Advertisements

ನಿಬ್ಬೆರಗು ಮಾಡುವ ಕೈಲಾಸ ಪರ್ವತದಲ್ಲಿರುವ ರಹಸ್ಯ ಏನು ಗೊತ್ತಾ? ಅಲ್ಲಿಗೆ ಹೋದವರು ಇಲ್ಲಿಯವರೆಗೂ ವಾಪಸ್ ಬಂದಿಲ್ಲ ಯಾಕೆ..

Kannada Mahiti

ಕೈಲಾಸ ಪರ್ವತ ಅತ್ಯಂತ ಪವಿತ್ರ ಸ್ಥಳ. ಇದು ಸ್ವರ್ಗಕ್ಕೆ ಸಮಾನ. ಕಾರಣ ಇಲ್ಲಿ ಶಿವನು ತನ್ನ ಪರಿವಾರ ಗಣಗಳ ಸಮೇತ ವಾಸವಾಗಿದ್ದಾನೆ. ಮಹಾದೇವನು ನೆಲೆಸುವ ಈ ಹಿಮಗಿರಿ ಅತ್ಯಂತ ಪವಿತ್ರ. ಹೀಗೆಂದು ಸಮಸ್ತ ಹಿಂದೂಗಳು ನಂಬಿದ್ದಾರೆ. ಇಂತಹ ಕೈಲಾಸ ಪರ್ವಾತ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸಿದೆ. ಕೈಲಾಸ ಪರ್ವತದ ರೋಚಕ ವಿಷಯಗಳ ಕುರಿತು ತಿಳಿಯೋಣ ಬನ್ನಿ. ಕೈಲಾಸ ಪರ್ವತವನ್ನು ಮೌಂಟ್ ಕೈಲಾಶ್, ಮೇರು ಪರ್ವತ, ಸುಮೇರು ಪರ್ವತ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಒಂದು ಪರ್ವತ. ಇದರ ಎತ್ತರ 21,7 78 ಅಡಿ

Advertisements

ಇದು ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಗಿಂತ ಸುಮಾರು 7000 ಅಡಿಗಳಷ್ಟು ಕಡಿಮೆ ಎತ್ತರವಿರುವ ಪರ್ವತ. ಹೀಗಿದ್ದರೂ ಕೂಡ ಇದುವರೆಗೆ ಯಾವೊಬ್ಬ ಪರ್ವತರೋಹಿಯೂ ಈ ಪರ್ವತದ ಮೇಲೆ ಹತ್ತಲು ಸಾಧ್ಯವಾಗಿಲ್ಲ. ಇದಕ್ಕೆ ಅನೇಕ ಕುತೂಹಲಕಾರಿ ಹಾಗೂ ರೋಚಕ ಕಾರಣಗಳಿವೆ. ಹಿಮಾಲಯ ಪರ್ವತವನ್ನು ಏರಿದ ಏಕೈಕ ವ್ಯಕ್ತಿಯೆಂದರೆ ಅದು ಮಿಲರೇಪ ಎಂಬ ಬೌದ್ಧ ಸನ್ಯಾಸಿ. ಅವರು ಕೂಡ ಪರ್ವತವನ್ನು ಏರಿದರೆ ವಿನಹ ಹಿಂದಿರುಗಿ ಬಂದಿಲ್ಲ. ಕೈಲಾಸಪರ್ವತ ಹಿಂದೂಗಳಿಗೆ ಮಾತ್ರವಲ್ಲ ಬೌದ್ಧರಿಗೂ ಧಾರ್ಮಿಕ ಮಹತ್ವವುಳ್ಳ ಪವಿತ್ರ ಶಿಖರವಾಗಿದೆ.

