Advertisements

ತನ್ನ ತಂದೆಯನ್ನ 1200ಕಿಮೀ ಸೈಕಲ್ ನಲ್ಲೇ ಕರೆದುಕೊಂಡು ಬಂದ 15ವರ್ಷದ ಬಾಲಕಿ !

News

ಕರೋನಾ ಹಿನ್ನಲೆ ಲಾಕ್ ಡೌನ್ ಆದ ಪರಿಣಾಮ ಎಷ್ಟೋ ಜನ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗ್ಗೆ ಹೋಗಲು ಪಡಬಾರದ ಕಷ್ಟಗಳನ್ನ ಪಡುತ್ತಿದ್ದಾರೆ. ಎಷ್ಟೋ ಜನ ಕಾರ್ಮಿಕರು, ಲಾರಿ, ಟ್ರಕ್ ಗಳಲ್ಲಿ ಹೋದರೆ ಇನ್ನು ಅನೇಕರು ಸೈಕಲ್ ಹಾಗೂ ಕಾಲ್ನಡಿಗೆಯಲ್ಲೇ ತಮ್ಮ ಊರುಗಳತ್ತ ಸಾವಿರಾರು ಕಿಮೀ ದೂರ ಹೋಗಿರುವುದನ್ನ ನಾವು ನೋಡಿದ್ದೇವೆ.

Advertisements

ಈಗ, ಹದಿನೈದು ವರ್ಷದ ಬಾಲಕಿಯೊಬ್ಬಳು, ಕಾಲಿನ ನೋವಿನಿಂದ ನರಳುತ್ತಿದ್ದ ತನ್ನ ತಂದೆಯನ್ನ ಸೈಕಲ್ ನಲ್ಲೇ ಕೂರಿಸಿಕೊಂಡುಕ ಬರೋಬ್ಬರಿ 1200ಕಿಮೀ ದುರವನ್ನ ಕ್ರಮಿಸಿದ್ದಾಳೆ. ಏಳನೆಯ ತರಗತಿಯಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿ ದೆಹಲಿಯ ಬಾಡಿಗೆ ಮನೆಯೊಂದರಲ್ಲ ವಾಸ ಮಾಡುತ್ತಿದ್ದರು. ತಂದೆ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಇದರ ನಡುವೆಯೇ ಲಾಕ್ ಡೌನ್ ಆಗಿದ್ದು, ಬಾಡಿಗೆ ಮನೆಯ ಮಾಲೀಕ ಬಾಡಿಗೆ ಕೊಡುವುದಾದರೆ ಮನೆಯಲ್ಲಿ ಇರಿ, ಇಲ್ಲ ಅಂದರೆ ಮನೆ ಖಾಲಿ ಮಾಡಿ ಅಂತ ಹೇಳಿದ್ದಾರೆ.

ಇನ್ನು ಲಾಕ್ ಡೌನ್ ಪರಿಣಾಮ ಬಾಲಕಿಯ ತಂದೆ ತಾವು ಓಡಿಸುತ್ತಿದ್ದ ರಿಕ್ಷಾವನ್ನ ಅದರ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಇನ್ನು ಕೆಲಸ ಬೇರೆ ಇಲ್ಲ, ಬಡವರಾದ ಇವರ ಕೈನಲ್ಲಿ ಕಾಸು ಕೂಡ ಇಲ್ಲ. ಕೇವಲ ೬೦೦ ರುಗಳು ಮಾತ್ರ ಅವರ ಬಳಿಯಿತ್ತು. ಆಗ ಬೇರೆ ದಾರಿ ಕಾಣದೆ ತಮ್ಮ ಊರಾದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ನಿರ್ಧರಿಸಿದ ತಂದೆ ಮಗಳು ದೆಹಲಿಯಿಂದ ದರ್ಭಾಂಗಕ್ಕೆ ಹೋಗಲು, ಟ್ರಕ್ ಡ್ರೈವರ್ ಬಳಿ ತಮ್ಮನ್ನ ಕರೆದುಕೊಂಡು ಹೋಗುವಂತೆ ಕೇಳಿದ್ದಾರೆ. 6 ಸಾವಿರ ರುಗಳನ್ನ ಕೊಡಬೇಕೆಂದು ಆ ಚಾಲಕ ಕೇಳಿದ್ದಾನೆ. ಆದರೆ ಅಷ್ಟೊಂದು ಹಣ ಕೊಡಲು ಅವರ ಬಳಿ ದುಡ್ಡು ಇರಲಿಲ್ಲ. ಇದರಿಂದ ಸೈಕಲ್ ನಲ್ಲೆ ಹೋಗುವುದಾಗಿ ನಿರ್ಧಾರ ಮಾಡಿ ೫೦೦ ರುಪಾಯಿಗೆ ಸೈಕಲ್ ಕೊಂಡು ಕೊಂಡಿದ್ದಾರೆ.

ಇನ್ನು ಕಾಲಿನ ನೋವಿನಿಂದ ನಡೆಯಲಿ ಆಗದ ತನ್ನ ತಂದೆಯನ್ನ ಸೈಕಲ್ ಹಿಂದೆ ಕುಳ್ಳರಿಸಿಕೊಂಡು ಕೇವಲ ೧೫ ವರ್ಷದ ಜ್ಯೋತಿ ಮೇ ೧೦ರಂದು, ದೆಹಲಿಯಿಂದ ದರ್ಭಾಂಗಕ್ಕೆ ಹೊರಟಿದ್ದಾರೆ. ಇನ್ನು ದೆಹಲಿಯಿಂದ ಹೊರಟಾಗ ನಮ್ಮ ಬಳಿ ಕೇವಲ ೬೦೦ ರೂಪಾಯಿಗಳಿತ್ತು. ಆದರೆ ದಾರಿಮಧ್ಯೆ ಕ್ಯಾಂಪ್ ಗಳು, ದಾನಿಗಳು ಕೊಡುತ್ತಿದ್ದ ಆಹಾರ ಮತ್ತು ನೆರವಿನಿಂದ ಹೇಗೋ ಊರಿಗೆ ತಲುಪಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಜ್ಯೋತಿ ಹೇಳಿರುವ ಹಾಗೆ, ನಾನು ರಾತ್ರಿ ವೇಳೆಯೂ ಸಹ ಸೈಕಲ್ ತುಳಿದಿದ್ದೇನೆ. ಇದರಿಂದ ನನಗೆ ಭಯವೇನು ಆಗಿರಲೇಇಲ್ಲ. ಆದರೆ ಯಾರಾದರೂ ಹಿಂದೆಯಿಂದ ಬಂದುನ್ಗು ಸೈಕಲ್ ಗೆ ಗುದ್ದಿಬಿಟ್ಟರೆ ಎಂಬ ಭಯವಿತ್ತು ಅಷ್ಟೇ. ಆದರೆ ಆ ದೇವರ ದಯೆಯಿಂದ ಆ ತರ ಏನೂ ಆಗಲಿಲ್ಲ. ನಾವು ಸುರಕ್ಷಿತವಾಗಿ ನಮ್ಮ ಹಳ್ಳಿಯನ್ನ ತಲುಪ್ಪಿದ್ದೇವೆ ಎಂದು ಹೇಳಿದ್ದಾರೆ.