Advertisements

ಜೂನ್ 21ರಂದು ಸಂಭವಿಸಲಿದೆ ಅತ್ಯಂತ ಪ್ರಭಾವಶಾಲಿ ಕಂಕಣ ಸೂರ್ಯ ಗ್ರಹಣ ! ಈ 4 ರಾಶಿಗಳಿಗೆ ಒದಗಿ ಬರಲಿದೆ ಶುಭಯೋಗ

Adyathma Astrology

ಸಾಮಾನ್ಯವಾಗಿ ಗ್ರಹಣಗಳು ಸಂಭವಿಸುವುದರಿಂದ ಮನುಷ್ಯನ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗಿದೆ. ಇನ್ನು ಗ್ರಹಣಗಳಿಂದ ಕೆಲ ರಾಶಿಗಳಿಗೆಶುಭಫಲ ದೊರೆತರೆ, ಕೆಲ ರಾಶಿಗಳಿಗೆ ಕೆಡುಕು ಉಂಟಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಚಂದ್ರಗ್ರಹಣ ಸಂಭವಿಸಿತ್ತು. ಈಗ ಸೂರ್ಯಗ್ರಹಣದ ಸರದಿ. ಈ ಬಾರಿ ಇದೆ ತಿಂಗಳು 21ನೇ ತಾರೀಖಿನಂದು ಸೂರ್ಯಗ್ರಹಣ ಸಂಭವಿಸಲಿದೆ.

Advertisements

ಹೌದು, ಜೂನ್ ೨೧ರ ಭಾನುವಾರದಂದು (ಕಂಕಣ) ಖಂಡಗ್ರಾಸ ಸೂರ್ಯಗ್ರಹಣ ಸಂಬಾಹ್ವಿಸಲಿದೆ. ಇನ್ನು ಇದೆ ದಿನ ಅಮಾವಾಸ್ಯೆ ಇರಲಿದೆ. ಇನ್ನು ಬೆಳಿಗ್ಗೆ ೧೦ ಗಂಟೆ ೪ ನಿಮಿಷಕ್ಕೆ ಸೂರ್ಯ ಗ್ರಹಣ ಆರಂಭವಾಗಲಿದ್ದು, ಮಧ್ಯಾನ್ಹ 1.23 ಗಂಟೆಯವರಿಗೆ ಗ್ರಹಣ ಸಂಭವಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಟ್ಟಾರೆ 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಸಂಭವಿಸಲಿದೆ ಎಂದು ಹೇಳಲಾಗಿದೆ.

ಇನ್ನು ಭಾನುವಾರ ಸಂಭವಿಸುವ ಈ ಖಗ್ರಾಸ ಸೂರ್ಯ ಗ್ರಹಣದಿಂದ ಕೆಲವೊಂದು ರಾಶಿಗಳಿಗೆ ಶುಭದ ಫಲವಿದ್ದರೆ, ಕೆಲ ರಾಶಿಗಳಿಗೆ ಅಶುಭದ ಫಲ ಇದೆ ಎಂದು ಹೇಳಲಾಗಿದ್ದು, ಎರಡು ರಾಶಿ ಹಾಗೂ ಒಂದು ನಕ್ಷತ್ರದ ಮೇಲೆ ಗ್ರಹಣದ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವಂತೆ ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಆಗುವುದರಿಂದ , ಮೇಷ, ಕನ್ಯಾ, ಸಿಂಹ ಹಾಗೂ ಮಕರ ಸೇರಿದಂತೆ 4 ರಾಶಿಗಳಿಗೆ ಶುಭಫಲ ದೊರೆಯಲಿದೆ ಎಂದು ಹೇಳಲಾಗಿದೆ.

ಇನ್ನು ಈ ಸೂರ್ಯ ಗ್ರಹಣದ ಪ್ರಭಾವದಿಂದ ತುಲಾ, ಧನು,ವೃಧಭ ಹಾಗೂ ಕುಂಭ ರಾಶಿಗಳಿಗೆ ಮಿಶ್ರಫಲದ ಸಾಧ್ಯತೆಯಿದ್ದು, ಕರ್ಕ, ಮಿಥುನ, ವೃಚ್ಚಿಕ ಮತ್ತು ಮೀನ ರಾಶಿಯವರಿಗೆ ಅಶುಭದ ಫಲಗಳು ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.