Advertisements

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ತಿಂಗಳಲ್ಲೇ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ..

Cinema

ನಮಸ್ತೇ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಫೇಮಸ್ ಆದವರು ನಟಿ ಮಯೂರಿ. ಕಿರುತೆರೆ ಮಾತ್ರವಲ್ಲದೆ ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಮಯೂರಿ ಬಳಿಕ ಕನ್ನಡದ ಹಲವಾರು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡರು. ಇನ್ನು ಜೂನ್ ೧೨ರಂದು ತಾನು ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಅರುಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಲಾಕ್ ಡೌನ್ ವೇಳೆ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದ ನಟಿ ಮಯೂರಿ ಈಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ.

Advertisements

ಹೌದು, ಮಕ್ಕಳ ದಿನಾಚರಣೆ ಹಾಗೂ ದೀಪಾವಳಿಯ ಈ ಶುಭ ಸಂಧರ್ಭದಲ್ಲಿ ತಾನು ತಾಯಿಯಾಗುತ್ತಿರುವ ಗುಡ್ ನ್ಯೂಸ್ ನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ಇದ್ದ ಕಾರಣ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ತುಂಬಾ ಸರಳವಾಗಿ ನಟಿ ಮಯೂರಿ ತನ್ನ ಬಹುಕಾಲದ ಗೆಳೆಯ ಅರುಣ್ ಅವರ ಜೊತೆ ಮದುವೆ ಮಾಡಿಕೊಂಡಿದ್ದರು. ಈಗಾಗಲೇ ೫ ತಿಂಗಳ ಗರ್ಭಿಣಿಯಾಗಿರುವ ನಟಿ ಮಯೂರಿ ಫೋಟೋಶೂಟ್ ಮಾಡಿಸಿದ್ದು ತುಂಬಾ ಮುದ್ದಾಗಿ ಕಂಗೊಳಿಸಿದ್ದಾರೆ.

ಬಾಲ್ಯದಿಂದಲೂ ಪರಿಚಯವಿರುವ ಅರುಣ್ ಹಾಗೂ ನಟಿ ಮಯೂರಿಯವರ ನಡುವೆ ಹತ್ತು ವರ್ಷದ ಪ್ರೀತಿಯ ಸಂಬಂಧ ಇದೆ. ಅರುಣ್ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ನಟಿ ಮಯೂರಿಯವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆಬರೆದುಕೊಂಡಿದ್ದಾರೆ.ಇದು ಹೊಸ ಆರಂಭ..ಇಬ್ಬರಿದ್ದ ಕುಟುಂಬವನ್ನ ನಮ್ಮ ಕಂದಮ್ಮ ಮೂರು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಆಪ್ತ ಸ್ನೇಹಿತರು ಹಾಗೂ ಅಭಿಮಾನಿಗಳು ನಟಿ ಮಯೂರಿಗೆ ಶುಭಾಶಯಗಳನ್ನ ತಿಳಿಸಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.