Advertisements

ಸ್ಯಾಂಡಲ್ವುಡ್ ನ ಖ್ಯಾತ ಸಾಹಿತಿ ಕೆ ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ! ಕೋರ್ಟ್ ಮೆಟ್ಟಿಲೇರಿದ ದಂಪತಿ

Cinema

ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಕೆ ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು ಈ ದಂಪತಿ ಈಗ ಪೊ’ಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತನ್ನ ಪತ್ನಿ ಅಶ್ವಿನಿ ಕಾ’ಣೆಯಾಗಿದ್ದಾರೆ ಎಂದು ಅವರು ಸೆಪ್ಟೆಂಬರ್ ೩೦ ರಂದು ದೂರು ನೀಡಿದ್ದರು. ತನ್ನ ಪತ್ನಿಯ ಖಾತೆಯಿಂದ ಬರೋಬ್ಬರಿ ೧೯ ಲಕ್ಷವನ್ನ ಬಾಗಲಕೋಟೆಯ ಬಡಗಿ ಗ್ರಾಮದವರಾದ ಗಂಗಾ ಕುಲಕರ್ಣಿ ಮತ್ತು ಶಿವಾನಂದಾ ವಾಲಿ ಎಂಬುವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಅವರ ವಿರುದ್ಧ ಕಲ್ಯಾಣ್ ಅವರು ಆ’ರೋಪ ಮಾಡಿದ್ದು ಇದರ ಹಿನ್ನೆಲೆಯಲ್ಲಿ ಕಲ್ಯಾಣ್ ಅವರ ಪತ್ನಿಯನ್ನ ಪೊ’ಲೀಸರು ವಿಚಾರಣೆ ನಡೆಸಿದ್ದಾರೆ.

Advertisements

ಆದರೆ ಈ ಪ್ರ’ಕರಣದಲ್ಲಿ ಟ್ವಿಸ್ಟ್ ಆಗಿದ್ದು ಕಲ್ಯಾಣ್ ಅವರ ಪತ್ನಿ ಅಶ್ವಿನಿ ಕುಟುಂಬ ಕಲಹ ಎಂದು ಮತ್ತೊಂದು ದೂರು ದಾಖಲು ಮಾಡಿದ್ದಾರೆ. ಇನ್ನು ಈ ದೂರಿನಲ್ಲಿ ಅವರು ಹೇಳಿರುವ ಹಾಗೆ ನಮ್ಮ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿದ್ದು ಅಸ್ತಿ ವಿಚಾರಕ್ಕೆ ಅವರು ನನ್ನನ್ನ ವಿವಾಹವಾಗಿದ್ದಾರೆ ಎಡನು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಇದೆ ವೇಳೆ ಅಶ್ವಿನಿ ಅವರ ವಕೀಲರು ಜೂನ್ ೨೬ರಂದು ಬೆಳಗಾವಿಯ ನ್ಯಾಯಾಲಯದಲ್ಲಿ ಡೈ’ವರ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನು ಡೈ’ವರ್ಸ್ ಗಾಗಿ ಅರ್ಜಿ ಸಲ್ಲಿಸಿರುವ ಕಲ್ಯಾಣ್ ಅವರ ಪತ್ನಿ ಕಾರಣವನ್ನು ಕೊಟ್ಟಿದ್ದು ಅವರು ನನಗೆ ಮಾ’ನಸಿಕವಾಗಿ, ದೈ’ಹಿ’ಕವಾಗಿ ಹಿಂ’ಸೆ ನೀಡುತ್ತಿದ್ದರು ಎಂಬುದಾಗಿ ಆ’ರೋಪ ಮಾಡಿದ್ದಾರೆ. ಆದರೆ ಕೆ. ಕಲ್ಯಾಣ್ ಅವರು ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಸಿರುವ ಪೊಲೀಸರು ಅವರ ಪತ್ನಿ ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಸಿಲ್ಲ ಎಂದು ಅಶ್ವಿನಿಯವರ ಲಾಯರ್ ಹೇಳಿದ್ದಾರೆ. ಜೊತೆಗೆ ಕಲ್ಯಾಣ್ ಅವರು ದೂರು ನೀಡಿರುವ ಶಿವಾನಂದಾ ಅವರು ಅಶ್ವಿನಿ ಅವರ ಸೋದರ ಸಂಬಂಧಿ ಎಂದು ಕಲ್ಯಾಣ್ ಪತ್ನಿ ಅಶ್ವಿನಿಯವರ ವಕೀಲರು ಹೇಳಿದ್ದಾರೆ.