ಸಿನಿಮಾ ಸೆಲೆಬ್ರೆಟಿಗಳೆಂದರೆ ನಮ್ಮ ಕಣ್ಣಿನ ಮುಂದೆ ಮೊದಲು ಬರುವುದು ಅವರು ಕೋಟ್ಯಾಂತರ ಹಣ ಸಂಪಾದನೆ ಮಾಡುತ್ತಾರೆ, ತಮ್ಮ ಜೀವನ ಪರ್ಯಂತ ಹೈ ಪೈ ಜೀವನ ನಡೆಸುತ್ತಾರೆ ಎನ್ನುವುದು. ಅದೇನೋ ನಿಜ. ಆದರೆ ಎಷ್ಟೋ ನಾಯಕ ನಟಿಯರು ತಮ್ಮ ಸೆಲೆಬ್ರೆಟಿ ಜೀವನ ಬೇಜಾರಾಗಿ, ಹಣದ ಮೇಲಿನ ವ್ಯಾಮೋಹ ಹೋಗಿ, ಸಾಮಾನ್ಯರಂತೆ ಜೀವನ ನಡೆಸಬೇಕೆಂಬ ಇಚ್ಛೆಯಿಂದ ಅಥ್ವಾ ದಾನ ಮಾಡಬೇಕು ಎಂಬ ಒಳ್ಳೆಯ ಮನಸ್ಸಿನಿಂದಲೋ ತಾವು ದುಡಿದ ಹಣವನ್ನ ಬಡವರಿಗಾಜಿ ದಾನ ಮಾಡಿ ಸಾರ್ಥಕ ಜೀವನ ನಡೆಸುತ್ತಿರುವ ಸೆಲೆಬ್ರೆಟಿಗಳು ಇದ್ದಾರೆ ಎಂದರೆ ನೀವು ನಂಬಲೇಬೇಕು..ಹೀಗೆ ಕೋಟ್ಯಂತರ ಹಣವನ್ನ ದಾನ ಮಾಡಿಜೀವನ ನಡೆಸುತ್ತಿರುವ ನಟಿಯರು ಯಾರೆಂದು ..

ಕನ್ನಡ ಚಿತ್ರಗಳು ಸೇರಿದಂತೆ ದಕ್ಷೀಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ರೀ ವಿದ್ಯಾ ತಾಯಿ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿದವರು. ನಟಿ ಶ್ರೀ ವಿದ್ಯಾ ಅವರು ಮದುವೆಯಾದದ್ದು ಜಾರ್ಜ್ ಥಾಮಸ್ ಎಂಬ ವ್ಯಕ್ತಿಯನ್ನ. ಆದರೆ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ತನ್ನ ಪತಿಯ ಕಾ’ಟವನ್ನ ಸಹಿಸಲಾರದ ನಟಿ ಮದುವೆಯಾದ ಕೇವಲ ನಾಲ್ಕೇ ತಿಂಗಳಿನಲ್ಲಿ ಆತನಿಂದ ಡೈ’ವರ್ಸ್ ತೆಗೆದುಕೊಂಡು ಒಂಟಿ ಜೀವನ ನಡೆಸಿದ್ರು. ಕೊನೆಗೆ ಜೀವನದಲ್ಲಿ ಬೇಸರವಾಜಿ ವಿದ್ಯಾ ತಮ್ಮ ಹತ್ತಾರು ಕೋಟಿಯ ಆಸ್ತಿಯಲ್ಲಿ ಮನೆ ಕೆಲಸದವರಿಗೆ ಒಂದಷ್ಟು ಆಸ್ತಿಯನ್ನ ಕೊಟ್ಟು, ಇನ್ನುಳಿದ ಆಸ್ತಿಯನ್ನ ಮಕ್ಕಳಿಗಾಗಿ ನಾಟ್ಯ ಶಾಲೆ ಮಾಡುವ ಸಲುವಾಗಿ ವಿಲ್ ಬರೆದು ತಮ್ಮ ಕೊನೆಯ ದಿನಗಳಲ್ಲಿ ಸಾಮಾನ್ಯರಂತೆ ಜೀವನ ನಡೆಸಿದ ನಟಿ ವಿದ್ಯಾ ೫೩ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರು.
ಒಂದು ಕಾಲದ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿದವರಲ್ಲಿ ಕಾಂಚನ ಕೂಡ ಒಬ್ಬರು. ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇವರು ಕೂಡ ಕೋಟ್ಯಂತರ ಆಸ್ತಿಯನ್ನ ಸಂಪಾದನೆ ಮಾಡಿದ್ದರು. ಆದರೆ ಒಂದು ದಿನ ಕಾಂಚನ ಅವರ ತಂದೆ ಅವರ ಕೈನಲ್ಲಿ ಸಹಿ ಮಾಡಿಸಿಕೊಂಡು ಇಡೀ ಆಸ್ತಿಯೆಲ್ಲಾ ನನ್ನದೇ ಎಂದರು. ಆಗ ತನ್ನ ತಂದೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಕಾಂಚನ ಅವರ ಮೋಸದ ವಿರುದ್ಧ ಹೋರಾಡಿ ಕೊನೆಗೆ ಜಯಿಸಿ ತಮ್ಮ ಆಸ್ತಿಯನ್ನ ಹಿಂಪಡೆಯುವಲ್ಲಿ ಯಶಸ್ವಿಯಾದರು.

ಅಷ್ಟರ ಹೊತ್ತಿಗೆ ತಮ್ಮ ಆಸ್ತಿ ಹಣದ ಮೇಲೆ ಮೋಹವನ್ನ ಕಳೆದುಕೊಂಡಿದ್ದ ನಟಿ ಕಾಂಚನ ತಮ್ಮ ೫೦ ಕೋಟಿ ಆಸ್ತಿಯನ್ನ ಶ್ರೀಕ್ಷೇತ್ರ ತಿರುಪತಿ ದೇವಾಯಕ್ಕೆ ದಾನ ಮಾಡಿದ್ರು ಎಂದು ಹೇಳಲಾಗಿದೆ. ಹೀಗೆ ನಮಗೆ ಗೊತ್ತಿಲ್ಲದೇ ಇರುವ ಎಷ್ಟೋ ನಟ ನಟಿಯರು ತಮ್ಮ ಇಡೀ ಆಸ್ತಿಯೆನ್ನಲ್ಲಾ ದಾನ ಮಾಡಿ ಸಾಮಾನ್ಯ ಜೀವನ ನಡೆಸುವವರು ನಮ್ಮ ನಡುವೆ ಇದ್ದಾರೆ.