Advertisements

ತಂದೆಯ ವಿರುದ್ಧವೇ ದೂರು ಕೊಟ್ಟ ಮಗಳ ಬಗ್ಗೆ ನಟ ಸತ್ಯಜಿತ್ ಬಿಚ್ಚಿಟ್ಟ ಅಸಲಿ ಸತ್ಯ ಏನು ಗೊತ್ತಾ ?

Cinema

ಸ್ಯಾಂಡಲ್ವುಡ್ ಹಿರಿಯ ನಟ ಸತ್ಯಜಿತ್ ಅವರ ಪುತ್ರಿ ಅಖ್ತರ್ ಸ್ವಲೇಹಾ ಅವರು ತನ್ನ ತಂದೆಯ ವಿರುದ್ಧವೇ ತಿರುಗಿ ಬಿದ್ದಿದ್ದು ಸತ್ಯಜಿತ್ ಅವರ ಮೇಲೆ ದೂರು ದಾಖಲು ಮಾಡಿರುವ ವಿಷಯ ನೆನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಇನ್ನು ಮಗಳು ಕೊಟ್ಟಿರುವ ದೂರಿನಲ್ಲಿ ನನ್ನ ತಂದೆ ಹಣಕ್ಕಾಗಿ ಕಿ’ರುಕುಳ ನೀಡುತ್ತಿದ್ದು ಬೆ’ದರಿಕೆ ಕರೆಗಳನ್ನ ಮಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ಇನ್ನು ಇದರ ಬಗ್ಗೆ ಭಾವುಕರಾಗಿ ಮಾತನಾಡಿರುವ ಸತ್ಯಜಿತ್ ಅವರು ಹೇಳುವುದೇ ಬೇರೆ..ನನಗೀಗ ೬೮ವರ್ಷ ವಯಸ್ಸಾಗಿದ್ದು ಸಾ’ವು ಬಂದರೆ ಸಾಕು ಅಂತಿರುವ ನನಗೆ, ಈ ವಯಸ್ಸಿನಲ್ಲಿ ಹಣಕ್ಕಾಗಿ ಪೀ’ಡಿಸುತ್ತೇನೆಯೇ ? ನನ್ನ ಮರ್ಯಾದೆ ತೆಗೆದಿರುವ ಮಗಳು ನನಗೆ ಬೇಡ..ಅವಳು ನನ್ನ ಪಾಲಿಗೆ ಸ’ತ್ತು ಹೋಗಿದ್ದಾಳೆ ಎಂದು ಕಣ್ಣೀರು ಹಾಕಿದ್ದಾರೆ.

