Advertisements

ಸೆಲೆಬ್ರಿಟಿಗಳು ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ? ಈ ಒಂದು ನಟನ ಮನೆ ಹೆಸರು ತುಂಬಾ ಅದ್ಭುತವಾಗಿದೆ..

Cinema

ಸೆಲೆಬ್ರಿಟಿಸ್ ಗಳ ಮನೆಗಳು ಯಾವ ಪ್ಯಾಲೇಸ್ ಗೂ ಕಡಿಮೆ ಇಲ್ಲ ಅನ್ನೋ ಹಾಗೆ ಇರುತ್ತವೆ. ನಮ್ಮ ಸ್ಯಾಂಡಲ್ವುಡ್ ನ ಸ್ಟಾರ್ ಆರ್ಟಿಸ್ಟ್ ಗಳು ಕೂಡ ತಮ್ಮ ಮನೆಯನ್ನು ಆಕರ್ಷಕವಾಗಿ ಕಟ್ಟಿಸಿದ್ದು ಕನಸಿನ ಮನೆಗೆ ಪ್ರೀತಿಯಿಂದ ಹೆಸರನ್ನು ಸಹ ಇಟ್ಟಿದ್ದಾರೆ ನೆಚ್ಚಿನ ನಟ ನಟಿಯರು ತಮ್ಮ ಮನೆಗೆ ಯಾವ ಹೆಸರನ್ನು ಮತ್ತು ಯಾಕೆ ಇಟ್ಟಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ.

[widget id=”custom_html-3″]

ದುನಿಯಾ ವಿಜಯ್ ಅವರಿಗೆ ದುನಿಯಾ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಹೆಸರನ್ನು ತಂದು ಕೊಟ್ಟಿದ್ದು ಇದಕ್ಕಾಗಿ ವಿಜಯ್ ಅವರು ಅವರ ಮನೆಗೆ ದುನಿಯಾ ಋಣ ಎಂದು ಹೆಸರಿಟ್ಟಿದ್ದಾರೆ. ಋಣ ಎನ್ನುವುದು
ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ರವರ ಹೆಸರಾಗಿದೆ. ಪುನೀತ್ ರಾಘಣ್ಣ ಸದಾಶಿವ ನಗರದಲ್ಲಿರುವ ಡಾಕ್ಟರ್ ರಾಜಕುಮಾರ್ ಅವರು ವಾಸಿಸುತ್ತಿದ್ದ ಮನೆಯನ್ನು ವೈಟ್ ಹೌಸ್ ಎಂದು ಕರೆಯುತ್ತಿದ್ದರು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇನ್ನು ಈ ಮನೆಯಲ್ಲಿ ಪುನೀತ್ ರಾಘಣ್ಣ ಇಬ್ಬರು ವಾಸಿಸುತ್ತಿದ್ದು ಹಳೆಮನೆ ಇದ್ದ ಜಾಗದಲ್ಲಿ ಫಾರಿನ್ ಶೈಲಿಯಲ್ಲಿ ಹೊಸ ಮನೆಯನ್ನು ವಿನ್ಯಾಸ ಮಾಡಿದ್ದು ಪುನೀತ್ ಮತ್ತು ರಾಘಣ್ಣ ಇಬ್ಬರಿಗೂ ಎರಡು ಮನೆಗಳು ಒಂದೆ ರೀತಿಯಲ್ಲಿ ಕಟ್ಟಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಇಲ್ಲಿಯವರೆಗೆ ಈ ಎರಡು ಮನೆಗಳಿಗೆ ಯಾವುದೇ ಹೆಸರು ಇಟ್ಟಿಲ್ಲ. ಆದರೆ ಅಭಿಮಾನಿಗಳು ಈ ಮನೆಯನ್ನು ದೊಡ್ಮನೆ ಎಂದೆ ಕರೆಯುತ್ತಾರೆ. ರಕ್ಷಿತ ಮತ್ತು ಪ್ರೇಮ್ ಕ್ರೇಜಿ ಕ್ವೀನ್ ರಕ್ಷಿತ ಮತ್ತು ಡೈರೆಕ್ಟರ್ ಪ್ರೇಮ್ ದಂಪತಿಗಳು 2009ರಲ್ಲಿ ಮಗ ಸೂರ್ಯ ಹುಟ್ಟಿದ ಮೇಲೆ ಚಂದ್ರ ಲೇಔಟ್ ನಲ್ಲಿ 3 ಅಂತಸ್ತಿನ ಮನೆ ಕಟ್ಟಿಸಿದ್ದು ಮನೆಗೆ ಮಗನ ಸೂರ್ಯನ ಹೆಸರನ್ನು ಇಟ್ಟಿದ್ದಾರೆ .ಜಗ್ಗೇಶ್ ನವರಸ ನಾಯಕ ಮಲ್ಲೇಶ್ವರಂ ನಲ್ಲಿ ಮೂರು ಅಂತಸ್ತಿನ ಅಂದದ ಮನೆ ಕಟ್ಟಿಸಿದ್ದು ಈ ಮನೆಗೆ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ ಇನ್ನು ಈ ಮನೆಗೆ ಪರಿಮಳ ಎಂಬ ಹೆಸರಿಡುವುದಕ್ಕೆ ಕಾರಣ ಜಗ್ಗೇಶ್ ಅವರು ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾಗಿದ್ದು ರಾಘವೇಂದ್ರ ಸ್ವಾಮಿಗಳ ಮೂಲ ಹೆಸರು ಸುಧಾ ಪರಿಮಳ ಆಚಾರ್ಯ ಆಗಿದ್ದು ಪ್ರೀತಿಸಿ ಮದುವೆಯಾದ ಹೆಂಡತಿಯ ಹೆಸರು ಕೂಡ ಪರಿಮಳ ಆಗಿರುವುದರಿಂದ ಇವೆರೆಡರನ್ನು ಸೇರಿಸಿ ಪರಿಮಳ ನಿವಾಸ ಎಂದು ಹೆಸರಿಟ್ಟಿದ್ದಾರೆ.

