Advertisements

ನಟಿ ಅರುಣಾ ಬಾಲರಾಜ್ ಸೀರಿಯಲ್ ನಲ್ಲಿ ಖ್ಯಾತ ನಟಿಯಾಗಿ ಬೆಳೆಯಲು ಇವರೇ ಕಾರಣ! ಅವರ ಸುಂದರ ಕುಟುಂಬ ಹೇಗಿದೆ ನೋಡಿ..

Cinema Entertainment

ನಮಸ್ತೇ ಸ್ನೇಹಿತರೇ, ತಮ್ಮ ಅಮೋಘ ನಟನೆಯಿಂದ ಕನ್ನಡಿಗರ ಮನಸನ್ನ ಸೆಳೆದ ನಟಿ ಅರುಣಾ ಬಾಲರಾಜ್. ಧಾವಾಹಿಗಳ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಈ ನಟಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರನ್ನ ತನ್ನತ್ತ ಸೆಳೆದವರು. ಇನ್ನು ನಟಿ ಅರುಣಾ ಅವರು ಹುಟ್ಟಿ ಬೆಳೆದದ್ದು ಹಾಗೂ ಅವರ ಬಾಲ್ಯ ಶಿಕ್ಷಣವನ್ನ ಮುಗಿಸಿದ್ದು ಚನ್ನರಾಯಪಟ್ಟಣದಲ್ಲಿ. ಇನ್ನು ಚಿಕ್ಕಂದಿನಿಂದಲೇ ನಟನೆಯ ಕಡೆ ತುಂಬಾ ಆಕರ್ಷಿತರಾಗಿದ್ದ ಅರುಣಾ ಅವರು ಪದವಿ ಮುಗಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವಿಶೇಷ ಎಂದರೆ ನಟನೆಯ ಹಿನ್ನಲೆ ಇರುವ ಕುಟುಂಬಕ್ಕೆ ಅರುಣಾ ಅವರು ಸೊಸೆಯಾಗಿ ಹೋಗುತ್ತಾರೆ.

Advertisements

ಇನ್ನು ನಟಿ ಅರುಣಾ ಬಾಲರಾಜ್ ಅವರ ಮಾವನಾಗಿದ್ದ ಶ್ರೀನಿವಾಸ ಮೂರ್ತಿಯವರು ಹಲವಾರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಇನ್ನು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಅರುಣಾ ಅವರು ನಂಗೂ ನಟನೆ ಮಾಡುವ ಆಸಕ್ತಿ ಇದೆ, ಯಾವುದಾದರೂ ಧಾರಾವಾಹಿಯಲ್ಲಿ ಪಾತ್ರವೊಂದನ್ನ ಕೊಡಿಸಿ ಎಂದು ತಮ್ಮ ಮಾವನ ಬಳಿ ಕೇಳುತ್ತಾರೆ. ಇನ್ನು ಅದಾಗಲೇ ಮನ್ವಂತರ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದ ಮಾವ ಶ್ರೀನಿವಾಸ ಮೂರ್ತಿಯವರು ನನ್ನ ಸೊಸೆಗೊಂದು ಪಾತ್ರ ಕೊಡಿ ಎಂದು ಖ್ಯಾತ ನಿರ್ದೇಶಕ ಟಿಎನ್. ಸೀತಾರಾಮ್ ಅವರ ಬಳಿ ಮನವಿ ಮಾಡುತ್ತಾರೆ.

ಇನ್ನು ಅರುಣಾ ಬಾಲರಾಜ್ ಅವರ ನಟನೆಯ ವಿಡಿಯೊಗಳನ್ನ ನೋಡಿದ ನಿರ್ದೇಶಕ ಟಿಎನ್.ಸೀತಾರಾಮ್ ಅವರು ಅವರ ಮಾವ ನಟಿಸುತ್ತಿದ್ದ ಮನ್ವಂತರ ಧಾರಾವಾಹಿಯಲ್ಲೇ ಕೇವಲ ಒಂದು ದಿನದ ಪಾತ್ರಕ್ಕೆ ನಟಿಸಲು ಅವಕಾಶ ಮಾಡಿಕೊಡುತ್ತಾರೆ. ಸಿಕ್ಕ ಸದಾವಕಾಶವನ್ನ ಸದುಪಯೋಗ ಪಡಿಸಿಕೊಂಡ ಅರುಣಾ ಅವರು ಆ ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ಅಭಿನಯ ಮಾಡುತ್ತಾರೆ. ಬಳಿಕ ಇವರ ನಟನೆ ನೋಡಿ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಸೀರಿಯಲ್ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಅರುಣಾ ಬಾಲರಾಜ್. ಇವರ ಕುಟುಂಬದದ ವಿಷಯಕ್ಕೆ ಬಂದರೆ ಅರುಣಾ ಅವರು ತುಂಬಾ ಅದೃಷ್ಟವಂತರು.

ಹೌದು, ಸೊಸೆಯಿಂದಿರ ಮೇಲೆ ತಮ್ಮ ಅಧಿಕಾರ ಚಲಾಯಿಸುವ ಅತ್ತೆ ಮಾವ ಇರುವ ಈ ಕಾಲದಲ್ಲಿ ಸೊಸೆ ಅರುಣಾ ಅವರಿಗೆ ನಟಿಸಲು ಬೇಕಾದ ಎಲ್ಲಾ ಅವಕಾಶಗಳನ್ನ ಕಲ್ಪಿಸಿ ಅವರ ಕನಸನ್ನ ನನಸು ಮಾಡುವಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸಿದ್ದಾರೆ. ನಟಿ ಅರುಣಾ ಬಾಲರಾಜ್ ಅವರು ತಮ್ಮ ಅತ್ತೆ, ಮಾವ, ಮಗಳು ಹಾಗೂ ಗಂಡನ ಜೊತೆ ಮನೆಯ ಕೆಳಭಾಗದಲ್ಲಿ ವಾಸವಗಿದ್ದರೆ, ಅದೇ ಮನೆಯ ಮೊದಲ ಮಹಡಿಯಲ್ಲಿ ಅರುಣಾ ಅವರ ತಂದೆ ತಾಯಿ ವಾಸವಾಗಿದ್ದಾರೆ. ಇನ್ನುಕುಟುಂಬದವರೆಲ್ಲರೂ ಒಂದೇ ಕಡೆ ಇರುವ ಕಾರಣ ಅವರ ಆತ್ಮವಿಶ್ವಾಸ ಹೆಚ್ಚಾಗಿದ್ದು ಹೆಚ್ಚಾಗಿ ನಟನೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳಲು ಅರುಣಾ ಅವರಿಗೆ ಸಾಧ್ಯವಾಗಿದೆ. ಸ್ನೇಹಿತರೇ, ನಟಿ ಅರುಣಾ ಅವರು ನಟಿಸಿರುವ ಯಾವ ಧಾರವಾಹಿ ನಿಮಗೆ ತುಂಬಾ ಇಷ್ಟವಾಯಿತು ಎಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..