Advertisements

ದುಡ್ಡಿನ ಆಸೆಗಾಗಿ ಮದುಕನನ್ನು ಮದುವೆಯಾದ್ಲು ಜೂಹಿ ಚಾವ್ಲಾ ಎಂದುಕೊಂಡ ಜನ.. ಆದರೆ ಮದುವೆ ಆಗೋದಕ್ಕೆ ಕಾರಣ ಬೇರೆನೆ ಇತ್ತು.. ಅದೇನು ಗೊತ್ತಾ?

Cinema

ಒಂದು ಕಾಲದಲ್ಲಿ ಸಿನಿರಸಿಕನ್ನು ರಂಜಿಸಿ ಮನರಂಜನೆಯ ರಸದೌತಣವನ್ನು ನೀಡಿದ ಎವರ್ ಚಾರ್ಮಿಂಗ್, ಬ್ಯೂಟಿಫುಲ್ ಲೇಡಿ ಜೂಹಿ ಚಾವ್ಲಾ ವೈವಾಹಿಕ ಬದುಕಿನ ಬಗ್ಗೆ ಟೀಕಿಸಿದವರೆಷ್ಟೋ, ಮನಸಿಗೆ ಬಂದಂತೆ ಮಾತನಾಡಿದವರೆಷ್ಟೋ, ಏನು ಅರಿಯದೇ ತಲೆಗೊಂದು ಕಾಮೆಂಟ್ ಹಾಕಿದವರೆಷ್ಟೋ.. ಅಷ್ಟಕ್ಕೂ ಜೂಹಿಚಾವ್ಲಾ ಬಗ್ಗೆ ಜನ ತಲೆಗೊಂದು ಕಾಮೆಂಟ್ ಹಾಕಲು ಕಾರಣವೇನು ಗೊತ್ತಾ? ಹೇಳ್ತೀವಿ ಕೇಳಿ
ಪ್ರೇಮಲೋಕ, ಕಿಂದರಿಜೋಗಿ, ಶಾಂತಿ ಕ್ರಾಂ’ತಿಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ ಜೂಹಿ ಚಾವ್ಲಾ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿಯಲ್ಲಿಯೂ ಸಹ ಬಹುಬೇಡಿಕೆಯ ನಟಿ. ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವಾಗಲೇ ಅದೊಂದು ಸುದ್ದಿ ಜೂಹಿ ಚಾವ್ಲಾ ಬಗ್ಗೆ ಸಖತ್ ಹರಿದಾಡಲು ಶುರುವಾಯ್ತು.

[widget id=”custom_html-3″]

Advertisements

ಅದು ಬೇರೇನೋ ವಿಚಾರವಲ್ಲ, ಆಕೆಯ ವೈವಾಹಿಕ ಜೀವನದ ಬಗೆಗೆ ಸುದ್ದಿಯಾದಳು. ಅಷ್ಟಕ್ಕೂ ಯಾಕಿಷ್ಟು ದೊಡ್ಡ ಚರ್ಚೆಗೆ ಕಾರಣವಾಯ್ತು ಅಂದ್ರೆ, ತನಗಿಂತ ವಯಸ್ಸಿನಲ್ಲಿ ದೊಡ್ಡವನಾದ ಮೊದಲೇ ಮದುವೆಯಾಗಿದ್ದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನು ಜೂಹಿ ಮದುವೆಯಾಗಿದ್ದು ಅಷ್ಟೆಲ್ಲ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಕ್ಕೂ ಆ ವ್ತಕ್ತಿ ಯಾರು ಗೊತ್ತಾ.. ಜೈ ಮೇಹ್ತಾ, ಮುಂಬೈನ ಪ್ರಸಿದ್ಧ ಉದ್ಯಮಿಗಳಲ್ಲಿ ಓರ್ವ ಉದ್ಯಮಿ. ಅದಾಗಲೇ ಮದುವೆಯಾಗಿದ್ದ ಈತನ ಹೆಂಡತಿಯ ಹೆಸರು ಸುಜಾತ. ಒಂದು ದಿನ ವಿಮಾನ ಪಯಣದಲ್ಲಿ ಈತನ ಹೆಂಡತಿ ವಿಮಾನ ದು’ರಂತದಿಂದ ಸಾ’ವ’ನ್ನಪ್ಪುತ್ತಾಳೆ ಈ ನೋವಿನಿಂದ ಆಚೆ ಬರುವ ಪ್ರಯತ್ನದಲ್ಲಿರುವ ಜೈ ಮೆಹ್ತಾ ಅವರಿಗೆ ಆಗ ಜೂಹಿ ಚಾವ್ಲಾ ಪರಿಚಯವಾಗುತ್ತೆ.

