Advertisements

ಮತ್ತೊಂದು ಸಂತೋಷದ ಸುದ್ದಿ ಹಂಚಿಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ..

Cinema Entertainment

ನಮಸ್ತೇ ಸ್ನೇಹಿತರೇ, ತನ್ನ ವಿಶಿಷ್ಟ ಕಾಮಿಡಿಯ ಮೂಲಕ ಇಡೀ ಕರ್ನಾಟಕದ ಮನೆ ಮನೆಗಳಲ್ಲಿ ಖ್ಯಾತರಾಗಿದ್ದಾರೆ ಕಾಮಿಡಿಕಿಲಾಡಿಗಳು ಖ್ಯಾತಿಯ ನಯನ. ಕಲಾವಿದೆಯಾಗಿ ಸಿನಿಮಾ ರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ನಯನಾಗೆ ಮೊದಲು ವಿರೋಧ ಎದುರಾಗಿದ್ದೆ ತನ್ನ ಮನೆಯಿಂದ. ಹೌದು, ಸ್ವತಃ ತನ್ನ ತಂದೆಯ ವಿರೋಧದ ನಡುವೆಯೇ ಹಾಗೂ ಮಿತ್ರರ ಒತ್ತಾಯದ ಮೇರೆಗೆ ಕಾಮಿಡಿಕಿಲಾಡಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಅತ್ಯತ್ತಮ ಅಭಿನಯದ ಮೂಲಕ ದೊಡ್ಡ ಮೋಡಿಯನ್ನೇ ಮಾಡಿದ್ರು. ಇನ್ನು ಈ ಕಾರ್ಯಕ್ರಮದ ಮೂಲಕ ಫೇಮಸ್ ಆದ ನಯನಾಗೆ ಸ್ಟಾರ್ ನಂತರ ಚಿತ್ರಗಳಲ್ಲಿ ಅಭಿನಯಸಿಯುವ ಸಲುವಾಗಿ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು.

Advertisements

ಕಿರುತೆರೆಯಿಂದ ಬೆಳ್ಳಿತೆರೆಯ ಕಡೆ ಮುಖ ಮಾಡಿದ ನಟಿ ನಯನ ನಟ ದರ್ಶನ್ ಅವರ ಒಡೆಯ, ನಿಖಿಲ್ ಅವರ ಸೀತಾ ರಾಮ ಕಲ್ಯಾಣ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯ ಮೂಲಕ ಅಪಾರ ಅಭಿಮಾನಿ ಬಳಗ ಗಳಿಸಿದ ನಯನಾ ೨೦೧೮ರ ಏಪ್ರಿಲ್ ನಲ್ಲಿ ಶರತ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಈ ಶರತ್ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರೀಯರಾಗಿರುವ ನಟಿ ನಯನ ವಿಭಿನ್ನವಾದ ಫೋಟೋಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಒಮ್ಮೆ ಇಂಗ್ಲಿಷ್ ನಲ್ಲಿ ಪೋಸ್ಟ್ ಹಾಕಿ ದೊಡ್ಡ ವಿವಾದ ಕೂಡ ಮಾಡಿಕೊಂಡಿದ್ದರು ನಯನಾ. ಕಾಮಿಡಿ ಕಿಲಾಡಿಗಳು, ಸಿನಿಮಾ ಜೊತೆಗೆ ನಿರೂಪಣೆಯಲ್ಲಿಯೂ ಕೂಡ ಮಿಂಚಿದ್ರು ನಟಿ ನಯನಾ. ಈಗ ಮತ್ತೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿಕಿಲಾಡಿಗಳು ಚಾಂಪಿಯನ್ ಚಿಪ್ ಕಾರ್ಯಕ್ರಮದಲ್ಲಿ ನಗೆಯ ರಸದೂಟವನ್ನ ಬಡಿಸುತ್ತಿದ್ದಾರೆ ನಟಿ ನಯನಾ.

ಇದೆಲ್ಲದರ ನಡುವೆ ಮತ್ತೊಂದು ಸಿಹಿ ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಯನಾ ಸಿನಿಮಾ ಬಳಿಕ ಮೊದಲ ಬಾರಿಗೆ ಭಕ್ತಿ ಪ್ರಧಾನ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಟ ನಿರ್ದೇಶಕ ನವೀನ್ ಕೃಷ್ಣ ಅವರ ನಿರ್ದೇಶನದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ಯಡಿಯೂರು ಸಿದ್ದಂಲಿಂಗೇಶ್ವರ ಸ್ವಾಮಿ ಧಾರಾವಾಹಿಯಲ್ಲಿ ನಯನಾ ಅಭಿನಯಿಸುತ್ತಿದ್ದು ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದು ಸಂತೋಷದ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಂದೆಯ ವಿರೋಧದ ನಡುವೆಯೂ ಎಲ್ಲವನ್ನು ಮೆಟ್ಟಿ ಸ್ಯಾಂಡಲ್ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ಬೆಳೆಯುತ್ತಿರುವ ನಟಿ ನಯನಾರವರಿಗೆ ಶುಭವಾಗಲಿ ಎಂದು ನಾವೆಲ್ಲರೂ ಹಾರೈಸೋಣ..ಸ್ನೇಹಿತರೇ, ನಯನಾ ಅಭಿನಯಿಸಿರುವ ಯಾವ ಚಿತ್ರ ನಿಮಗೆ ತುಂಬಾ ಇಷ್ಟವಾಯಿತು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..