ಕೈಲಾಸಪರ್ವತವನ್ನು ಏರಲು ಪ್ರಯತ್ನಪಟ್ಟ ಎಷ್ಟೋ ಪರ್ವತರೋಹಿಗಳು ಕಾಣೆಯಾಗಿದ್ದಾರೆ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಚೀನಾ ಸರ್ಕಾರವು ಕೈಲಾಸಪರ್ವತಕ್ಕೆ ನಿ’ರ್ಬಂಧವನ್ನು ಏರಿದೆ. ಇದು ಭಾರತದ ಭಾಗವೇ ಆಗಿದ್ದರು 1962 ರಲ್ಲಿ ನಡೆದ ಇಂಡೋ ಚೀನಾ ಯು’ದ್ಧ’ದಲ್ಲಿ ಭಾರತ ಈ ಪ್ರದೇಶವನ್ನು ಕಳೆದುಕೊಂಡಿದ್ದು ದುರಾದೃಷ್ಟ. ಭಾರತ-ಚೀನಾ ಗಳ ನಡುವೆ ಎಂತಹ ವೈ’ರತ್ವ ವಿದ್ದರೂ, ಹಿಂದೂಗಳ ಕೈಲಾಸ ಪರ್ವತ ಯಾತ್ರೆಗೆ ಚೀನಾ ಸರ್ಕಾರ ಎಂದು ಅಡ್ಡಿಪಡಿಸದೆ ಇರುವುದು ಕೊಂಚ ಸಮಾಧಾನಕರ ವಿಷಯ. ಕೈಲಾಸ ಪರ್ವತವನ್ನು ಏರಲು ಅದೆಷ್ಟು ಪರ್ವತಾರೋಹಿಗಳು ಪ್ರಯತ್ನಪಟ್ಟಿದ್ದಾರೆ. ಆದರೆ ಅವರಲ್ಲಿ ಯಾರೊಬ್ಬರೂ ಯಶಸ್ಸು ಕಂಡಿಲ್ಲ. ಈ ಕರಿತು ಅನೇಕ ಸಂಶೋಧನೆಗಳು ನಡೆದಿವೆ.

ಅದರಲ್ಲೂ ರಷ್ಯಾ ವಿಜ್ಞಾನಿಗಳು ಕೈಲಾಸ ಪರ್ವತದ ಬಗ್ಗೆ ಸಂಶೋಧನೆ ನಡೆಸಿ ಸಾಕಷ್ಟು ಕುತೂಹಲಕಾರಿ ರೋ’ಚಕ ವಿಷಯಗಳನ್ನು ತಿಳಿಸಿದ್ದಾರೆ. ಕೈಲಾಸ ಪರ್ವತ ಏರಲು ಹೊರಟ ಪರ್ವತಾರೋಹಿಗಳ ಗುಂಪೊಂದು ಶಿಖರವನ್ನು ಪೂರ್ತಿಯಾಗಿ ಇರಲಾರದೆ ಅರ್ಧಕ್ಕೆ ಮರಳಿ ಬಂದಿತಂತೆ. ಅವರೆಲ್ಲ ಹತ್ತು ವರ್ಷಗಳ ಹೆಚ್ಚಿನ ವಯಸ್ಸಾದಂತೆ ಕಾಣುತ್ತಿದ್ದರಂತೆ. ಕೆಲವು ವರ್ಷಗಳ ನಂತರ ಅವರು ವಯಸ್ಸಾಗಿ ಮುದುಕರಾದರಂತೆ. ಇದು ರಷ್ಯಾ ಸಂಶೋಧಕ ಹರ್ನೇಶ್ಟ್ ಮರ್ಶೀವ್ ತನ್ನ ಪುಸ್ತಕದಲ್ಲಿ ಹೇಳಿರುವ ವಿಷಯ. ನಂತರ ಅವರು ಪರ್ವತ ರೋಹಿಗಳ ತಂಡ ಒಂದರ ಜೊತೆ ಹಿಮಾಲಯದ ಕೈಲಾಸ ಪರ್ವತದ ಬಳಿ ತೆರಳುತ್ತಾರೆ.

ಸಂಶೋಧನೆಯ ನಂತರ ಅವರಿಗೆ ತಿಳಿಯುವುದೇನೆಂದರೆ ಕೈಲಾಸ ಪರ್ವತವು ಚಲಿಸುತ್ತದೆ ಎಂಬುದು. ಪರ್ವತರೋಹಿಗಳು ಒಂದು ಭಾಗದಿಂದ ಹತ್ತುತಿದ್ದರೆ ಸ್ವಲ್ಪ ಸಮಯದ ಬಳಿಕ ಪರ್ವತದ ಬೇರೊಂದು ಭಾಗದಲ್ಲಿ ಇರುವಂತೆ ಅವರಿಗೆ ಭಾಸವಾಗುತ್ತಿತ್ತು. ಕೈಲಾಸ ಗಿರಿಯಲ್ಲಿ ಸಮಯ ಬೇಗ ಚಲಿಸುತ್ತದೆ. ಆಯಸ್ಸು ಬೇಗ ಮುಗಿಯುತ್ತದೆ. ಉಗುರು, ತಲೆ ಕೂದಲು ವೇಗದಿಂದ ಬೆಳೆಯುತ್ತವೆ. ಚರ್ಮ ಬೇಗನೆ ಸು’ಕ್ಕು ಗಟ್ಟುತ್ತಾದೆ. ಇವೆಲ್ಲ ಕಾರಣಗಳಿಂದ ಇದುವರೆಗೂ ಕೈಲಾಸ ಪರ್ವತವನ್ನು ಯಾರಿಂದಲೂ ಪೂರ್ತಿಯಾಗಿ ಹತ್ತಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಇದುವರೆಗೆ ಮೇರು ಪರ್ವತ ಏರಲು ಪ್ರಯತ್ನ ಪಟ್ಟ ಬಹುತೇಕರು ಕ’ಣ್ಮರೆ ಆಗಿದ್ದಾರೆ ಇಲ್ಲವೇ ಪ್ರಾ’ಣ ಬಿಟ್ಟಿದ್ದಾರೆ.

