Advertisements

ಒಂದು ಕಾಲದ ಟಾಪ್ ನಟಿ ಭವ್ಯ ಅವರ ಗಂಡ ಯಾರು ಗೊತ್ತಾ ? ಅವರ ಮಗಳು ಈಗೇನು ಮಾಡುತ್ತಿದ್ದಾಳೆ ನೋಡಿ..

Cinema

ಸ್ನೇಹಿತರೇ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಗಳಾಗಿ ಮಿಂಚಿದ್ದ ಹಲವು ನಟಿಯರು ಈಗೇನು ಮಾಡುತ್ತಿದ್ದಾರೆ, ಅವರ ಕುಟುಂಬ ಹೇಗಿದೆ ಅನ್ನುವುದರ ಬಗ್ಗೆ ಮಾಹಿತಿ ಸಿಗುವುದು ತೀರಾ ಕಡಿಮೆ. ಅದೇ ರೀತಿ ೮೦ರ ದಶಕದ ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದವರಲ್ಲಿ ನಟಿ ಭವ್ಯ ಕೂಡ ಒಬ್ಬರು. ತುಂಬಾ ಕಡಿಮೆ ಸಮಯದಲ್ಲಿಯೇ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಭವ್ಯ. ಗ್ಲಾಮರ್ ಪಾತ್ರಗಳು ಸೇರಿದಂತೆ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ನಟಿ. ಇನ್ನು ಈಗಲೂ ಸಹ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನ ಮಾಡುತ್ತಿರುವ ಭವ್ಯ ಅವರ ಕುಟುಂಬ ಹೇಗಿದೆ, ಅವರ ಗಂಡ, ಮಕ್ಕಳು ಯಾರು ಎಂಬುದರ ಬಗೆ ಎಷ್ಟೋ ಜನರಿಗೆ ತಿಳಿದಿಲ್ಲ.

Advertisements

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾ ರಂಗದಲ್ಲೂ ನಟಿಸಿದ್ದಾರೆ ನಟಿ ಭವ್ಯ. 1983 ರಿಂದ 1992ರವರೆಗೆ ಚಂದನವನದಲ್ಲಿ ನಾಯಕಿ ನಟಿಯಾಗಿ ಮಿಂಚಿದ ಇವರು 2000ನೇ ಇಸವಿಯ ಬಳಿಕ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ನಿರ್ದೇಶನದ, ನಟ ಮುರಳಿ (ಕನ್ನಡ ಹಾಗೂ ತಮಿಳು ನಟ) ಅಭಿನಯದ ಪ್ರೇಮ ಪರ್ವ ಚಿತ್ರದ ಮೂಲಕ 1983ರಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ಇವರು ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಹಲವು ನಂತರ ಜೊತೆ ನಟಿಸಿದ್ದಾರೆ.

ಇನ್ನು ನಟಿ ಭವ್ಯ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರ ಪತಿಯ ಹೆಸರು ಮುಖೇಶ್ ಪಾಟೀಲ್ ಎಂದು. ಇವರು ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಇನ್ನು ನಟಿ ಭವ್ಯ ಅವರಿಗೆ ಮುದ್ದಾದ ಮಗಳಿದ್ದು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.. ಆದರೆ ತನ್ನ ಮಗಳನ್ನ ಸಿನಿಮಾ ಕ್ಷೇತ್ರದಿಂದ ದೂರವಿಟ್ಟಿರುವ ಕಾರಣ ಅವರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಇನ್ನು ಈಗ ನಟಿ ಭವ್ಯಾ ಅವರು ನಟನ ಶಾಲೆಯೊಂದನ್ನ ನಡೆಸುತ್ತಿದ್ದಾರೆ. ಇನ್ನು ಈಗ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕರಣ ಆಗಾಗ ಕಿರುತೆರೆ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿರುವ ನಟಿ ಭವ್ಯ ಅವರು ನೆಮ್ಮದಿಯಿಂದ ಕುಟುಂಬದ ಜೊತೆಗೆ ಜೀವನ ನಡೆಸುತ್ತಿದ್ದಾರೆ.