[widget id=”custom_html-3″]

ಶಿವರಾಜಕುಮಾರ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮನೆಗೆ ದೊಡ್ಮನೆ ಎಂಬ ಹೆಸರು ನಿಜಕ್ಕೂ ಸೂಟ್ ಆಗುತ್ತೆ ಇವರ ಮನೆ ಸುಮಾರು ಮುಕ್ಕಾಲು ಎಕರೆ ಜಾಗದಲ್ಲಿದ್ದು ಈ ಮನೆಗೆ ಶ್ರೀಮುತ್ತು ಎಂದು ಹೆಸರಿಟ್ಟಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರ ಮೂಲ ಹೆಸರು ಮುತ್ತುರಾಜ್ ಆಗಿದ್ದು ಮನೆಗೆ ಅಪ್ಪನ ಹೆಸರಿಟ್ಟಿದ್ದಾರೆ ನಮ್ಮ ಸೆಂಚುರಿಸ್ಟಾರ್. ರೆಬೆಲ್ ಸ್ಟಾರ್ ಅಂಬರೀಶ್ ಅಂಬರೀಶ್ ಅವರ ಮನೆ ಕತ್ರಿಗುಪ್ಪೆ ಅಲ್ಲಿದ್ದು ಈ ಮನೆ ಅಂಬರೀಶ್ ಅವರು ಪ್ರೀತಿಯಿಂದ ಕಟ್ಟಿಸಿದ ಮನೆಯಾಗಿದ್ದು ಅಂಬರೀಶ್ ಅವರ ಮರಣದ ನಂತರ ಈ ಮನೆಗೆ ಗೃಹಪ್ರವೇಶ ಮಾಡಲಾಗಿದೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಇವರು ಪ್ರೀತಿಯಿಂದ ಈ ಮನೆಗೆ ಅಂಬಿ ಮನೆ ಎಂದು ಹೆಸರಿಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಅವರು ಪುಟ್ಟೇನಹಳ್ಳಿಯಲ್ಲಿ ಮನೆ ಕಟ್ಟಿಸಿದ್ದು ಅಪ್ಪನ ಆಸೆಯಂತೆ ಸುದೀಪ್ ಅವರು ಹೆಂಡತಿ-ಮಕ್ಕಳೊಂದಿಗೆ ಈಗಲೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದು ಈ ಮನೆಗೆ ಸುದೀಪ್ ಅವರ ತಂದೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ ಇನ್ನು ಶ್ರೀನಿಧಿಯೆಂದು ಹೆಸರು ಇಡುವುದಕ್ಕೆ ಕಾರಣ ಸುದೀಪ್ ಅವರ ತಂದೆ ತಾಯಿ ಇಬ್ಬರು ಕೂಡ ವೆಂಕಟೇಶ್ವರನ ಪರಮ ಭಕ್ತರಾಗಿದ್ದು ಮನೆಗೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ.

