Advertisements

ಮದುವೆಯಾಗಿರುವ ಮಹಿಳೆಯರು ಕಾಲುಂಗುರ ಧರಿಸುವ ಹಿಂದಿರುವ ರಹಸ್ಯ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾದ ಶ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೆ ಈ ಆಭರಣಗಳು ಸೌಭಾಗ್ಯದ ಸಂಕೇತವು ಹೌದು ವಿವಾಹವಾದ ಶ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗರವು ಒಂದು ಹಾಗೂ ಇದು ಅತ್ಯಂತ ಮಹತ್ವವನ್ನು ಹೊಂದಿದೆ. ಮಹಿಳೆಯರು ಕಾಲುಂಗುರ ಧರಿಸುವುದರಿಂದ ಹತ್ತಾರು ಲಾಭಗಳು ಇದೆ ಎನ್ನುತ್ತಾರೆ. ಕಾಲುಂಗುರ ತೊಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದರೆ ಕಾಲುಂಗುರದ ಮಹತ್ವವೇನು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳೇನು ಈ ಎಲ್ಲ ವಿಷಯಗಳನ್ನು ನೋಡಿ. ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡುತ್ತಾರೆ.ಇದು ಚಿನ್ನದಿಂದಲೇ ಮಾಡಬಹುದಾಗಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ದರಿಸ ಬಾರದು ಎಂಬ ನಂಬಿಕೆ ಇದೆ.
ಚಿನ್ನ ಲಕ್ಷ್ಮೀದೇವಿಯ ಸಂಕೇತ ಆದ್ದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನ ಇಷ್ಟಪಡುವುದಿಲ್ಲ ಹಾಗೂ ಹಾಕಬಾರದು ಕೂಡ
ಪೌರಾಣಿಕ ಕಾಲದಲ್ಲಿ ನಾವು ಗಮನಿಸಿದಾಗ ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖವಿದೆ. ಸ್ನೇಹಿತರೆ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರಗಳನ್ನು ಎಸೆದಿದ್ದ ರಂತೆ.

[widget id=”custom_html-3″]

Advertisements

ಅಂದರೆ ಇದರಿಂದಲೇ ಅರ್ಥವಾಗುತ್ತದೆ ಆ ಕಾಲದಿಂದಲೂ ಕಾಲುಂಗುರಗಳ ಬಳಕೆ ಇತ್ತು ಎಂದು. ಮದುವೆಯ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ ತನ್ನ ಪತ್ನಿಗೆ ಕಾಲುಂಗುರ ತೊಡಗಿಸುತ್ತಾನೆ. ಅದು ವಿವಾಹಿತೆಯ ಅನ್ನೋದರ ಸಂಕೇತ ಕೂಡ. ಸಾಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಬೆಳ್ಳಿಯ ಕಾಲುಂಗುರವನ್ನು ತೊಡಿಸುತ್ತಾರೆ. ಕಾಲುಂಗುರ ಕೇವಲ ಸಂಪ್ರದಾಯದ ಪದ್ಧತಿ ಅಷ್ಟೇ ಅಲ್ಲ ಹಾಗೆ ಕಾಲುಂಗುರಗಳನ್ನು ಹಾಕಿಕೊಳ್ಳೋದು ಕೇವಲ ಮದುವೆಯಾಗಿದೆ ಎಂದು ತೋರಿಸುವುದಕ್ಕೆ ಮಾತ್ರವಲ್ಲ.. ಅದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿವೆ ಆ ಎಲ್ಲಾ ಎಲ್ಲ ವಿವರಗಳನ್ನು ಕೊನೆ ಪೂರ್ತಿ ಓದಿ ನೋಡಿ. ಭಾರತೀಯ ವೇದ ಶಾಸ್ತ್ರಗಳ ಪ್ರಕಾರ ಎರಡು ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು ಸಮರ್ಪಕವಾಗಿ ಅಂತರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.. ಇದು ವಿವಾಹಿತ ಸ್ತ್ರೀಯರಿಗೆ ಗರ್ಭ ಧರಿಸಲು ಉತ್ತಮ ವೇದಿಕೆಯನ್ನು ಉಂಟುಮಾಡುತ್ತದೆ. ಅದಲ್ಲದೆ ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳನ್ನು ಗರ್ಭಾಶಯಕ್ಕೆ ನೇರವಾಗಿ ಸಂಪರ್ಕಿಸುವಾಗ ಅದು ಹೃದಯದ ಮೂಲ ಆದು ಹೋಗುತ್ತದೆ ಎಂದು ಹೇಳಲಾಗುತ್ತದೆ.

