Advertisements

ಮಹಾಪ್ರಭು ನೀವೇನು ಇಲ್ಲಿ ಡೈಲಾಗ್ ಮೂಲಕ ಫೇಮಸ್ ಆಗಿದ್ದ ಹಾಸ್ಯ ನಟ ಇನ್ನು ನೆನಪು ಮಾತ್ರ – ಏನಾಗಿತ್ತು ಗೊತ್ತಾ ಈ ನಟನಿಗೆ?

Uncategorized

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಕಲಾವಿದ ಎನಿಸಿಕೊಂಡಿದ್ದ ಹಾಸ್ಯ ನಟ ಮೈಕಲ್ ಮಧು ನಿಧನ ಹೊಂದಿದ್ದಾರೆ. ಊಟ ಮುಗಿಸಿ ಕುಳಿತಿದ್ದ ಮೈಕಲ್ ಮಧು ಅವರು ಇದ್ದಕಿದ್ದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಈ ಘಟನೆ ನಡೆದ ತಕ್ಷಣ ಅವರನ್ನು ಕಿಮ್ಸ್ ಆಸ್ವತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

Advertisements

ಓಂ, ಶ್, ಸೂರ್ಯವಂಶ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನಟ. ಸೂರ್ಯವಂಶ ಸಿನಿಮಾದ ಮಹಾಪ್ರಭು ನೀವೇನು ಇಲ್ಲಿ ಎಂಬ ಕಾಮಿಡಿ ಡೈಲಾಗ್ ಇಂದಿಗೂ ಕೂಡ ಫೇಮಸ್. ಮೀಸೆ ಹೊತ್ತ ಗಂಡಸಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡು ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮನೆಯಲ್ಲಿ ಮದ್ಯಾಹ್ನ ಊಟ ಮಾಡಿ ಕುಳಿತಿದ್ದ ಮೈಕಲ್ ಮಧು ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದು ಒದ್ದಾಡಿದರು ಈ ವೇಳೆ ಆಸ್ವತ್ರೆಯಲ್ಲಿ ಚಿಕೆತ್ಸೆ ಫಲಕಾರಿಯಾಗದ ಕಾರಣ ನಿಧನ ಹೊಂದಿದ್ದಾರೆ. ಕುಟುಂಭದವರಿಗೆ ಈ ದಿನ ಪಾರ್ಥಿವ ಶರೀರವನ್ನು ಕಳಿಸಿಕೊಡಲಾಗುವುದು ಎಂದು ಆಸ್ವತ್ರೆ ತಿಳಿಸಿದೆ.

ಕುಮಾರ್ ಗೋವಿಂದ್, ಕಾಶಿನಾಥ್, ಉಪೇಂದ್ರ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟ ಮೈಕಲ್ ಮಧು ಇನ್ನು ನೆನಪು ಮಾತ್ರ.