Advertisements

ಕಲಬುರಗಿ ರೈತನ ಈ ಹೊಸ ಐಡಿಯಾ ಇಡೀ ದೇಶವೇ ವೈ’ರಲ್.. ಈ ರೈತ ಮಾಡಿದ ಐಡಿಯಾ ಏನು ಗೊತ್ತಾ?

Inspire Kannada Mahiti

ನಮಸ್ತೇ ಸ್ನೇಹಿತರೆ, ಒಂದಷ್ಟು ದೈರ್ಯ ಬುದ್ದಿ ಹಾಗು ವಿಭಿನ್ನ ಆಲೋಚನೆ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸಿಗಳಿಸಬಹುದು ಅನ್ನೋದು ಅಷ್ಟೇ ಸತ್ಯ.. ಅದರಲ್ಲೂ ನಮ್ಮ ರೈತರಿಗೆ ಒಂದಷ್ಟು ದೈರ್ಯ ಆಸ್ತಿ ಎಷ್ಟೇ ನಷ್ಟಗಳನ್ನು ಕಂಡರು ಮತ್ತೆ ಮತ್ತೆ ವಿಭಿನ್ನ ಪ್ರಯತ್ನಗಳಿಗೆ ಇಳಿಯುತ್ತಾರೆ ರೈತರು. ಅದೇ ರೀತಿ ಈ ರೈತ ಕೂಡ.. ಎಲ್ಲರಂತೆ ಅಲ್ಲದೇ ವಿಭಿನ್ನ ಆಲೋಚನೆ ಮೂಲಕ ಹೊಸ ತಳಿಯ ಕೃಷಿ ಮಡಲು ಮುಂದಾಗಿ ಯಶಸ್ಸು ಕಂಡಿದ್ದಾರೆ. ಅಷ್ಟಕ್ಕೂ ಈ ರೈತ ಮಾಡಿದ ಉಪಾಯ ಆದ್ರೂ ಏನು ಎಂದು ತಿಳಿಯೋಣ.. ಕಲ್ಬುರ್ಗಿ ಜಿಲ್ಲೆಯ ಆನಂದ ತಾಲ್ಲೂಕಿನ ಕೊರಳ್ಳಿ ಗ್ರಾಮದ ಬಸವರಾಜ್ ಪಾಟೀಲ್ ಪದವಿ ಮಾಡಿದ್ದರು ಯಾವುದೇ ಉದ್ಯೋಗ ಹುಡಿಕಿಕೊಂಡು ಹೋಗದೇ ವಿಭಿನ್ನ ಕೃಷಿ ಮಾಡಲು ಮುಂದಾದರು.

Advertisements

ಸುಮಾರು 10 ವರ್ಷಗಳಿಂದ ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದ ಬಸವರಾಜ್ ಏನಾದ್ರೂ ವಿಭಿನ್ನ ತಳಿ ಹಾಕಿ ಹೊಸ ವಿಧಾನದಲ್ಲಿ ಕೃಷಿ ಮಾಡಿ ಹೆಚ್ಚು ಲಾಭ ಗಳಿಸಬೇಕಲ್ವಾ ಎಂದುಕೊಂಡು.. ಒಮ್ಮೆ ಯೂಟ್ಯೂಬ್ ನಲ್ಲಿ ಹಳದಿ ಕಲ್ಲಂಗಡಿಯ ಬಗ್ಗೆ ವೀಡಿಯೋ ನೋಡುತ್ತಾರೆ. ಆಗ ಅದರ ಬಗ್ಗೆ ಹೆಚ್ಚು ಆಸಕ್ತಿಗೆ ಹೊಳಗಾದ ಬಸವರಾಜ್ ಅವರು ಜರ್ಮನಿಯಿಂದ ಹಳದಿ ಕಲ್ಳಂಗಡಿಯ ಬೀಜ ತರಿಸಿ, ವೈಜ್ಞಾನಿಕವಾಗಿ ಬೆಳೆಯುವ ವಿಧಾನವನ್ನು ತಿಳಿದುಕೊಂಡು ಪ್ರಾಯೋಗಿಕವಾಗಿ ಎರಡು ಎಕರೆಯಲ್ಲಿ ಬೆಳೆದು ಯಶಸ್ಸವಿ ಕಂಡಿದ್ದಾರೆ.‌. ಕೆಂಪು ಕಲ್ಲಂಗಡಿಗಿಂತ, ಈ ಹಳದಿ ಕಲ್ಲಂಗಡಿ ಹೆಚ್ಚು ರುಚಿಕರವಾಗಿದ್ದು ಹೆಚ್ಚು ಲಾಭವನ್ನು ತಂದುಕೊಟ್ಟಿದೆ ಬಸವರಾಜ್ ಅವರಿಗೆ.

ಹಳದಿ ಕಲ್ಲಂಗಡಿ ಬೆಳೆಯಲು ಎರಡು ಲಕ್ಷ ಖರ್ಚು ಮಾಡಿದ ಬಸವರಾಜ್ ಅವರು ಅವುಗಳನ್ನ ನಗರದ ಮಾರ್ಟ್ ಹಾಗು ಬಿಗ್ ಬಜಾರ್ ಅವರಿಗೆ ಮಾರಾಟ ಮಾಡಿ ಸುಮಾರು 3ಲಕ್ಷ ಲಾಭಗಳಿಸಿದ್ದಾರೆ.. ಕೆಂಪು ಕಲ್ಲಂಗಡಿ ಒಂದು ಟನ್ ಗೆ 5 ರಿಂದ 7ಸಾವಿರಕ್ಕೆ ಮಾರಾಟವಾದ್ರೆ ಈ ಹಳದಿ ಕಲರ್ ಕಲ್ಲಂಗಡಿ ಒಂದು ಟನ್ ಗೆ 15 ಸಾವಿರದ ವರೆಗೂ ಮಾರಾಟವಾಗುತ್ತದೆ. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಹಳದಿ ಕಲ್ಲಂಗಡಿ ಹೆಚ್ಚು ಇಳುವರಿ ಕೊಡುತ್ತದೆ.. ಎಲ್ಲರಂತೆ ಅಲ್ಲದೇ ವಿಭಿನ್ನ ಪ್ರಯತ್ನ ಹಾಗು ದೈರ್ಯ ಮಾಡಿ ಹೊಸ ದಾರಿ ಕಂಡುಕೊಂಡಿರುವ ಬಸವರಾಜ್ ಅವರ ಪರಿಶ್ರಮದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.