[widget id=”custom_html-3″]

ಆದ್ದರಿಂದ ಕಾಲುಂಗುರವನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಲ್ಲಿ ದರಿಸುವುದು ನೀವು ಗಮನಿಸಿರ ಬಹುದು. ಇದರ ಮುಖ್ಯ ಉದ್ದೇಶ ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ. ಮತ್ತು ಗರ್ಭಾಶಯಕ್ಕೆ ಸಮಪ್ರಮಾಣದ
ಸಂತುಳಿತ ರಕ್ತದ ಒತ್ತಡವನ್ನು ನಿರ್ವಹಿಸುವುದರ ಮೂಲಕ ಅದರ ಆರೋಗ್ಯವನ್ನು ಸಮರ್ಪಕವಾಗಿ ಕಾಪಾಡುತ್ತದೆ. ಬೆಳ್ಳಿಯು ಒಂದು ಉತ್ತಮ ವಾಹಕವಾಗಿದ್ದು ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು ಭೂಮಿಯ ಧ್ರುವ ಶಕ್ತಿಯನ್ನು ಹೀರಿ
ಶರೀರಕ್ಕೆ ವರ್ಗಾಯಿಸುತ್ತವೆ ಮತ್ತು ತನ್ಮೂಲಕ ಸಂಪೂರ್ಣ ದೈಹಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಒದಗಿಸುತ್ತವೆ. ಅದಕ್ಕೆ ಮಹಿಳೆಯರು ಕಾಲುಂಗುರವನ್ನು ಯಾವಾಗಲೂ ಹಾಕಿ ಕೊಳ್ಳಲೇಬೇಕು. ಕಾಲುಂಗುರ ಋತುಚಕ್ರ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಸಹಾಯ ಮಾಡುತ್ತದೆ ಕಾಲುಂಗುರ ಸಂತಾನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಒತ್ತಡ ಜೀವನ ಶೈಲಿಯನ್ನು ಹೊಂದಿರುವ ಮಹಿಳೆಯರಿಗೆ ಕಾಲುಂಗುರ ಹಾಕಿಕೊಳ್ಳೋದು ಅತಿ ಉತ್ತಮ ಆದರೆ ಇತ್ತೀಚಿನ ಫ್ಯಾಷನ್ ಗಳಲ್ಲಿ ಜನರು ಇದನ್ನು ಹಾಕಿಕೊಳ್ಳುವುದನ್ನೆ ಮರೆಯುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಇದರ ಲಾಭ ಎಷ್ಟು ಇದೆ ಅಂತ ಇವತ್ತಿನ ಮಹಿಳೆಯರಿಗೆ ಅದು ಸಿಟಿಯಲ್ಲಿ ಇರುವಂತಹ ಮಹಿಳೆಯರಿಗೆ ಸ್ಟ್ರೆಸ್ ಎಂಬ ಪದ ತುಂಬಾನೇ ಕಾಮನ್ ಆಗಿದೆ.

[widget id=”custom_html-3″]

ಆದರೆ ಈ ಬೆಳ್ಳಿ ಕಾಲುಂಗರವನ್ನು ಹಾಕಿ ಕೊಳ್ಳುವುದರಿಂದ ಆ ಸ್ಟ್ರೆಸ್ ಅನ್ನು ಕೂಡ ಕಡಿಮೆ ಮಾಡಬಹುದು ಎನ್ನುವ ವೈಜ್ಞಾನಿಕ ಹಿನ್ನೆಲೆ ಈ ಕಾಲುಂಗುರಕ್ಕಿದೆ ಸ್ನೇಹಿತರೆ ಕಾಲುಂಗುರಗಳು ಬೆಳ್ಳಿಯದ್ದೆ ಏಕೆ ಆಗಿರಬೇಕು.. ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಬೆಳ್ಳಿ ಎಲ್ಲ ಲೋಹಗಿಂತಲೂ ಹೆಚ್ಚು ಉಷ್ಣವಾಹಕ ದೇಹದಲ್ಲಿನ ಅಧಿಕ ಉಷ್ಣತೆಯನ್ನು ಬೆಳ್ಳಿ ತಗ್ಗಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಲಭವಾಗಿ ಮಾಡುತ್ತದೆ. ದೇಹದ ಆರೋಗ್ಯ ಹೆಚ್ಚಿಸಲು ಬೆಳ್ಳಿ ಅತಿ ಸಹಾಯ ಮಾಡುತ್ತದೆ ಕೆಲವು ಪುರಾಣಗಳ ಪ್ರಕಾರ ಕಾಲುಂಗುರ ಧರಿಸುವುದರಿಂದ ಸ್ತ್ರೀಯರು ಸ್ವೆಚ್ಛ ಚಾರಿಗಳಾಗದೆ ಧರ್ಮ ಪಾಲನೆ ಮಾಡುತ್ತಾರೆ ಎನ್ನಲಾಗುತ್ತದೆ. ಕಾಲುಂಗುರಗಳಿಂದ ಸ್ತ್ರೀಯರ ದೇಹ ಕೂಡ ಶುದ್ಧಿಯಾಗುತ್ತದೆ ಕಾಲುಂಗುರಗಳು ಸುತ್ತಮುತ್ತಲಿನ ಪರಿಸರದ ಕೆಟ್ಟ ಶಕ್ತಿಗಳು ನಿರ್ಮೂಲ ಮಾಡುತ್ತದೆ ಹೆಬ್ಬೆರಳಿನ ಸಮೀಪದ ಬೆರಳು ವಾಯು ತತ್ವವನ್ನು ಪ್ರೇರಿಸುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿ ಹೆಚ್ಚಾಗುತ್ತದೆ ಇದರಿಂದ ವಾಯು ಮಂಡಳಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ವೇದಶಾಸ್ತ್ರ ಕೂಡ ಇದನ್ನು ಸಮರ್ಥಿಸುತ್ತದೆ.ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತನ್ನ ಸ್ತ್ರೀಧರ್ಮ ಕರ್ತವ್ಯ ಮತ್ತು ನಿಯಮಗಳು ಕೂಡ ಅರಿವಾಗುತ್ತದೆ.