[widget id=”custom_html-3″]

ಇವರಿಬ್ಬರ ನಡುವೆ ಅಗಾಧ ಸ್ನೇಹ ಉಂಟಾಗುತ್ತೆ. ಸ್ನೇಹ ಪ್ರೀತಿಗೆ ಅತೀ ಶೀಘ್ರದಲ್ಲಿಯೇ ಪರಿವರ್ತನೆಯಾಗುತ್ತೆ. ಜೂಹಿ ಮೇಲಿನ ಪ್ರೇಮವನ್ನು ನಿವೇದನೆ ಮಾಡಬೇಕು ಅನ್ನೊವಷ್ಟರಲ್ಲಿಯೇ ಜೂಹಿ ಚಾವ್ಲಾ ಅವರ ತಾಯಿ ನಿ’ಧ’ನರಾಗುತ್ತಾರೆ. ಈ ಸಂದರ್ಭದಲ್ಲಿ ಜೂಹಿ ಚಾಹ್ಲಾ ಅವರ ನೋವಿಗೆ ಜೊತೆಯಾಗಿ ಜೈ ಮೆಹ್ತಾ ನಿಲ್ಲುತ್ತಾರೆ. ಇದರಿಂದ ಇವರಿಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತೆ.
ನಂತರದ ದಿನಗಳಲ್ಲಿ ಇಬ್ಬರು ಮದುವೆಯಾಗ್ತಾರೆ, ಇವರಿಬ್ಬರ ಮದುವೆಯ ಫೋಟೋ ಹರಿದಾಡುತ್ತಿದ್ದಂಗೆ ಜೂಹಿ ಚಾವ್ಲಾ ದುಡ್ಡಿಗಾಗಿಯೇ ಜೈ ಮೆಹ್ತಾ ಅವರನ್ನು ಮದುವೆಯಾಗಿದ್ದಾರೆ ಎಂಬಿತ್ಯಾದಿ ತರಹೇವಾರಿ ಕಾಮೆಂಟ್ಸ್ಗಳು ಉದ್ಭವವಾದವು.

[widget id=”custom_html-3″]

ಆದರೆ ಇದ್ಯಾವುದಕ್ಕೂ ಕಿವಿಕೊಡದೇ ಬದುಕುತ್ತಿದ್ದ ಈ ದಂಪತಿಗಳಿಗೆ ಮತ್ತೊಂದು ದುಖಃ ಎದುರಾಯ್ತು. ಜೂಹಿ ಅಕ್ಕ ಕ್ಯಾ’ನ್ಸ’ರ್‌ನಿಂದ ಸ’ತ್ತು ಹೋದರು. ಹಾಗೆಯೇ ಇವರ ಸಹೋದರ ಸಹ ಸ್ಟ್ರೋ’ಕ್ ನಿಂದ ಕೆಲವರ್ಷಗಳು ಬಳಲಿ ಅವರು ಸಹ ಉಸಿರು ನಿ’ಲ್ಲಿಸಿದ್ರು. ಈ ಎಲ್ಲ ನೋವುಗಳಿಂದ ಜೂಹಿಯನ್ನು ಆಚೆ ತಂದು ಮತ್ತೆ ಮರಳಿ ಬದುಕಲು ಪ್ರೇರಣೆ ತುಂಬಿ ಜೀಹಿ ಚಾವ್ಲಾರನ್ನು ಅತ್ಯಂತ ಪ್ರೀತಿಯಿಂದ ಆಕೆಗೆ ನೈತಿಕ ಶಕ್ತಿ ತುಂಬುತ್ತಾ ಜೊತೆಯಾಗಿ ನಿಂತವರು ಜೈ ಮೆಹ್ತಾ. ಯಾರೇನೇ ಅನ್ನಲೀ ಈ ಜೋಡಿ ನೂರು ಕಾಲ ಹೀಗೆ ಖುಷಿ ಖುಷಿಯಾಗಿ ನಗುನಗುತಾ ಜೊತೆಜೊತೆಯಾಗಿ ಇರಲಿ ಎಂಬುವುದೇ ಜೂಹಿ ಚಾವ್ಲಾ ಅಭಿಮಾನಿಗಳ ಆಶಯ..