Advertisements

ಜನುಮದ ಜೋಡಿ ನಟಿ ಶಿಲ್ಪಾ ಈಗ ಏನು ಮಾಡುತ್ತಿದ್ದಾರೆ ಗೊತ್ತಾ ? ಅವರ ಮಗಳು ಪರೀಕ್ಷೆಯಲ್ಲಿ ತೆಗೆದ ಸ್ಕೋರ್ ಕೇಳಿದ್ರೆ ಬೆರಗಾಗ್ತೀರಾ !

Cinema

ಸ್ನೇಹಿತರೇ, ಹಲ್ಲು ಇದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ ಎಂಬ ಗಾದೆ ಮಾತಿದೆ. ಹಾಗೆಯೆ ಹೆಚ್ಚು ಹಣವಂತರಾಗಿರುವವರ ಮಕ್ಕಳು ಚೆನ್ನಾಗಿ ಓದುವುದಿಲ್ಲ ಎಂಬ ಮಾತಿದೆ. ಅದರಂತಯೇ ಸ್ಟಾರ್ ನಟ ನಟಿಯರ ಮಕ್ಕಳು ಕೂಡ ಶಿಕ್ಷಣದಲ್ಲಿ ತುಂಬಾ ಹಿಂದೆಯೇ ಇರುತ್ತಾರೆ. ಅವರಲ್ಲಿ ತುಂಬಾ ಹಣವಿರುವ ಕಾರಣ ಓದುವುದರಲ್ಲಿ ಹಿಂದೆ ಬೀಳುತ್ತಾರೆ ಎಂದು ಜನರು ಮಾತನಾಡಿಕೊಳ್ಳುವುದುಂಟು. ಆದರೆ ಎಲ್ಲರೂ ಆಗಿರುವುದಿಲ್ಲ. ಎಷ್ಟೋ ಸ್ಟಾರ್ ಗಳ ಮಕ್ಕಳು ಚೆನ್ನಾಗಿ ಓದಿ ಟಾಪ್ ರ್ಯಾಂಕಿಂಗ್ ನ್ನ ತೆಗೆದುಕೊಂಡಿರುತ್ತಾರೆ.

Advertisements

ಇನ್ನು ಹ್ಯಾಟ್ರಿಕ್ ಹೀರೊ ಶಿವಣ್ಣ ಅವರ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಜನುಮದ ಜೋಡಿ ಚಿತ್ರದಲ್ಲಿ ನಾಯಕಿ ನಟಿಯಾಗಿ ಮಿಂಚಿದ ಶಿಲ್ಪಾ ಅವರ ಮಗಳು ಎಷ್ಟು ಅಂಕಗಳನ್ನ ಪಡೆದುಕೊಂಡಿದ್ದಾರೆ ಗೊತ್ತಾ.? ಕೇರಳ ಮೂಲದವರಾದ ನಟಿ ಶಿಲ್ಪಾ ಅವಾರ್ಯ್ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದರೂ ಹೆಚ್ಚು ಪ್ರಖ್ಯಾತಿ ಸಿಕ್ಕಿದ್ದು ಕನ್ನಡದ ಚಿತ್ರಗಳಿಂದ. ಇನ್ನು ನಿರ್ಮಾಪಕರಾಗಿರುವ ರಂಜಿತ್ ಎಂಬುವರನ್ನ ವಿವಾಹವಾಗಿರುವ ನಟಿ ಶಿಲ್ಪಾ ಈಗ ಸಿನಿಮಾ ಹಾಗೂ ಕಿರುತೆರೆಯ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ನಟಿ ಶಿಲ್ಪಾ ತಮಿಳಿನ ಧಾರಾವಾಹಿಯೊಂದರಲ್ಲಿ ನಟಿಸುವುತ್ತಿರುವುದಲ್ಲದೆ ಅದರ ನಿರ್ಮಾಣದ ಕೆಲಸವನ್ನವು ಕೂಡ ತಾವೇ ನಿರ್ವಹಿಸುತ್ತಿದ್ದಾರೆ. ಇನ್ನು ಇವರಿಗೆ ಅವಂತಿಕಾ ಎಂಬ ಮುದ್ದಾದ ಮಗಳಿದ್ದು ತಿರುವನಂತಪುರದ ಪ್ರಸಿದ್ಧ ಕಾಲೇಜಿನಲ್ಲಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನ ತೆಗೆದುಕೊಂಡಿದ್ದು ಅತ್ತ್ಯುತ್ತಮ ಅಂಕಗಳನ್ನ ಗಳಿಸಿಕೊಂಡಿದ್ದಾರೆ. ಹೌದು, ಐಎಸ್ಸಿ ಸಿಲೆಬಸ್ ನ ಕಾಮರ್ಸ್ ನಲ್ಲಿ ಶೇ ೯೪ರಷ್ಟು ಅಂಕಗಳನ್ನ ಗಳಿಸಿರುವ ಅವಂತಿಕಾ ಇಡೀ ಕಾಲೇಜಿಗೆ ಟಾಪರ್ ಆಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಇಲ್ಲಿ ಒಂದು ವಿಶೇಷವೆಂದರೆ ಸೆಲೆಬ್ರೆಟಿಗಳ ಮಕ್ಕಳು ೯೦ ಪರಸೆಂಟ್ ಗಿಂತ ಹೆಚ್ಚು ಅಂಕಗಳನ್ನ ತೆಗೆದು ಟಾಪರ್ ಆಗುವುದು ತುಂಬಾ ಅಪರೂಪವೇ ಸರಿ. ಇನ್ನು ನಟಿ ಶಿಲ್ಪಾರವರ ಇಡೀ ಕುಟುಂಬ ಸಿನಿಮಾ ಹಾಗೂ ಕಿರುತೆರೆಯ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ ಆತ್ತ ಕಡೆ ಗಮನ ಕೊಡದ ಅವಂತಿಕಾ, ಅದರಲ್ಲೂ ಐಎಸ್ಸಿ ಸಿಲೆಬಸ್ ನ ಪರೀಕ್ಷೆಯಲ್ಲಿ ಟಾಪ್ ರಾಂಕ್ ತೆಗೆದುಕೊಳ್ಳುವುದರ ಮೂಲಕ ನಟಿ ಶಿಲ್ಪಾ ಹಾಗೂ ಅವರ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.