Advertisements

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಶ್ರೀಧರ್ ಅವರ ಪತ್ನಿ ಮಗಳು ಹೇಗಿದ್ದಾರೆ ?ಮಾಡುತ್ತಿರುವುದೇನು ಗೊತ್ತಾ ?

Cinema

ಹಿರಿಯ ನಟ ಶ್ರೀಧರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ಅತ್ಯದ್ಭುತ ಕಲಾವಿದ ಜೊತೆಗೆ ಭರತನಾಟ್ಯ ಪ್ರವೀಣರು ಹೌದು. ನಟ, ಪೋಷಕ, ಪೌರಾಣಿಕ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುತ್ತಿದ್ದವರು. ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡಿದ್ದ ನಟ ಶ್ರೀಧರ್ ಅವರು ಕನ್ನಡ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದವರು. ಅವರೇ ನಿರ್ದೇಶನ ಮಾಡಿದ್ದ ೧೯೮೪ರಲ್ಲಿ ತೆರೆಗೆ ಬಂದ ‘ಅಮೃತ ಘಳಿಗೆ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟರು. ಸಾಂಸಾರಿಕ ಚಿತ್ರ ಹಾಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿಯನಯಿಸುತ್ತಿದ್ದ ನಟ ಶ್ರೀಧರ್ ಅವರು ಮಹಿಳಾ ಪ್ರೇಕ್ಷಕರ ಮೆಚ್ಚುಗೆಯ ನಟನಾಗಿದ್ದರು.

Advertisements

ಇಲ್ಲಿಯವರೆಗೂ ಕನ್ನಡದ ೬೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಶ್ರೀಧರ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಿಂದಿ ಚಿತ್ರಗಳಲ್ಲಿ ನಟಿಸಿ ಬಹುಭಾಷ ನಟ ಎನಿಸಿಕೊಂಡಿದ್ದಾರೆ. ಸಂತ ಶಿಶುನಾಳ ಶರೀಫ ಚಿತ್ರದ ನಟನೆಗೋಸ್ಕರ ಉತ್ತಮ ನಟನೆಂಬ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ತಮ್ಮ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಸಿನಿಮಾಗಳು ಮಾತ್ರವಲ್ಲದೆ ಧಾರಾವಾಹಿಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭರತನಾಟ್ಯ ನ್ರತ್ಯ ಪ್ರವೀಣರಾಗಿರುವ ನಟ ಶ್ರೀಧರ್ ಅವರು ನ್ರತ್ಯ ನಿರ್ದೇಶಕರು ಹೌದು. ಶ್ರೀಧರ್ ಅವರ ವೈಯುಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ಭರತನಾಟ್ಯ ನೃತ್ಯ ಪ್ರದರ್ಶನಕಾರರಾದ ಅನುರಾಧಾ ಅವರ ಜೊತೆ ೧೯೯೧ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇನ್ನು ಸ್ವತಃ ಭರತನಾಟ್ಯ ಕಲಾವಿದೆಯಾಗಿರುವ ಪತ್ನಿ ಅನುರಾಧಾರವರ ಜೊತೆ ಗೂಡಿ ನಟ ಶ್ರೀಧರ್ ಅವರು ಜೋಡಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ನ್ರತ್ಯ ಪ್ರದರ್ಶನ ನೀಡಿರುವುದು ವಿಶೇಷ. ಇನ್ನು ಈ ದಂಪತಿಗೆ ಅನಘ ಗೌರಿ ಎಂಬ ಮುದ್ದಾದ ಮಗಳಿದ್ದಾಳೆ. ಇನ್ನು ಮಗಳು ಕೂಡ ನ್ರತ್ಯಗಾರ್ತಿಯೇ. ತಮ್ಮ ತಂದೆ ತಾಯಿಯ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿತಿರುವ ಅನಘಾ ಗೌರಿ ಕಲಾಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕೆಂಬ ಆಶಯ ಹೊತ್ತಿದ್ದಾಳೆ. ಒಟ್ಟಿನಲ್ಲಿ ಭರತ ನಾಟ್ಯ ಕಲೆಯನ್ನ ಎತ್ತರಕ್ಕೆ ಬೆಳೆಸುವಲ್ಲಿ ಪರಿಶ್ರಮ ಪಡುತ್ತಿರುವ ನಟ ಶ್ರೀಧರ್ ಅವರ ಕುಟುಂಬ ಕಲಾಕ್ಷೇತ್ರದಲ್ಲಿ ಮತ್ತಷ್ಟು ಹೆಸರು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯ. ಸ್ನೇಹಿತರೇ, ನಟ ಶ್ರೀಧರ್ ನಟಿಸಿದ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದರ ಬಗ್ಗೆ ಅನಿಸಿಕೆ ತಿಳಿಸಿ..