ಇದನ್ನು ತಪ್ಪಿಸಲು ಚೀನಾ ಸರ್ಕಾರ ಕೈಲಾಸ ಪರ್ವತ ಏರದಂತೆ ನಿ’ರ್ಭಂಧ ಏರಿದೆ. ಅಲ್ಲದೆ ಚೀನಾಗೆ ಸೇರಿರುವ ಬುದ್ಧರು ವಾಸಿಸುವ ಟಿಬೆಟ್ನ ಈ ಪ್ರದೇಶದಲ್ಲಿ ವಿಮಾನಗಳು ಹೆಲಿಕಾಪ್ಟರ್ ಗಳು ಹಾರುವಂತಿಲ್ಲ. ಕೈಲಾಸ ಪರ್ವತದ ರಹಸ್ಯ ಭೇದಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ರಷ್ಯಾ ವಿಜ್ಞಾನಿ ಸಂಶೋಧಕ
ಹಾರ್ನೇಶ್ಟ್ ಮರ್ಷೇವ್ ಕೈಲಾಸ ಪರ್ವತ ಒಂದು ಮಾನವ ನಿರ್ಮಿತ ಪಿರಮಿಡ್ ಇರಬಹುದು ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇಲ್ಲಿ ನ್ಯೂ’ಕ್ಲಿ’ಯರ್ ಪರೀಕ್ಷೆಗಳು ನಮ್ಮ ಪೂರ್ವಜರ ಕಾಲದಲ್ಲಿ ನಡೆದಿರಬಹುದು ಆದ್ದರಿಂದ ಅಲ್ಲಿ ಒಂದು ರೀತಿಯ ರೇ’ಡಿಯೇಷನ್ ಗಳು ಇವೆ ಎಂದು ಹೇಳಿದ್ದಾರೆ. ಅಲ್ಲದೆ ಈ ಪರ್ವತ ಭೂಮಿಯ ಮಧ್ಯ ಭಾಗದಲ್ಲಿ ಇರುವುದು ವಿಶೇಷವಾಗಿದೆ.

ಕೈಲಾಸ ಪರ್ವತ ಯಾತ್ರೆಗೆ ಹೋಗುವ ಭಾರತೀಯ ಯಾತ್ರಿಕರಿಗೆ ಮಾತ್ರ ಪರ್ವತದ ನಿರ್ದಿಷ್ಠ ದೂರದವರೆಗೆ ಹೋಗುವ ಅನುಮತಿ ಇದೆ. ಆದರೆ ಪರ್ವತ ಏರುವಂತಿಲ್ಲ.
ಪರ್ವತದ ಬಳಿ ಹೋದಾಗ ಮನಸ್ಸು ಅಧ್ಯಾತ್ಮದ ಕಡೆ ಹೋಗುತ್ತದೆ ಮತ್ತು ಕಣ್ಣಲ್ಲಿ ನೀರು ಸುರಿಯುತ್ತದೆ. ಇಂತಹ ದಿವ್ಯ ಅನುಭವ ಆಗುತ್ತದೆ ಎಂಬುದು ಅಲ್ಲಿಗೆ ಹೋದವರ ಅನುಭವ. ಕೈಲಾಸ ಪರ್ವತದ ಬಳಿ ಮಾನಸ ಸರೋವರ ಇದೆ. ಇದು ಪುರಾಣ ಪ್ರಸಿದ್ಧಿ ಮತ್ತು ಹಿಂದೂಗಳ ಪವಿತ್ರ ಕೇಂದ್ರವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಕೈಲಾಸ ಪರ್ವತದ ಪರಿಕ್ರಮ ಮಾಡುವುದು ಮತ್ತು ಮಾನಸ ಸರೋವರನ್ನು ನೋಡುವುದು ಹಿಂದೂಗಳ ಆಸೆಯಾಗಿರುತ್ತದೆ.