ನಮಸ್ತೆ ಸ್ನೇಹಿತರೆ, ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಜನರ ಮನಸ್ಸನ್ನು ಗೆದ್ದಿದ್ದವು. ಆ ಧಾರವಾಹಿಗಳು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಇಂತಹ ಧಾರವಾಹಿಗಳಲ್ಲಿ ರಂಗೋಲಿ ಹಾಗೂ ಬದುಕು ಧಾರವಾಹಿಗಳು ಕೂಡ ಕಂಡು ಬರುತ್ತವೆ.. ಇನ್ನೂ ಈ ಧಾರವಾಹಿಗಳಲ್ಲಿ ನಟಿಸಿದ ಪ್ರಮುಖ ಕಲಾವಿದರಲ್ಲಿ ನಟಿ ಸಿರಿ ಕೂಡ ಒಬ್ಬರು. ಅಂದು ಅಷ್ಟಾಗಿ ಡಿಜಿಟಲ್ ಇಲ್ಲದಿರುವುದರಿಂದ ಅಂದಿನ ಕಿರುತೆರೆಯ ನಟಿಯರು ಪೇಮಸ್ ಕೂಡ ಇರಲಿಲ್ಲ.. ಅಂತಹ ಕಾಲದಲ್ಲಿ ಜನರ ಮನೆ ಮಾತಾಗಿದ್ದರು ಈ ನಟಿ. ಈ ನಟಿ ರಂಗೋಲಿ ಹಾಗು ಬದುಕು ಧಾರವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು..

ಆದರೆ ಇದೀಗ ಇವರು ಕಿರುತೆರೆಯಲ್ಲಿ ಕಾಣುತ್ತಿಲ್ಲ. ಹಾಗಾದರೆ ಇವರು ಎಲ್ಲಿದ್ದಾರೆ, ಹೇಗಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ.. ಇದೀಗ ಸಿರಿ ಅಂದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ರಂಗೋಲಿ ಧಾರವಾಹಿಯ ಅಭಿ ಅಂದರೆ ಧಾರವಾಹಿ ಪ್ರಿಯರಿಗೆ ಗೊತ್ತಾಗುತ್ತದೆ.. ಇವರು ಮೊದಲ ಬಾರಿಗೆ ತನ್ನ ತಂದೆಯ ಸ್ನೇಹಿತರಿಂದ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಅಂಬಿಕಾ ಎಂಬ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಷ್ಟೇ ಅಲ್ಲದೇ ತೆಲುಗು ಸ್ಟಾರ್ ಜೂನಿಯರ್ ಎಂಟಿಆರ್ ಅವರೊಂದಿಗೆ ನಟಿಸಲು ಅವಕಾಶ ಕೂಡ ಸಿಕ್ಕಿತು.. ಆದರೆ ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ಅವರು ತಂಗಿ ಪಾತ್ರದಲ್ಲಿ ನಟಿಸಿದರು.

ಅನಂತರ ಇವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದರೆ ಇವರಿಗೆ ಕೀರ್ತಿ ಹಾಗು ಹೆಸರು ತಂದುಕೊಟ್ಟಿದ್ದು ಕಿರುತೆರೆಯ ಧಾರವಾಹಿಗಳು. ಸಿರಿ ಅವರು ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೇ.. ತೆಲುಗು ಕಿರುತೆರೆಯಲ್ಲಿ ಕೂಡ ತಮ್ಮ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ. ಇವರು ಸುಮಾರು ಮೂವತ್ತಕ್ಕು ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಪ್ರತಿಯೊಂದು ಧಾರವಾಹಿಗಳು ಕೂಡ ಒಂದು ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿವೆ.. ಇನ್ನೂ ತಮ್ಮ ಅನುಭವಗಳನ್ನ ಹಂಚಿಕೊಂಡ ಅವರು ನಾನು ಕಲಾವಿದೆ ಆಗಬೇಕು ಎಂಬ ಆಸೆ ಇತ್ತು.

ಜನರು ಗುರುತಿಸುವ ಪಾತ್ರ ಮಾಡಬೇಕೆಂದು ಅಂದುಕೊಂಡಿದ್ದೆ.. ಈಗಾಗಿ ನನಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಮಧ್ಯೆ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಎಲ್ಲಿ ಒಳ್ಳೆಯ ಪಾತ್ರ ಸಿಗುತ್ತೋ ಅಲ್ಲಿ ಕೆಲಸ ಮಾಡಲು ಶುರುಮಾಡಿದೆ ಎಂದು ಹೇಳಿದ್ದಾರೆ.. ಇನ್ನೂ ಹಲವಾರು ಜನರು ಇಂದಿಗೂ ಕೂಡ ಹಳೆಯ ಧಾರವಾಹಿಗಳನ್ನ ಯೂಟ್ಯೂಬ್ ನಲ್ಲಿ ಹಾಕಿ ನಾವು ನೋಡುತ್ತೇವೆ ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಸಿರಿ ಅವರು ಹೇಳಿದ್ದಾರೆ. ಕರೋನ ಇರುವುದರಿಂದ ಯಾವ ಪ್ರಾಜೆಕ್ಟ್ ಗಳನ್ನ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಯಾವುದೇ ಅವಕಾಶಗಳು ನನ್ನನ್ನ ಹುಡುಕಿ ಬಂದಿಲ್ಲ ಎಂದು ಹೇಳಿದ್ದಾರೆ..