಿ ಪಾತ್ರ ಎಂದು ಅಂದುಕೊಂಡಿದ್ದರು.. ಆದರೆ ಪಾತ್ರ ಮಾಡುತ್ತಾ ಅದರ ಮಹತ್ವ ವೆಂಕಟೇಶ್ ಅವರಿಗೆ ಅರಿವಾಗದೆ.. ಮುಂಚೆ ರಸ್ತೆಯಲ್ಲಿ ವೆಂಕಟೇಶ್ ಅವರು ಹೋಗುವಾಗ ಜನರು ವಟಾರ ವೆಂಕಟೇಶ್ ಎಂದು ಗುರುತು ಹಿಡಿದು ಮಾತಾನಾಡಿಸುತ್ತಿದ್ದರು.. ಆದರೆ ಈಗ ವೆಂಕಟೇಶ್ ಅವರು ಎಲ್ಲೇ ಹೋದರು ಜನಗಳು ಜೇಂಡೆ ಎಂದು ಗುರುತಿಸಿ ಸೆಲ್ಪಿಗೆ ಮುಗಿ ಬೀಳುತ್ತಿದ್ದಾರೆ..