[widget id=”custom_html-3″]

ರವಿಚಂದ್ರನ್ ಕ್ರೇಜಿಸ್ಟಾರ್ ಅವರ ತಂದೆ ಎನ್ ವೀರಸ್ವಾಮಿ ಅವರು ಅವರು ಕಟ್ಟಿಸಿರುವ ಮನೆಗೆ ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ ಎಂದು ಹೆಸರಿಟ್ಟಿದ್ದಾರೆ. ನಟಿ ತಾರಾ ಅವರು ಅವರ ಮನೆಗೆ ತಾರಾ ಅನುರಾಧ ಚಿಗುರು ಎಂದು ಹೆಸರಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜರಾಜೇಶ್ವರಿ ನಗರದಲ್ಲಿ ಹೊಸದಾಗಿ ಮನೆ ಕಟ್ಟಿಸಿದ್ದು ವಿಘ್ನವಿನಾಯಕನ ಮೇಲೆ ಅಪಾರ ನಂಬಿಕೆ ಇರುವ ಗಣೇಶ್ ಅವರು ತಮ್ಮ ಮನೆಗೆ ಗಣಪ ಎಂದು ಹೆಸರಿಟ್ಟಿದ್ದಾರೆ ಗಣೇಶ್ ಅವರ ಕೆಲವು ಆಪ್ತರು ಗಣೇಶ್ ಅವರನ್ನು ಗಣಪ ಎಂದೇ ಕರೆಯುತ್ತಾರೆ . ರಿಯಲ್ ಸ್ಟಾರ್ ಉಪೇಂದ್ರ ರವರು ಅವರ ಮನೆಗೆ ಸೂ ಮನೆ ಎಂದು ಹೆಸರಿಟ್ಟಿದ್ದು ಎಸ್ ಎನ್ನುವುದು ಇವರ ಬ್ರದರ್ ಸುಧೀಂದ್ರ ಅವರ ಹೆಸರಾಗಿದ್ದು ಯೂ ಎನ್ನುವುದು ಉಪೇಂದ್ರ ಎಂದಾಗಿದ್ದು ಸೂ ಮನೆ ಎಂದು ಇಟ್ಟಿದ್ದಾರೆ.

[widget id=”custom_html-3″]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜಾಜಿನಗರದಲ್ಲಿ ಅಂದದ ಮನೆಯನ್ನು ಕಟ್ಟಿಸಿದ್ದು ಮನೆಗೆ ತೂಗುದೀಪ ನಿಲಯ ಎಂದು ಹೆಸರಿಟ್ಟಿದ್ದಾರೆ. ತೂಗುದೀಪ ಎನ್ನುವುದು ತಂದೆಯ ಹೆಸರಾಗಿದ್ದು ಫಾರ್ಮ್ ಹೌಸ್ ಗೂ ಕೂಡ ತೂಗುದೀಪ ಎಂದೇ ಹೆಸರಿಟ್ಟಿದ್ದಾರೆ. ವಿನೋದ್ ಪ್ರಭಾಕರ್ ಅವರ ತಂದೆ ಟೈಗರ್ ಪ್ರಭಾಕರ್ ಅವರು ಕಟ್ಟಿಸಿದ ಮನೆಯಲ್ಲಿ ವಾಸವಿದ್ದು ಈ ಮನೆಗೆ ಟೈಗರ್ ಪ್ರಭಾಕರ್ ಎಂದು ಹೆಸರಿಟ್ಟಿದ್ದಾರೆ. ಸೃಜನ್ ಲೋಕೇಶ್ ಅವರು ತಮ್ಮ ಮನೆಗೆ ಶಬರಿ ಎಂದು ಹೆಸರಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಹೊಸದಾಗಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಅಲ್ಲಿ ಎರಡು ಪ್ಲಾಟ್ ಗಳನ್ನು ಖರೀದಿಸಿದ್ದು ಇದು ಗಾರ್ಡ್ ಸ್ಟೇಡಿಯಂ ವಿಧಾನಸೌಧದ ಹತ್ತಿರ ಇದೆ.

[widget id=”custom_html-3″]