ನಟಿ ಮಾಲಾಶ್ರೀ ಹಾಗೂ ಸುನೀಲ್ ಜೋಡಿಯಂದ್ರೆ ಅಬ್ಬಬ್ಬಾ ಅದೆಷ್ಟರ ಮಟ್ಟಿಗೆ ಹಿಟ್ ಕೊಟ್ಟ ಕಪಲ್ಸ್. ರಿಯಲ್ ಲೈಫ್ನಲ್ಲಿ ಸಹ ಈ ತಾರಾ ಜೋಡಿಗಳು ಕಪಲ್ಸ್ಗಳು ಜೋಡಿಯಾಗಲೀ ಅಂತ ಹರಸಿದವರೆಷ್ಟೋ.. ವಿಶ್ ಮಾಡಿದವರೆಷ್ಟೋ.. ಆದ್ರೆ, ಆ ಕನಸು ನಿಜವಾಗಲ್ಲೇ ಇಲ್ಲ.. ಅಷ್ಟಕ್ಕೂ ಅವತ್ತು ಆಗಿದ್ದೇನು ಗೊತ್ತಾ.. ಹೇಳ್ತೀವಿ ಕೇಳಿ ಸುನೀಲ್.. ಕರಾವಳಿಯ ಸ್ಪುರದ್ರೂಪಿ ನಟ.. ಅಭಿನಯ ಶಾರದೆಯ ಸುತ ಅನ್ನೋವಷ್ಟರಮಟ್ಟಿಗೆ ಸೂಪರ್ಹಿಟ್ ಸಿನಿಮಾಗಳನ್ನು ಕೊಟ್ಟ ಸುನೀಲ್ ಮಾಡಿದ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ರು. 90ರ ದಶಕದ ಬಹುಬೇಡಿಕೆಯ ನಟ ಒಬ್ಬ ಅತ್ಯದ್ಭುತ ಕಲಾವಿದ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
[widget id=”custom_html-3″]

ಬಹುಶಃ ಸುನೀಲ್ ಇಂದು ಬದುಕಿದ್ರೆ, ಅದೆಷ್ಟು ಸಿನಿಮಾಗಳಲ್ಲಿ ದಾಖಲೆ ಬರೆಯುತ್ತಿದ್ದರೇನೋ.. ಸುನೀಲ್ ಹಾಗೂ ಮಾಲಾಶ್ರೀ ಜೋಡಿಯಾಗಿ ಅಭಿನಯಿಸಿದ ಸಿನಿಮಾಗಳೆಲ್ಲವು ಸೂಪರ್ಹಿಟ್.. ಈ ಕ್ಯೂಟ್ ಕಪಲ್ಸ್ಗಳು ಮಾಡಿದ ಕಮಾಲ್ಗೆ ಎಲ್ಲರು ತಲೆದೂಗಿದ್ರು. ಸದಾ ಬ್ಯುಸಿ ಶೆಡ್ಯೂಲ್ನಲ್ಲಿದ್ದ ಈ ಜೋಡಿ ಶೂಟಿಂಗ್ನಿಂದ ಒಂದು ದಿನ ರಿಲಾಕ್ಸ್ ಆಗುವ ಬಗ್ಗೆ ಯೋಚನೆ ಮಾಡಿತ್ತು. ಈ ಹಿನ್ನಲೆ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸುನೀಲ್ ಮಾಲಾಶ್ರೀಗೆ ಆಹ್ವಾನ ಕೊಟ್ಟಿದ್ರು. ಚಿಕ್ಕೋಡಿಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯುತಿತ್ತು,.
[widget id=”custom_html-3″]

ಅದಕ್ಕೆ ಸುನೀಲ್ ಮುಖ್ಯ ಅತಿಥಿ ಸಹ ಆಗಿದ್ರು. ಈ ಹಿನ್ನಲೆ ಸುನೀಲ್ ಮಾಲಾಶ್ರೀ ಇಬ್ಬರು ಸಹ ಕಾರ್ಯಕ್ರಮ ಮುಗಿಸಿ ಆ ದಿನ ಅಲ್ಲೇ ಉಳಿದುಕೊಂಡು ಬೆಳಗ್ಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸೋ ಪ್ಲಾನ್ ಮಾಡಿದ್ರು. ಆದ್ರೆ ಸುನೀಲ್ ಕಾರ್ ಡ್ರೈವರ್ ಒತ್ತಾಯಿಸುತ್ತಾರೆ. ನನ್ನ ಮಗುವಿನ ಬರ್ತಡೇ ಇದೆ ನಾನು ಹೋಗಲೇಬೇಕು ಸಾರ್ ಅಂತ ಫೋರ್ಸ್ ಮಾಡ್ತಾರೆ. ಒಲ್ಲದ ಮನಸ್ಸಿಂದ ಸುನೀಲ್ ಸಹ ಒಪ್ಪಿಕೊಂಡು ಬೆಂಗಳೂರಿನತ್ತ ಪಯಣ ಬೆಳೆಸ್ತಾರೆ, ಆದ್ರೆ ಯಮಧರ್ಮರಾಯ ಟ್ರಕ್ ರೂಪದಲ್ಲಿ ನಸುಕಿನ ಜಾವದಲ್ಲಿ ಬಂದೇಬಿಟ್ಟ. ನಿದ್ದೆಯ ಮಂಪರಲ್ಲೋ, ಚಾಲಕನ ಅಚಾತುರ್ಯದಿಂದಾನೋ ಭೀ’ಕ’ರ ಅ’ಪಘಾ’ತ ಸಂಭವಿಸಿಯೇ ಬಿಟ್ಟಿತ್ತು. ಸುನೀಲ್ ಕಾರ್ ಚಾಲಕ ಅ’ಪಘಾ’ತದಲ್ಲಿ ಸ್ಪಾಟ್ ಡೆ’ತ್ ಆದ್ರೆ, ಸುನೀಲ್ ಒಂದು ಗಂಟೆ ಕಾಲ ಸಾ’ವು ಬದುಕಿನ ಮಧ್ಯೆ ಹೋರಾಡಿ ಉಸಿರು ಚೆಲ್ಲುತ್ತಾರೆ. ಮಾಲಾಶ್ರೀಯವರ ಪ್ರಾ’ಣ ಮಾತ್ರ ಕೂದಲೆಳೆಯ ಅಂತರದಲ್ಲಿ ಉಳಿದುಕೊಳ್ಳತ್ತೆ.