Advertisements

ನನ್ನ ಮಗಳು ನನ್ನ ವಿರುದ್ಧವೇ ಶ’ತ್ರುವಾಗಿ ನಿಲ್ಲುತ್ತಾಳೆ ಎಂದು ನಾನು ಕನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ. ಇನ್ನು ಪ್ರತೀ ತಿಂಗಳು ಮಗಳು ಒಂದು ಲಕ್ಷ ನೀಡುತ್ತಿದ್ದಳು ಎಂಬುದರ ಬಗ್ಗೆ ಮಾತನಾಡಿರುವ ನಟ ನನ್ನ ಚಿಕಿತ್ಸೆಗಾಗಿ ಯಾವುದೇ ಹಣ ನೀಡಿಲ್ಲ. ಮಗಳನ್ನ ವಿದೇಶದಲ್ಲಿ ಓದಿಸುವ ಸಲುವಾಗಿ ಮನೆ ಮಾರಿದ್ದೇನೆ, ಬಡ್ಡಿಗೆ ಸಾಲ ಮಾಡಿದ್ದೇನೆ, ರಾತ್ರಿ ಹಗಲು ದುಡಿದಿದ್ದೇನೆ. ಆದರೆ ನಾನು ದಾನಿಗಳು ನೀಡಿದ ಹಣ ಹಾಗೂ ಸನ್ಮಾನದಿಂದ ಬಂದ ಹಣದಿಂದ ಜೀವನ ನಡೆಸಿದ್ದೇನೆ ಎಂದು ಸತ್ಯಜಿತ್ ತಮ್ಮ ಮಗಳ ವಿರುದ್ಧ ಆ’ಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗಳಿಗೆ ಮದುವೆ ಮಾಡಿದ ಬಳಿಕ ಸಹಾಯ ಮಾಡಲು ಕೇಳಿದ್ದೇನೆಯೇ ವಿನಃ ಪ್ರತೀ ತಿಂಗಳು ಇಂತಿಷ್ಟೇ ಹಣ ಕೊಡು ಎಂದು ಕೇಳಿಲ್ಲ. ಆದರೆ ಯಾರೋ ನನ್ನ ಮಗಳನ್ನ ಉಪಯೋಗಿಸಿಕೊಂಡು ನನ್ನ ಮ’ರ್ಯಾದೆ ಬೀದಿಪಾಲು ಮಾಡುವ ಕೆಲಸ ಮಾಡಿದ್ದಾರೆ. ನನ್ನದು ಈಗ ಸಾ’ಯುವ ವಯಸ್ಸು. ಇಂತಹ ಸಮಯದಲ್ಲಿ ತಂದೆಯಾದವನು ಮಗಳು ಸುಖವಾಗಿರುವುದನ್ನ ಬಯಸುತ್ತಾನೆಯೇ ಹೊರತು, ಕನಸಿನಲ್ಲಿ ಕೂಡ ಮಕ್ಕಳಿಗೆ ಕೇ’ಡನ್ನ ಬಯಸುವುದಿಲ್ಲ. ಮಗಳ ವಿದ್ಯಾಭ್ಯಾಸದ ಸಲುವಾಗಿ ಮನೆ ಮಾರಿದ್ದೆ. ಹಾಗಾಗಿ ಮಗಳ ಬಳಿ ಮನೆ ಮಾಡಿಕೊಡುವಂತೆ ಕೇಳಿದ್ದೇನೆಯೇ ಹೊರತು ಹಣಕ್ಕಾಗಿ ತೊಂದರೆ ಕೊಟ್ಟಿಲ್ಲ ಎಂದು ಸತ್ಯಜಿತ್ ಹೇಳಿದ್ದಾರೆ.

ನಾನು ಒಂದು ಕಡೆ ಸಕ್ಕರೆ ಕಾ’ಯಿಲೆ ಸಮಸ್ಯೆ ಎದುರಿಸುತ್ತಿದ್ದು, ಜೊತೆಗೆ ಗ್ಯಾಂಗ್ರಿನ್ ಕಾರಣದಿಂದಾಗಿ ಕಾಲು ಕ’ಳೆದುಕೊಂಡು ಮನೆಯಲ್ಲಿ ಕುಳಿತಿರುವೆ. ಕಾಲು ಇಲ್ಲಾಂತ ಹೇಳಿ ನಾನು ಸಹಾಯ ಕೇಳಲ್ಲ. ದಾನಿಗಳೋ ಇಲ್ಲವೋ ಸಂಘ ಸಂಸ್ಥೆಗಳು ನನ್ನನ್ನ ಸನ್ಮಾನ ಮಾಡಿ ಇಂತಿಷ್ಟು ಹಣ ಅಂತ ಕೊಡುತ್ತಾರೆ. ಜೊತೆಗೆ ನನ್ನಿಬ್ಬರು ಮಕ್ಕಳು ದುಡಿಯುತ್ತಾರೆ. ಇದರಿಂದ ನಾನು ಜೀವನ ನಡೆಸುತ್ತಿದ್ದೇನೆ. ಆದರೆ ಯಾವುದೇ ರೀತಿ ನನ್ನ ಮಗಳಿಗೆ ಮುಂದೆ ಸಮಸ್ಯೆ ಉಂಟಾಗಬಾರದು ಎಂದು ಹೇಳಿಕೊಂಡು ಕಣ್ಣೀರು ಸುರಿಸಿದ್ದಾರೆ ನಟ ಸತ್ಯಜಿತ್.