Advertisements

ಊರಿಗೆ ಊರೇ ಇಲ್ಲಿನ ಜನ ಮನೆ ಬಿಟ್ಟು ಖಾಲಿಯಾದ್ರು.. ಮಕ್ಕಳು ಬಿಟ್ಟೋದ್ರು! ಆದರೆ ಈತ ಒಬ್ಬ ಮಾತ್ರ ಊರಲ್ಲಿ ಒಬ್ಬಂಟಿಯಾಗಿ ಜೀವನ ನಡೆಸ್ತಿದ್ದಾ‌ನೆ.. ಕಾರಣ ಏನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಹಿರಿಯರು ಹಾಕಿದ ಆಲದ ಮರ ಅಂಥ ಅದಕ್ಕೆ ನೇ’ಣು ಹಾಕಿಕೊಳ್ಳೊದಕ್ಕೆ ಆಗುತ್ತಾ ಅನ್ನುವ ಮಾತಿದೆ.. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪೂರ್ವಜರು ಹುಟ್ಟಿ ಬೆಳೆದು ಇಲ್ಲೇ ಮಣ್ಣಲ್ಲಿ ಮಣ್ಣಾಗಿದ್ದಾರೆ.. ನಾನು ಸತ್ತರೂ ಇಲ್ಲೇ, ಬದುಕಿದರು ಇಲ್ಲೇ ಅಂಥ ಒಬ್ಬಂಟಿ ಜೀವನ ನಡೆಸ್ತಿದ್ದಾನೆ. ಅದು ಇಡೀ ಊರಿನಲ್ಲಿ ಏಕಾಂಜಿ ಜೀವನ.. ಇದೇನಿದು ಒಂದೇ ಊರಿನಲ್ಲಿ ಒಬ್ಬರೇ ಇರೋಕೆ ಸಾಧ್ಯಾನಾ ಅಂಥ ಅಂದುಕೊಳ್ತಿದ್ದೀರಾ. ನಂಬೋದಕ್ಕೆ ಸ್ವಲ್ಪ ಕಷ್ಟ ಅನಿಸುತ್ತೆ, ಆದ್ರೆ ಇದೇ ಸತ್ಯ.. 70 ವರ್ಷದ ಈ ವ್ಯಕ್ತಿಯ ಹೆಸರು ಕಂದಸ್ವಾಮಿ.. ತಮಿಳುನಾಡಿನ ಟ್ಯೂಟಿಕೋರಿನ್ ಜಿಲ್ಲೆಯ ಮೀನಾಕ್ಷಿಪುರಂ ನಿವಾಸಿ. ಯಾರು ಇಲ್ಲದ ಈ ಊರಿನಲ್ಲಿ ಏಕಾಂಜಿ ಜೀವನ ನಡೆಸ್ತಿದ್ದಾರೆ..

ಇವರ ಈ ಒಂಟಿ ಜೀವನಕ್ಕೆ ಕಾರಣ ಕೇಳಿದರೆ ಈ ರೀತಿಯೂ ಇರ್ತಾರೆ ಅಂಥ ಅನಿಸಿಬಿಡುತ್ತೆ. ಆದರೆ ಕಂದಸ್ವಾಮಿ ಇರುವ ಈ ಗ್ರಾಮ ಮುಂಚೆ ಈಗಿರಲಿಲ್ಲಾ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದವು.. ಆದರೆ ಬರ್ತಾ ಬರ್ತಾ ನೀರಿನ ಕೊರತೆ, ಓಡಾಡೋದಕ್ಕೆ ಸರಿಯಾದ ರಸ್ತೆ ಇಲ್ಲಾ. ದಿನನಿತ್ಯ ಬಳಸುವಂತಹ ವಸ್ತು ಏನಾದ್ರು ತಗೊಂಡು ಬರ್ಬೇಕು ಅಂಥ ಹೋದ್ರೆ 6 ಕಿಲೋಮೀಟರ್ ನಡೆದುಕೊಂಡೇ ಹೋಗ್ಬೇಕು.. ಇದರಿಂದ ಕಷ್ಟ ಅನುಭವಿಸಿದ ಜನ ಗ್ರಾಮವನ್ನೇ ಬಿಟ್ಟು ಹೋಗೊದಕ್ಕೆ ತಿರ್ಮಾನ ಮಾಡ್ತಾರೆ.

Advertisements

ಈಗೆ ಒಂದೊಂದೆ ಕುಟುಂಬ ದಿನೇ ದಿನೇ ಈ ಗ್ರಾಮವನ್ನ ಬಿಟ್ಟು ಹೋಗ್ತಾರೆ.. ಕೊನೆದಾಗಿ ಉಳಿದುಕೊಳ್ಳೋದು ಕಂದಸ್ವಾಮಿ ಮಾತ್ರ. ಮಕ್ಕಳು ಈ ಊರನ್ನು ಬಿಟ್ಟು ಹೋಗೋಣ ನಮ್ಮ ಜೊತೆಯಲ್ಲೇ ಬಂದ್ಬಿಡು ಅಂಥ ಎಷ್ಟೇ ಕರೆದರು ಕಂದಸ್ವಾಮಿ ಮಾತ್ರ ಇದಕ್ಕೆ ಒಪ್ಪದೇ ಅವರ ಜೊತೆ ಹೋಗದೇ ಹುಟ್ಟಿ ಬೆಳೆದ ನೆಲ ಇದು.. ನನ್ನ ಉಸಿರು ಇರೋವರೆಗೂ ಇಲ್ಲಿಯೇ ಇರ್ತೇನೆ ಎಂದು ಹೇಳಿ ಮಕ್ಕಳನ್ನ ಕಳಿಸಿಕೊಡ್ತಾರೆ‌. ಇನ್ನೂ ಇವರು ಮೂರು ದಿನಕ್ಕೆ ಬರುವ ನೀರನ್ನ ಶೇಖರಣೆ ಮಾಡಿಕೊಂಡು ತಿಂಗಳಿಗೊಮ್ಮೆ ನಗರಕ್ಕೆ ಹೋಗಿ ದಿನಸಿ ವಸ್ತುಗಳನ್ನು ತಂದು ಜೀವನ ನಡೆಸ್ತಿದ್ದಾರೆ.. ಒಂದು ರೀತಿಯಲ್ಲಿ ಒಂಟಿ ಸಲಗ ಎನ್ನಬಹುದು ಇವರ ಬಗ್ಗೆ ನಿವೇನ್ ಹೇಳ್ತೀರಾ.