ಸ್ನೇಹಿತರೆ, ಸಾಮಾಜಿಕ ಜಾಲತಾಣಗಳಿಂದಾಗಿ ಎಲ್ಲೋ ಕುಗ್ರಾಮದಲ್ಲಿರುವವರು ಕೂಡ ಅವರಿಗೆ ಗೊತ್ತಿಲ್ಲದಂತಯೇ ಸ್ಟಾರ್ ಆಗಿಬಿಡುತ್ತಾರೆ. ಈಗ ಇದಕ್ಕೆ ನಿದರ್ಶನ ಎಂಬಂತೆ ಕಾರ್ಕಳದ ಯುವತಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುವಾಗ ಹೊಡೆದಿದ್ದ ಕವರ್ ಡ್ರೈವ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲು ಕಾರಣವಾಗಿದೆ.

ಜ್ಯೋತಿ ಪೂಜಾರಿ ಎನ್ನುವ ಈ ಯುವತಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಗ್ರಾಮದವರು. ಮುಂಬೈನಲ್ಲಿ ವಾಸ ಮಾಡುತ್ತಿದ್ದ ಈಕೆ ಲಾಕ್ ಡೌನ್ ಆದ ಪರಿಣಾಮ ತನ್ನ ಊರಿಗೆ ಬಂದಿದ್ದಾಳೆ. ಇನ್ನು ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿರುವ ವೇಳೆ ಜ್ಯೋತಿ ಬಾರಿಸಿದ ಕವರ್ ಡ್ರೈವ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದು, ಕೇವಲ 6 ಸೆಕೆಂಡ್ ಇರುವ ಈ ವಿಡಿಯೋವನ್ನ ಅಂತಾರಾಷ್ಟ್ರೀಯ ಮಾಧ್ಯಮ ಕ್ರಿಕ್ ಇನ್ಫೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ತರದ ಹೊಡೆತವನ್ನ ನೀವು ಎಂದಾದರೂ ನೋಡಿದ್ದೀರಾ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಜ್ಯೋತಿ ಕ್ರಿಕೆಟ್ ಆಡುವ ವೇಳೆ ಲೆಗ್ ಸೈಡ್ ಬಂದ ಚೆಂಡನ್ನ ಆಫ್ಸೈಡ್ಗೆ ಹೊಡೆಯುತ್ತಾರೆ. ಇನ್ನು ಈ ರೀತಿ ಕವರ್ ಡ್ರೈವ್ ಒಡೆಯುವುದು ಅಪರೂಪ ಎಂದು ESPNcricinfo ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಂತೂ ಯುವತಿಯ ಕವರ್ ಡ್ರೈವ್ ಗೆ ಬೋಲ್ಡ್ ಆಗಿಬಿಟ್ಟಿದ್ದಾರೆ. ವೃತ್ತಿಪರ ಆಟಗಾರ್ತಿಯಂತೆ ಕ್ರಿಕೆಟ್ ಆಡಿರುವ ಈ ವಿಡಿಯೋವನ್ನ ರಂಜಿತ್ ಪೂಜಾರಿ ಎಂಬುವವರು ವಿಡಿಯೋ ಮಾಡಿ ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
Stepping out to the leg side and smashing it through the covers. Now, where have we seen that before?
— ESPNcricinfo (@ESPNcricinfo) June 11, 2020
(#Yourshots 🎥 by Ranjith Poojary) pic.twitter.com/arKZW1zw9P
ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಜ್ಯೋತಿ ಪೂಜಾರಿ, ನನಗೆ ಕ್ರಿಕೆಟ್ ಆಡುವುದೆಂದರೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟ್ ಆಡುತ್ತೇನೆ ಎಂದಿರುವ ಜ್ಯೋತಿ, ಈ ವಿಡಿಯೋ ಇಷ್ಟರ ಮಟ್ಟಿಗೆ ವೈರಲ್ ಆಗುತ್ತೆ ಎಂದು ನಾನು ಭಾವಿಸಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋವನ್ನ ವೀಕ್ಷಿಸಿದ್ದು, ಕಾಮೆಂಟ್ ಗಳನ್ನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.